logo
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Express: ಕರ್ನಾಟಕಕ್ಕೆ ಒಂದೇ ದಿನ ಡಬಲ್‌ ವಂದೇ ಭಾರತ್‌ : ಡಿ 30ಕ್ಕೆ ಬೆಂಗಳೂರು-ಕೊಯಮತ್ತೂರು, ಮಂಗಳೂರು-ಗೋವಾ ಸೇವೆಗೆ ಚಾಲನೆ

Vande Bharat Express: ಕರ್ನಾಟಕಕ್ಕೆ ಒಂದೇ ದಿನ ಡಬಲ್‌ ವಂದೇ ಭಾರತ್‌ : ಡಿ 30ಕ್ಕೆ ಬೆಂಗಳೂರು-ಕೊಯಮತ್ತೂರು, ಮಂಗಳೂರು-ಗೋವಾ ಸೇವೆಗೆ ಚಾಲನೆ

Umesha Bhatta P H HT Kannada

Dec 28, 2023 01:26 PM IST

google News

ಬೆಂಗಳೂರು ಕೊಯಮತ್ತೂರು ಹಾಗೂ ಮಂಗಳೂರು ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಸಂಚಾರ ಸೇವೆ ಶನಿವಾರ ಶುರುವಾಗಲಿವೆ.

    • vande bharat updates ಕರ್ನಾಟಕದಲ್ಲಿ ಮೂರು ವಂದೇ ಭಾರತ್‌ ಸಂಚಾರವಿದೆ. ಶನಿವಾರ ಒಂದೇ ದಿನ ಎರಡು ಹೊಸ ರೈಲು ಸೇವೆ ಕರ್ನಾಟಕದಲ್ಲಿ ಶುರುವಾಗಲಿವೆ. ಅದರ ವಿವರ ಇಲ್ಲಿದೆ.
ಬೆಂಗಳೂರು ಕೊಯಮತ್ತೂರು ಹಾಗೂ ಮಂಗಳೂರು ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಸಂಚಾರ ಸೇವೆ ಶನಿವಾರ ಶುರುವಾಗಲಿವೆ.
ಬೆಂಗಳೂರು ಕೊಯಮತ್ತೂರು ಹಾಗೂ ಮಂಗಳೂರು ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಸಂಚಾರ ಸೇವೆ ಶನಿವಾರ ಶುರುವಾಗಲಿವೆ.

ಬೆಂಗಳೂರು: ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿ.

ಒಂದೇ ದಿನ ಕರ್ನಾಟಕದಲ್ಲಿ ಎರಡು ವಂದೇ ಭಾರತ್‌ ರೈಲುಗಳಿಗೆ ಚಾಲನೆ ಸಿಗುವ ಖುಷಿಯ ಕ್ಷಣ. ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯದಲ್ಲಿ ಒಟ್ಟು ಐದು ಹೊಸ ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಇದರಲ್ಲಿ ಕರ್ನಾಟಕದಲ್ಲೇ ಎರಡು ರೈಲುಗಳು ಸಂಚರಿಸುವುದು ವಿಶೇಷ.

ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಒಂದು ವಂದೇ ಭಾರತ್‌ ರೈಲು ಸಂಚಾರವನ್ನು ಆರಂಭಿಸಿದರೆ, ಮತ್ತೊಂದು ಭಾಗ ಕರ್ನಾಟಕದ ಕರಾವಳಿ ಭಾಗವನ್ನು ಸಂಪರ್ಕಿಸಲಿದೆ.

ಇದು ಮಂಗಳೂರಿನಿಂದ ಗೋವಾದ ಮಡಗಾಂವ್‌ಗೆ ಸಂಚರಿಸುವ ವಂದೇ ಭಾರತ್‌ ರೈಲು. ಶನೊವಾರದಂದು ಎರಡೂ ರೈಲುಗಳ ಸಂಚಾರಕ್ಕೆ ಚಾಲನಗೆ ಸಿಗಲಿದ್ದು, ಭಾನುವಾರದಿಂದ ಅಧಿಕೃತ ಸಂಚಾರ ಶುರುವಾಗಲಿದೆ.̇

ಬೆಂಗಳೂರಿಗೆ ತಮಿಳುನಾಡಿನ ಹೊಸೂರು, ಸೇಲಂ, ಧರ್ಮಪುರಿ. ಕೊಯಮತ್ತೂರು ಭಾಗದವರಿಗೆ ನಿಕಟ ಸಂಪರ್ಕವಿದೆ. ಅದು ವಹಿವಾಟು, ಶಿಕ್ಷಣ, ಆಸ್ಪತ್ರೆ.. ಹೀಗೆ ನಾನಾ ಕಾರಣಗಳಿಗೆ ಜನ ಬೆಂಗಳೂರಿಗೆ ಬಂದು ಹೋಗುತ್ತಾರೆ.

ಅವರ ಸಂಚಾರಕ್ಕೆ ಸಾಕಷ್ಟು ಬಸ್‌ ಹಾಗೂ ರೈಲು ಸೇವೆ ಇವೆ. ಆದರೂ ವಂದೇ ಭಾರತ್‌ ರೈಲು ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಬೇಕು ಎನ್ನುವ ಬೇಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೊಯಮತ್ತೂರಿಗೆ ಹೋಗಿ ಅದೇ ದಿನ ವಾಪಾಸ್‌ ಬರುವಂತೆ ವಂದೇ ಭಾರತ್‌ ರೈಲು ಸೇವೆ ಅಣಿಗೊಳಿಸಲಾಗಿದೆ.

ಈ ರೈಲು ತಿರುಪುರ್‌, ಈರೋಡ್‌, ಸೇಲಂ, ಧರ್ಮಪುರಿ ಹಾಗೂ ಹೊಸೂರಿನಲ್ಲಿ ನಿಲುಗಡೆಯಾಗುವ ನಿರೀಕ್ಷೆಯಿದೆ.

ಈ ರೈಲಿನ ಪ್ರಯಾಣದ ಸಮಯ, ನಿಲುಗಡೆ, ದರ ಹಾಗೂ ರೈಲಿನಲ್ಲಿ ಸಿಗುವ ಸೌಲಭ್ಯಗಳ ಕುರಿತು ಅಧಿಕೃತ ಪ್ರಕಟಣೆ ಹೊರ ಬರಬೇಕಿದೆ.

ಇದೇ ರೀತಿ ಮತ್ತೊಂದು ಕರಾವಳಿ ಭಾಗದಲ್ಲಿ ವಂದೇ ಭಾರತ್‌ ರೈಲಿಗೆ ಬೇಡಿಕೆಯಿತ್ತು. ಅದು ಮಂಗಳೂರಿನಿಂದ ಗೋವಾ ಹಾಗೂ ತಿರುವನಂತಪುರಂ. ಸದ್ಯ ತಿರುವನಂತಪುರಂನಿಂದ ಕಾಸರಗೋಡಿಗೆ ವಂದೇಭಾರತ್‌ ರೈಲು ಇದೆ. ಅದನ್ನು ಮಂಗಳೂರಿನಿಂದ ಆರಂಭಿಸುವ ಬೇಡಿಕೆಯಿದೆ.

ಇದರ ನಡುವೆ ಮಂಗಳೂರಿನಿಂದ ಉಡುಪಿ, ಕಾರವಾರ ಮಾರ್ಗವಾಗಿ ಗೋವಾಕ್ಕೆ ವಂದೇ ಭಾರತ್‌ ರೈಲು ಬೇಕು ಎನ್ನುವ ಬೇಡಿಕೆಯೂ ಇತ್ತು. ಅದಕ್ಕೂ ಒಪ್ಪಿಗೆ ದೊರೆತು ಡಿ. 30ರಂದೇ ಮಂಗಳೂರು- ಮಡಗಾಂವ್‌ ರೈಲು ಸಂಚಾರ ಶುರುವಾಗಲಿದೆ. ಈ ರೈಲು ಬೆಳಿಗ್ಗೆ ಮಂಗಳೂರಿನಿಂದ ಹೊರಟು ಉಡುಪಿ, ಕಾರವಾರದಲ್ಲಿ ನಿಲುಗಡೆಯೊಂದಿಗೆ ಗೋವಾಕ್ಕೆ ತೆರಳಲಿದೆ. ಅಲ್ಲಿಂದ ಮಧ್ಯಾಹ್ನ ಹೊರಟು ರಾತ್ರಿ ಹೊತ್ತಿಗೆ ಮಂಗಳೂರಿಗೆ ವಾಪಾಸಾಗಲಿದೆ. ಈ ರೈಲಿನ ವಿವರವೂ ಇನ್ನೂ ಅಧಿಕೃತವಾಗಿ ಪ್ರಕಟಗೊಳ್ಳುವುದು ಬಾಕಿಯಿದೆ. ರೈಲಿಗೆ ಚಾಲನೆ ದೊರೆತ ದಿನ ಇದರ ವಿವರ ಲಭ್ಯವಾಗಬಹುದು.

ಈಗಾಗಲೇ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ವಿವಿಧ ಭಾಗಗಳಿಗೆ ಒಟ್ಟು ಮೂರು ರೈಲು ಸಂಚರಿಸುತ್ತಿವೆ. ಮೊದಲು ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ ರೈಲಿನ ಸೇವೆ ಕಳೆದ ವರ್ಷ ಆರಂಭಗೊಂಡಿತ್ತು. ಇದಾದ ನಂತರ ಹೈದ್ರಾಬಾದ್‌ ಬೆಂಗಳೂರು ನಡುವೆ ಎರಡನೇ ರೈಲು ಆರಂಭಗೊಂಡಿತ್ತು. ಇದರೊಟ್ಟಿಗೆ ಬೆಂಗಳೂರಿನಿಂದ ಧಾರವಾಡಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ಶುರುವಾಗಿತ್ತು. ಈಗ ಅದನ್ನು ಬೆಳಗಾವಿವರೆಗೂ ವಿಸ್ತರಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ