logo
ಕನ್ನಡ ಸುದ್ದಿ  /  ಕರ್ನಾಟಕ  /  Ganeshotsav 2024:ಸಾರ್ವಜನಿಕವಾಗಿ ಗಣೇಶಮೂರ್ತಿ ಕೂರಿಸುವವರು ಗಮನಿಸಬೇಕಾದ 10 ಅಂಶಗಳಿವು

Ganeshotsav 2024:ಸಾರ್ವಜನಿಕವಾಗಿ ಗಣೇಶಮೂರ್ತಿ ಕೂರಿಸುವವರು ಗಮನಿಸಬೇಕಾದ 10 ಅಂಶಗಳಿವು

Umesha Bhatta P H HT Kannada

Aug 28, 2024 02:34 PM IST

google News

ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವವರು ಕೆಲ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.

  •  Ganesha Festival ಗಣೇಶೋತ್ಸವದ ಸಡಗರ ಇನ್ನೇನು ಶುರುವಾಗಲಿದೆ. ಸಾರ್ವಜನಿಕವಾಗಿ ಗಣೇಶನ ಪ್ರತಿಷ್ಠಾಪನೆಯೂ ಜೋರಾಗಲಿದೆ. ಈ ರೀತಿ ಗಣೇಶನನ್ನು ಕೂರಿಸುವವರು ಈ ಹತ್ತು ಅಂಶಗಳನ್ನು ಪಾಲಿಸುವುದು ಒಳ್ಳೆಯದು.

ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವವರು ಕೆಲ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.
ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವವರು ಕೆಲ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.

ಗಣೇಶೋತ್ಸವ ಸಾರ್ವಜನಿಕವಾಗಿ ಕೂರಿಸುವುದು ಎಲ್ಲೆಡೆ ಸಾಮಾನ್ಯ. ಅದರಲ್ಲೂ ಗಣೇಶ ಹಬ್ಬ ಬರುವ ಒಂದು ತಿಂಗಳ ಮುಂಚೆಯೇ ತಯಾರಿ ಶುರುವಾಗುತ್ತದೆ. ಮೊದಲೆಲ್ಲೋ ಮನೆಯ ಆವರಣದಲ್ಲೋ, ಶಾಲೆಗಳಲ್ಲಿ ಗಣೇಶನನ್ನು ಕೂರಿಸುತ್ತಿದ್ದರು. ಈಗ ಒಂದೇ ಬೀದಿಯಲ್ಲಿ ಮೂರ್ನಾಲ್ಕು ಗಣೇಶ ಪೆಂಡಾಲ್‌ಗಳು ರಚನೆಯಾಗುತ್ತವೆ. ಒಂದು ಬಡಾವಣೆಯಲ್ಲಿ ಹತ್ತಾರು ಗಣೇಶ ಮಂಟಪಗಳು ಇರುತ್ತವೆ. ಈ ಕಾರಣದಿಂದಲೇ ಗಣೇಶೋತ್ಸವದ ಮೇಲೇ ನಿಗಾ ಇರಿಸಲು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ. ಸ್ಥಳೀಯ ಪುರಸಭೆ, ನಗರಸಭೆ ಇಲ್ಲವೇ ನಗರಪಾಲಿಕೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ, ವಿದ್ಯುತ್‌ ಇಲಾಖೆ ಕೂಡ ಗಮನ ಹರಿಸಲಿವೆ. ಈಗ ಏಕ ಗವಾಕ್ಷಿ ಯೋಜನೆ ಅಡಿ ಅನುಮತಿ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದನ್ನು ಪಾಲಿಸುವುದು ಕಡ್ಡಾಯವೂ ಹೌದು. ಈ ಬಾರಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವವರು ಈ ಹತ್ತು ಅಂಶಗಳನ್ನು ಗಮನಿಸುವುದು ಒಳ್ಳೆಯದು.

  1. ಗಣೇಶನನ್ನು ಕೂರಿಸುವ ಮುನ್ನ ವಿವಿಧ ಇಲಾಖೆಗಳ ಅನುಮತಿ ಕಡ್ಡಾಯ. ಅನುಮತಿ ಪಡೆಯದೇ ಇದ್ದರೆ ತೊಂದರೆಗೆ ಸಿಲುಕಬಹುದು. ಇದರಿಂದ ನಿಮ್ಮೂರಿನ ಸ್ಥಳೀಯಾಡಳಿತ ಇಲ್ಲವೇ ಏರಿಯಾ ಪೊಲೀಸ್‌ ಠಾಣೆಯಲ್ಲಿ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಿ.
  2. ಗಣೇಶೋತ್ಸವದ ಸಂದರ್ಭದಲ್ಲಿ ಬೇಕಾದ ಅನುಮತಿಗಳನ್ನು ಪಡೆದ ಪತ್ರಗಳನ್ನು ಕಡ್ಡಾಯವಾಗಿ ಒಂದೆಡೆ ಇಟ್ಟುಕೊಳ್ಳಿ. ಸುರಕ್ಷಿತವಾಗಿ ಇಟ್ಟುಕೊಂಡರೆ ಮುಂದಿನ ವರ್ಷದ ಅನುಮತಿ ವೇಳೆ ಉಪಯೋಗಕ್ಕೆ ಬರಬಹುದು.
  3. ಗಣೇಶನ ಹಬ್ಬದ ನೆಪದಲ್ಲಿ ಒತ್ತಡ ಹಾಕಿ ಚಂದಾ ವಸೂಲಿ ಮಾಡಬೇಡಿ. ಇದು ಕಾನೂನಿಗೆ ವಿರುದ್ದ. ಅಭಿಮಾನ, ಪ್ರೀತಿಯಿಂದಲೇ ಕೊಟ್ಟಷ್ಟು ಚಂದ ಪಡೆಯಲು ಪ್ರಯತ್ನಿಸಿ. ಇಲ್ಲದೇ ಇದ್ದರೆ ಕಾನೂನಿನ ಅಡಿ ತೊಂದರೆಯೂ ಆಗಬಹುದು.

    ಇದನ್ನೂ ಓದಿರಿ: Ganesha Festival; ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ಪಡೆಯೋದು ಈಗ ಸುಲಭ; ಏಕಗವಾಕ್ಷಿ ವ್ಯವಸ್ಥೆ ವಿವರ ನೀಡಿದ ಬಿಬಿಎಂಪಿ ಕಮಿಷನರ್‌
  4. ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲು ಚಂದಾ ಎತ್ತುತ್ತಿದ್ದರೆ ಪ್ರತಿಯೊಬ್ಬರಿಂದಲೂ ಪಡೆದ ಲೆಕ್ಕ ಇಡಿ. ಕಾರ್ಯಕ್ರಮ ಮುಗಿದ ನಂತರವೂ ಎಲ್ಲಾ ಲೆಕ್ಕವನ್ನು ಸಮಿತಿ ಮುಂದೆ ಇಡಿ. ಹಬ್ಬ ಹಣ ದುರುಪಯೋಗಕ್ಕೆ ದಾರಿ ಮಾಡಿಕೊಡದಿರಲಿ
  5. ಗಣೇಶ ಪರಿಸರ ಸ್ನೇಹಿಯಾಗಿರಬೇಕು ಎನ್ನುವುದು ಸರ್ಕಾರದ ನಿಯಮ.ಮಣ್ಣಿನ ಗಣೇಶ ಬಳಸಿ ಎನ್ನುವ ಸೂಚನೆಯನ್ನು ನೀಡಲಾಗಿದೆ. ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣೇಶನನ್ನು ಬಳಸಲೇಬೇಡಿ. ಪರಿಸರ ಇಲಾಖೆಯವರು ದಾಳಿ ಮಾಡಿ ಗಣೇಶನನ್ನು ಜಪ್ತಿ ಮಾಡಬಹುದು.
  6. ಗಣೇಶೋತ್ಸವ ಆಚರಣೆ ವೇಳೆ ನಿಮ್ಮ ಬಡಾವಣೆಯಲ್ಲಿ ಎಲ್ಲಾ ಸಮುದಾಯದವರೂ ಇರುತ್ತಾರೆ. ಗಣೇಶನನ್ನು ಕೂರಿಸುವುದು ಬಡಾವಣೆಯಲ್ಲಿ ಸೌಹಾರ್ದತೆಯ ಭಾಗವಾಗಬೇಕು. ಅದೇ ಗೊಂದಲಕ್ಕೆ ದಾರಿ ಮಾಡಿಕೊಡುವ ಮುನ್ನ ಎಚ್ಚರ ವಹಿಸಿ.
  7. ಗಣೇಶ ಹಬ್ಬ ಸುಸೂತ್ರವಾಗಿ ಆಗಲು ನಿಮ್ಮ ಬಡಾವಣೆಯ ಹಿರಿಯರು, ಅನುಭವಿಗಳ ಸಮಿತಿಯನ್ನು ರಚಿಸಿಕೊಳ್ಳಿ. ಅವರು ಖಂಡಿತವಾಗಿಯೂ ನೆನಪುಳಿಯುವ ಸಲಹೆಗಳನ್ನು ನೀಡಬಹುದು.

    ಇದನ್ನೂ ಓದಿರಿ: Ganesha Festival; ಮುಂಬಯಿಯ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ, ವಿಮಾ ರಕ್ಷಣೆ ಪಡೆಯುವಲ್ಲೂ ದಾಖಲೆ
  8. ನಿಮ್ಮ ಬಡಾವಣೆಗಳಲ್ಲಿ ಜೋರಾಗಿ ಶಬ್ದ ಮಾಡುತ್ತಾ ಇಲ್ಲವೇ ಹಾಡುಗಳನ್ನು ನಿರಂತರವಾಗಿ ಹಾಕಿ ಶಬ್ದ ಮಾಲಿನ್ಯಕ್ಕೆ ಅವಕಾಶ ಮಾಡಬೇಡಿ. ಹಿರಿಯರು, ಮಕ್ಕಳು, ಗರ್ಭಿಣಿಯರಿಗೆ ಅದು ಕಿರಿಕಿರಿ ಆಗದಿರಲಿ
  9. ರಸ್ತೆ ಮಧ್ಯೆದಲ್ಲಿ ಗಣೇಶನನ್ನು ಕೂರಿಸದೇ ಬದಿಯಲ್ಲಿ ಕೂರಿಸಿ. ಪೆಂಡಾಲ್‌ ಸುರಕ್ಷತೆಗೆ ಒತ್ತು ಕೊಡಿ. ವಿಶೇಷವಾಗಿ ವಿದ್ಯುತ್‌ ಮಾರ್ಗ ಇದ್ದರೆ ಗಮನಿಸಿ ಅನಾಹುತ ತಂದೊಡ್ಡಿಕೊಳ್ಳುವುದು ಬೇಡ
  10. ಥೀಮ್‌ ಬೇಸ್ಡ್‌ ಗಣೇಶನನ್ನು ಕೂರಿಸಲು ಪ್ರಯತ್ನಿಸಿ ಏನಾದರೂ ಸಂದೇಶವನ್ನು ನೀಡುವ ಪ್ರಯತ್ನ ಮಾಡಿ. ವಿಷಯಾಧಾರಿತ ಗಣೇಶ ಅರ್ಥಪೂರ್ಣವೂ ಹೌದು. ಇದರಿಂದ ಜನ ರಿಗೂ ಖುಷಿಯಾಗುತ್ತದೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ