logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Awards: ನಾ.ಡಿಸೋಜಾರಿಗೆ ಪಂಪ ಪ್ರಶಸ್ತಿ, ತೇಲ್‌ತುಂಬ್ಡೆಗೆ ಬಸವ ಪುರಸ್ಕಾರ

Karnataka Awards: ನಾ.ಡಿಸೋಜಾರಿಗೆ ಪಂಪ ಪ್ರಶಸ್ತಿ, ತೇಲ್‌ತುಂಬ್ಡೆಗೆ ಬಸವ ಪುರಸ್ಕಾರ

Umesha Bhatta P H HT Kannada

Jan 25, 2024 05:21 PM IST

google News

ಕರ್ನಾಟಕ ಸರ್ಕಾರವು ಹಲವು ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿದೆ.

    • ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನೀಡಲಾಗುವ ಸಾಂಸ್ಕೃತಿಕ ಪ್ರಶಸ್ತಿಗಳಿಗೆ ಹಲವು ಸಾಧಕರನ್ನು ಆಯ್ಕೆ ಮಾಡಲಾಗಿದೆ. 
ಕರ್ನಾಟಕ ಸರ್ಕಾರವು ಹಲವು ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿದೆ.
ಕರ್ನಾಟಕ ಸರ್ಕಾರವು ಹಲವು ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿದೆ.

ಬೆಂಗಳೂರು: ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ವಲಯದಲ್ಲಿ ನೀಡುವ ನಾನಾ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿದೆ. ಅದರಲ್ಲೂ ಕೆಲವು ನಾಲ್ಕು ವರ್ಷ, ಮತ್ತೆ ಕೆಲವು ಎರಡು ವರ್ಷದ ಅವಧಿಯ ಪ್ರಶಸ್ತಿಗಳನ್ನು ಆಯ್ಕೆ ಸಮಿತಿಗಳು ಆಯ್ಕೆ ಮಾಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಜನವರಿ 31 ರಂದು ಪ್ರದಾನ ಮಾಡಲಿದೆ. ಹಿರಿಯ ಕಾದಂಬರಿಕಾರ ನಾ.ಡಿಸೋಜಾ ಅವರನ್ನು ಹಂಪಿ ಪ್ರಶಸ್ತಿಗೆ, ಮಹಾರಾಷ್ಟ್ರದ ಹೋರಾಟಗಾರ ಸಾಹಿತಿ ಆನಂದ್‌ ತೇಲ್ತುಂಬಡೆ ಅವರನ್ನು ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಡಾ.ಕೆ.ಮರುಳಸಿದ್ದಪ್ಪ, ಅಕ್ಕಮಹಾದೇವಿ ಪ್ರಶಸ್ತಿಗೆ ಡಾ.ವಸುಂಧರಾ ಭೂಪತಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳ ವಿವರ ಹೀಗಿದೆ

ಬಸವಪುರಸ್ಕಾರ: ಆನಂದ್‌ ತೇಲ್ತುಂಬಡೆ(2022-23), ಡಾ.ಎ.ಜಿ.ಮಹದೇವಪ್ಪ ಧಾರವಾಡ( 2023-24)

ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ: ಜಿನದತ್ತ ದೇಸಾಯಿ(2022-23), ಗುಜರಾತ್‌ನ ಗಾಂಧಿ (2023-24)

ಟಿ ಚೌಡಯ್ಯ ಪ್ರಶಸ್ತಿ: ನಿತ್ಯಾನಂದ ಹಳದಿಪುರ ಕೊಳಲು , ಮುಂಬೈ( 2022-23), ಶ್ರೀರಾಮುಲು ನಾದಸ್ವರ ಕೋಲಾರ(2023-24)

ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ಪ್ರಶಸ್ತಿ: ಪಂಡಿತ್‌ ಸೋಮನಾಥ ಮರಡೂರ ಧಾರವಾಡ(2022-23), ಡಾ.ನಾಗಮಣಿ ಶ್ರೀನಾಥ್‌ ಮೈಸೂರು(2023-24)

(ಈ ಪ್ರಶಸ್ತಿ ಆಯ್ಕೆಗೆ ಗೊ.ರು.ಚನ್ನಬಸಪ್ಪ ಅಧ್ಯಕ್ಷರಾಗಿದ್ದರು. ಪ್ರಶಸ್ತಿ 10 ಲಕ್ಷ ರೂ. ನಗದು ಒಳಗೊಂಡಿದೆ.)

ಪಂಪ ಪ್ರಶಸ್ತಿ: ನಾ.ಡಿಸೋಜಾ, ಸಾಗರ(2023-24)

ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ (2022–23), ಬೆಳಗಾವಿಯ ಚಂದ್ರಕಾಂತ ಪೋಕಳೆ (2023–24)

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್ (2022–23), ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ (2023–24)

ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ (2022–23), ಮಂಗಳೂರಿನ ಸದಾನಂದ ಸುವರ್ಣ (2023–24)

ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ (2022–23) , ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023–24)

ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಹಂಪಿ ಡಾ. ಮೊಗಳ್ಳಿ ಗಣೇಶ್ (2021–22), ಉತ್ತಮ ಕಾಂಬ್ಳೆ (2022–23), ದಾವಣಗೆರೆಯ ಬಿ.ಟಿ.ಜಾಹ್ನವಿ (2023–24)

( ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.)

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದ ಪ್ರಶಸ್ತಿ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಬೆಂಗಳೂರಿನ ಕೆ. ಮರುಳಸಿದ್ದಪ್ಪ (2020–21), ಬೆಳಗಾವಿಯ ಹಸನ್‌ ನಯೀಂ ಸುರಕೋಡ (2021–22), ಕೋಲಾರದ ಕೆ. ರಾಮಯ್ಯ (2022–23), ಬಳ್ಳಾರಿಯ ವೀರಸಂಗಯ್ಯ (2023–24)

ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020–21), ಮಂಡ್ಯದ ಡಾ. ಆರ್.ಸುನಂದಮ್ಮ (2021–22), ಕಲಬುರಗಿಯ ಮೀನಾಕ್ಷಿ ಬಾಳಿ (2022–23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023–24)

ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ (2021–22), ಮಂಗಳೂರಿನ ಡಾ. ಬಿ.ಶಿವರಾಮ ಶೆಟ್ಟಿ (2022–23)

(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಬಿ.ಟಿ.ಲಲಿತಾ ನಾಯಕ್ ಅವರು ಈ ಪ್ರಶಸ್ತಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.)

ಕಲಾ ಪ್ರಶಸ್ತಿ ವಿಭಾಗ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಮೈಸೂರಿನ ಜಿ.ಎಲ್.ಎನ್.ಸಿಂಹ (2022–23), ಕಲಬುರಗಿಯ ಬಸವರಾಜ್ ಎಲ್. ಜಾನೆ (2023–24)

ಜಾನಪದಶ್ರೀ ಪ್ರಶಸ್ತಿ(ವಾದನ): ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022–23), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (2023–24)

ಜಾನದಪಶ್ರೀ ಪ್ರಶಸ್ತಿ(ಗಾಯನ): ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022–23), ಚಿತ್ರದುರ್ಗದ ಹಲಗೆ ದುರ್ಗಮ್ಮ (2023–24)

(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ವಿ.ಟಿ.ಕಾಳೆ ಅವರು ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.)

ಸಂಗೀತ, ನೃತ್ಯ ಪ್ರಶಸ್ತಿ ವಿಭಾಗ

ನಿಜಗುಣ–ಪುರಂದರ ಪ್ರಶಸ್ತಿ: ಮೈಸೂರಿನ ಎಂ.ಕೆ.ಸರಸ್ವತಿ (2022–23), ಧಾರವಾಡದ ಅಕ್ಕಮಹಾದೇವಿ ಮಠ (2023–24)

ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸ್ತ್ರಿ (2022–23), ಮೈಸೂರಿನ ಕೃ.ರಾಮಚಂದ್ರ (2023–24)

ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022–23), ಬೆಂಗಳೂರಿನ ರೇವತಿ ನರಸಿಂಹನ್‌ (2023–24)

ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ಶಂಕರ್‌ (2022–23), ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ (2023–24)

(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ನರಸಿಂಹಲು ವಡವಾಡಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ