logo
ಕನ್ನಡ ಸುದ್ದಿ  /  ಕರ್ನಾಟಕ  /  Ias Posting:ಕರ್ನಾಟಕ ವಾರ್ತಾ ಇಲಾಖೆ ಆಯುಕ್ತ ನಿಂಬಾಳ್ಕರ್‌ ವರ್ಗ, ಸುರಳ್ಕರ್‌ ನೇಮಕ

IAS Posting:ಕರ್ನಾಟಕ ವಾರ್ತಾ ಇಲಾಖೆ ಆಯುಕ್ತ ನಿಂಬಾಳ್ಕರ್‌ ವರ್ಗ, ಸುರಳ್ಕರ್‌ ನೇಮಕ

Umesha Bhatta P H HT Kannada

Mar 30, 2024 08:51 PM IST

google News

ವರ್ಗಗೊಂಡ ಹೇಮಂತ ನಿಂಬಾಳ್ಕರ್‌, ನೂತನ ಆಯುಕ್ತ ವಿಕಾಸ ಸುರಳಕರ್‌

    • ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. 
ವರ್ಗಗೊಂಡ ಹೇಮಂತ ನಿಂಬಾಳ್ಕರ್‌, ನೂತನ ಆಯುಕ್ತ ವಿಕಾಸ ಸುರಳಕರ್‌
ವರ್ಗಗೊಂಡ ಹೇಮಂತ ನಿಂಬಾಳ್ಕರ್‌, ನೂತನ ಆಯುಕ್ತ ವಿಕಾಸ ಸುರಳಕರ್‌

ಬೆಂಗಳೂರು: ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ( Commissioner, Department of Information & Public Relations, Karnataka State) ಆಯುಕ್ತರಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಐಎಎಸ್‌ ಅಧಿಕಾರಿ ವಿಕಾಸ ಸುರಳ್ಕರ್‌ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಲೋಕಸಭ ಚುನಾವಣೆ ಹಿನ್ನೆಲೆಯಲ್ಲಿ ಈ ವರ್ಗಾವಣೆ ಮಾಡಲಾಗಿದೆ. ಹೇಮಂತ್‌ ನಿಂಬಾಳ್ಕರ್‌ ಅವರ ಪತ್ನಿ ಡಾ.ಅಂಜಲಿ ನಿಂಬಾಳ್ಕರ್‌ ಅವರು ಕಾಂಗ್ರೆಸ್‌ ಪಕ್ಷದಿಂದ ಕೆನರಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವವರು ಇಲ್ಲವೇ ಅವರ ಸಂಬಂಧಿಗಳು ಚುನಾವಣೆ ಮುಗಿಯುವವರೆಗೂ ಪ್ರಮುಖ ಹುದ್ದೆಯಲ್ಲಿ ಇರಲು ಅವಕಾಶ ಇಲ್ಲ. ಈ ಕಾರಣದಿಂದ ನಿಂಬಾಳ್ಕರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಚುನಾವಣೆ ಆಯೋಗದ ಆದೇಶದ ಹಿನ್ನೆಲೆಯಲ್ಲಿಯೇ ಅವರನ್ನು ವರ್ಗ ಮಾಡಲಾಗಿದ್ದು, ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

ಎಡಿಜಿಪಿ ಹುದ್ದೆಯ ಐಪಿಎಸ್ ಅಧಿಕಾರಿಯಾಗಿರುವ ‌ ಹೇಮಂತ್‌ ನಿಂಬಾಳ್ಕರ್‌ ಅವರು ಕಳೆದ ಜೂನ್‌ನಲ್ಲಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

ನೂತನ ಆಯುಕ್ತ ವಿಕಾಸ ಸುರಳ್ಕರ್‌ ಅವರು ಈವರೆಗೂ ಬೃಹತ್‌ ಬೆಂಗಳೂರು ನಗರ ಪಾಲಿಕೆಯಲ್ಲಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದರು. ಮಹಾರಾಷ್ಟ್ರ ಮೂಲದ ವಿಕಾಸ ಸುರಳ್ಕರ್‌ ಖಡಕ್‌ ಅಧಿಕಾರಿ. ಈ ಹಿಂದೆ ಬಾಗಲಕೋಟೆ, ಯಾದಗಿರಿಯಲ್ಲಿ ಎಸಿ ಹಾಗೂ ಜಿಲ್ಲಾಪಂಚಾಯಿತಿ ಸಿಇಒ, ವಿಜಯಪುರ ಜಿಲ್ಲಾಪಂಚಾಯಿತಿ ಸಿಇಒ, ಕೊಪ್ಪಳ ಡಿಸಿಯಾಗಿ ಕೆಲಸ ಮಾಡಿದ್ದಾರೆ. ಕೆಪಿಎಸ್ಸಿ ಕಾರ್ಯದರ್ಶಿಯಾಗಿಯೂ ಕೆಲ ಅವಧಿಗೆ ಕಾರ್ಯನಿರ್ವಹಿಸಿದ್ದರು. ಆರು ತಿಂಗಳಿನಿಂದ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದರು.

ಸುರಳ್ಕರ್‌ ಅವರು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರ ಹುದ್ದೆಯ ಜತೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿಯೂ ಮುಂದುವರೆಯುವರು.

ಆದೇಶ ಹೊರ ಬೀಳುತ್ತಿದ್ದಂತೆ ಶನಿವಾರ ಸಂಜೆಯೇ ಹೇಮಂತ್‌ ನಿಂಬಾಳ್ಕರ್‌ ಅವರಿಂದ ವಿಕಾಸ ಸುರಳ್ಕರ್‌ ಅಧಿಕಾರ ವಹಿಸಿಕೊಂಡರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ