logo
ಕನ್ನಡ ಸುದ್ದಿ  /  ಕರ್ನಾಟಕ  /  Valmiki Corporation Scam: ವಾಲ್ಮೀಕಿ ನಿಗಮ ಹಗರಣ, ಇಡಿ ವಶಕ್ಕೆ ಮಾಜಿ ಸಚಿವ ನಾಗೇಂದ್ರ ಪತ್ನಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣ, ಇಡಿ ವಶಕ್ಕೆ ಮಾಜಿ ಸಚಿವ ನಾಗೇಂದ್ರ ಪತ್ನಿ

Umesha Bhatta P H HT Kannada

Jul 17, 2024 01:25 PM IST

google News

ಇಡಿ ವಶದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ.

    • Scam news ಕರ್ನಾಟಕ ವಾಲ್ಮೀಕಿ ಅಭಿವೃದ್ದಿ ನಿಗಮದ ಭಾರೀ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರೊಟ್ಟಿಗೆ ಅವರ ಪತ್ನಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇಡಿ ವಶದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ.
ಇಡಿ ವಶದಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ.

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ( Karnataka Maharshi Valmiki ST Development Corporation) ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಹಣ ವರ್ಗಾವಣೆ ಹಗರಣದಲ್ಲೀ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ( B Nagendra) ಅವರ ನಂತರ ಪತ್ನಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ಬುಧವಾರ ಬೆಳಿಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಬಿ.ನಾಗೇಂದ್ರ ನಿವಾಸಕ್ಕೆ ತೆರಳಿದ ಜಾರಿ ನಿರ್ದೇಶನಾಲಯ ತಂಡ ಅವರ ಪತ್ನಿ ಮಂಜುಳಾ ನಾಗೇಂದ್ರ ಅವರನ್ನು ವಶಕ್ಕೆ ಪಡೆದಿದೆ. ಹಣ ವರ್ಗಾವಣೆ, ಬಳಕೆಗೆ ಸಂಬಂಧಿಸಿದಂತೆ ಮಂಜುಳಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂಜೆವರೆಗೂ ಇಡಿ ವಶದಲ್ಲಿ ಮಂಜುಳಾ ಅವರು ಇರಲಿದ್ದು, ವಿಚಾರಣೆಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಶಿವಮೊಗ್ಗ ಮೂಲದವರಾದ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಭಾರೀ ಹಗರಣ ಬಯಲಾಗಿತ್ತು. ಭಾರೀ ಮೊತ್ತವನ್ನು ನಿಗಮದಿಂದ ಖಾಸಗಿ ವ್ಯಕ್ತಿಗಳು, ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿತ್ತು. ಇದಕ್ಕೆ ಒತ್ತಡ ಹೇರಿದ್ದನ್ನು ತಾಳಲಾರದೇ ಚಂದ್ರಶೇಖರನ್‌ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ ಸಚಿವರಾಗಿದ್ದ ನಾಗೇಂದ್ರ ಸಹಿತ ಹಲವರ ಹೆಸರನ್ನು ಉಲ್ಲೇಖಿಸಿದ್ದರು. ಇದು ಭಾರೀ ಸದ್ದು ಮಾಡುತ್ತಿದ್ದಂತೆ ಸರ್ಕಾರ ಎಸ್‌ಐಟಿ ರಚಿಸಿತ್ತು. ಸಚಿವ ನಾಗೇಂದ್ರ ಕೂಡ ರಾಜೀನಾಮೆ ನೀಡಿದ್ದರು. ಇದರ ತನಿಖೆ ನಡೆಯುತ್ತಿರುವಾಗಲೇ ಇಡಿ ಕೂಡ ಪ್ರಕರಣ ದಾಖಲಿಸಿ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿತ್ತು. ಈಗ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವರನ್ನು ಈಗಾಗಲೇ ಬಂಧಿಸಲಾಗಿದೆ. ಬಹುತೇಕರು ಜೈಲು ಸೇರಿದ್ದು ಇನ್ನೂ ಹಲವರ ವಿಚಾರಣೆ ನಡೆದಿದೆ. ಹೈದ್ರಾಬಾದ್‌ನ ಸಂಸ್ಥೆಯೊಂದಿಗೆ ವರ್ಗಾಯಿಸಿದ್ದ ಹಣವನ್ನು ಹಿಂದಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಮಂಜುಳಾ ಅವರ ಪಾತ್ರ ಇದೆಯೇ, ಹಣ ವರ್ಗಾವಣೆ ಹಾಗೂ ವಹಿವಾಟು ವೇಳೆ ನಿಮ್ಮೊಂದಿಗೆ ನಾಗೇಂದ್ರ ಮಾತನಾಡಿದ್ದರೆ ಎನ್ನುವುದು ಸೇರಿದಂತೆ ಹಲವಾರು ಆಯಾಮದಲ್ಲಿ ಇಡಿ ವಿಚಾರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ