logo
ಕನ್ನಡ ಸುದ್ದಿ  /  ಕರ್ನಾಟಕ  /  Yuva Nidhi Scheme: ಯುವನಿಧಿ ಯೋಜನೆಗೆ ಉತ್ತಮ ಸ್ಪಂದನೆ, 19392 ಯುವಕರ ನೋಂದಣಿ: ಯಾವ ಜಿಲ್ಲೆಯಲ್ಲಿ ಎಷ್ಟಾಗಿದೆ ನೋಂದಣಿ

Yuva Nidhi Scheme: ಯುವನಿಧಿ ಯೋಜನೆಗೆ ಉತ್ತಮ ಸ್ಪಂದನೆ, 19392 ಯುವಕರ ನೋಂದಣಿ: ಯಾವ ಜಿಲ್ಲೆಯಲ್ಲಿ ಎಷ್ಟಾಗಿದೆ ನೋಂದಣಿ

HT Kannada Desk HT Kannada

Jan 01, 2024 08:20 PM IST

google News

ಯುವನಿಧಿಗೆ ನೊಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    • yuva nidhi Enrollment ಕರ್ನಾಟಕದಲ್ಲಿ ನಿರುದ್ಯೋಗಿ ಪದವೀಧರರಿಗೆ ನೀಡುವ ಯುವನಿಧಿ ಅಡಿ ನೀಡುವ ಆರ್ಥಿಕ ನೆರವಿಗೆ ಆರು ದಿನದಲ್ಲಿ 19392 ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಯುವನಿಧಿಗೆ ನೊಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುವನಿಧಿಗೆ ನೊಂದಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ನಿರುದ್ಯೋಗಿ ಪದವೀಧರರಿಗೆ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಉತ್ತಮ ಸ್ಪಂದನೆಯೇ ದೊರೆತಿದ್ದು. ಈವರೆಗೂ ಆರೇ ದಿನದಲ್ಲಿ 19392 ಮಂದಿ ನೊಂದಣಿ ಮಾಡಿಸಿಕೊಂಡಿದ್ದಾರೆ.

ಅತಿ ಹೆಚ್ಚು ಬೆಳವಾಗಿ ಜಿಲ್ಲೆಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದರೆ,. ನಂತರದ ಸ್ಥಾನದಲ್ಲಿ ಬೆಂಗಳೂರು ನಗರ, ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಪದವೀಧರರು ಇದ್ಧಾರೆ. ಅತಿ ಕಡಿಮೆ ಕೊಡಗು ಜಿಲ್ಲೆಯಲ್ಲಿ ನೊಂದಣಿಯಾಗಿರುವುದು ಕಂಡು ಬಂದಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ರಾಯಚೂರು, ಧಾರವಾಡ,ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಯುವಕರು ನೋಂದಣಿಗೆ ಮುಂದಾಗಿದ್ದರೆ, ಹಳೆ ಮೈಸೂರು ಭಾಗದ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕಡಿಮೆ ನೋಂದಣಿ ಆಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲೂ ನಿರೀಕ್ಷೆಯಷ್ಟು ನೋಂದಣಿ ಆಗಿಲ್ಲ.

ಯುವನಿಧಿ ಯೋಜನೆಗೆ ನೊಂದಣಿಗೆ ಇನ್ನೂ ಅವಕಾಶವಿದೆ. ಆದರೆ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಜನವರಿ 12 ರಂದು ಮೊದಲನೇ ಕಂತಿನ ಆರ್ಥಿಕ ನೆರವು ಸಿಗಲಿದೆ. ಆನಂತರ ನೋಂದಣಿ ಮಾಡಿಸಿಕೊಂಡವರಿಗೆ ಮುಂದಿನ ತಿಂಗಳು ನೆರವು ನೀಡಲಾಗುತ್ತದೆ.

2022-23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಮುಗಿಸಿ 180 ದಿನಗಳು ಕಳೆದರೂ ಉದ್ಯೋಗ ದೊರೆಯದೇ ಇರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬಯಸುವವರು ಸೇವಾಸಿಂಧು ವೆಬ್‌ಸೈಟ್‌ ಮೂಲಕ ಸಲ್ಲಿಕೆ ಮಾಡಬಹುದು. ಇದಲ್ಲದೇ ಕರ್ನಾಟಕ ಒನ್‌, ಗ್ರಾಮ ಒನ್‌, ಬಾಪೂಜಿ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು.

ಯಾವ ಜಿಲ್ಲೆ ನೋಂದಣಿ ಎಷ್ಟು

ಬಾಗಲಕೋಟೆ 1109

ಬಳ್ಳಾರಿ 675

ಬೆಳಗಾವಿ 2316

ಬೆಂಗಳೂರು ಗ್ರಾಮಾಂತರ 329

ಬೆಂಗಳೂರು ನಗರ 1974

ಬೀದರ್‌ 544

ಚಾಮರಾಜನಗರ 95

ಚಿಕ್ಕಬಳ್ಳಾಪುರ 554

ಚಿಕ್ಕಮಗಳೂರು 474

ಚಿತ್ರದುರ್ಗ 368

ದಕ್ಷಿಣ ಕನ್ನಡ 170

ದಾವಣಗೆರೆ 457

ಧಾರವಾಡ820

ಗದಗ 459

ಹಾಸನ 311

ಹಾವೇರಿ 545

ಕಲಬುರಗಿ 799

ಕೊಡಗು 54

ಕೋಲಾರ 531

ಕೊಪ್ಪಳ 638

ಮಂಡ್ಯ292

ಮೈಸೂರು377

ರಾಯಚೂರು 1126

ರಾಮನಗರ 166

ಶಿವಮೊಗ್ಗ844

ತುಮಕೂರು 904

ಉಡುಪಿ 101

ಉತ್ತರ ಕನ್ನಡ 482

ವಿಜಯನಗರ 583

ವಿಜಯಪುರ 973

ಯಾದಗಿರಿ 233

ಒಟ್ಟು 19392

-------

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ