logo
ಕನ್ನಡ ಸುದ್ದಿ  /  ಕರ್ನಾಟಕ  /  Spb Memorial Music Night: ಎಸ್ಪಿಬಿ ನೆನಪಿನಲ್ಲಿ ಬೆಂಗಳೂರಿನಲ್ಲಿ ಸಂಗೀತ ಸಂಜೆ; ಚೆನ್ನೈನಲ್ಲಿ ಸ್ಮಾರಕ, ವಸ್ತುಸಂಗ್ರಹಾಲಯ ನಿರ್ಮಾಣ

SPB Memorial Music Night: ಎಸ್ಪಿಬಿ ನೆನಪಿನಲ್ಲಿ ಬೆಂಗಳೂರಿನಲ್ಲಿ ಸಂಗೀತ ಸಂಜೆ; ಚೆನ್ನೈನಲ್ಲಿ ಸ್ಮಾರಕ, ವಸ್ತುಸಂಗ್ರಹಾಲಯ ನಿರ್ಮಾಣ

Umesha Bhatta P H HT Kannada

Nov 29, 2024 08:13 PM IST

google News

ಬೆಂಗಳೂರಿನಲ್ಲಿ ಎಸ್ಪಿ ನೆನಪಿನ ಸಂಗೀತ ಸಂಜೆ ಡಿಸೆಂಬರ್‌ 8 ರಂದು ನಡೆಯಲಿದೆ

    • SPB Memorial Music Night: ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯ ಚೆನ್ನೈನಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಸಂಗೀತ ಸಂಜೆ ನಡೆಸಲಾಗುತ್ತಿದೆ
    • ವರದಿ: ಎಚ್‌.ಮಾರುತಿ, ಬೆಂಗಳೂರು
ಬೆಂಗಳೂರಿನಲ್ಲಿ ಎಸ್ಪಿ ನೆನಪಿನ ಸಂಗೀತ ಸಂಜೆ ಡಿಸೆಂಬರ್‌ 8 ರಂದು ನಡೆಯಲಿದೆ
ಬೆಂಗಳೂರಿನಲ್ಲಿ ಎಸ್ಪಿ ನೆನಪಿನ ಸಂಗೀತ ಸಂಜೆ ಡಿಸೆಂಬರ್‌ 8 ರಂದು ನಡೆಯಲಿದೆ

SPB Memorial Music Night: ತಮಿಳುನಾಡಿನ ಚೆನ್ನೈ ನಲ್ಲಿ ನಿರ್ಮಾಣಗೊಳ್ಳಲಿರುವ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಡಿಸೆಂಬರ್ 8ರಂದು ನಗರದ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್ಸ್ ನಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್.ಪಿ. ಚರಣ್ ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡರು.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಇತರ ಗಾಯಕರು ಹಾಡಿ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಇದು ಕೆಲವ ಸ್ಮಾರಕ ಸ್ಥಾಪನೆ ಮಾತ್ರವಲ್ಲ, ಅವರಿಗೆ ಸಲ್ಲಿಸುವ ಗೌರವವೂ ಹೌದು ಎನ್ನುವುದು ಚರಣ್‌ ವಿವರಣೆ.

ಡಿ.8ರಂದು ನಡೆಯುವ ಸಂಗೀತ ಕಾರ್ಯಕ್ರಮದ ಮೂಲಕ ನಿಧಿಯನ್ನು ಸಂಗ್ರಹಿಸಿ ಅದನ್ನು ಸ್ಮಾರಕ, ವಸ್ತು ಸಂಗ್ರಹಾಲಯಕ್ಕೆ ನಿರ್ಮಾಣಕ್ಕೆ ಬಳಸಲಾಗುತ್ತದೆ. ಆಸಕ್ತರು ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. 5000, 3000 ಮತ್ತು 2000 ರೂ.ಗಳ ಟಿಕೆಟ್ ಲಭ್ಯವಿದೆ.

ಖ್ಯಾತ ವಾಸ್ತುಶಿಲ್ಪಿ ವಿನು ಡೇನಿಯಲ್ ಅವರು ಸ್ಮಾರಕದ ವಿನ್ಯಾಸ ಮಾಡಲಿದ್ದಾರೆ. ತಿರುವಳ್ಳುವರ್‌ ಜಿಲ್ಲೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಆಗಲೇ ಒಂದು ಸ್ಮಾರಕ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಕನ್ನಡದ ಗಾಯಕರು ಸ್ಮಾರಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಇಚ್ಚಿಸಿದ್ದು ಬೆಂಗಳೂರಿನಲ್ಲಿ ಸಂಗೀತ ಸಂಜೆ ನಡೆಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಚೆನ್ನೈ ನಲ್ಲಿ ಪ್ರತಿವಾರ ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನಪಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.

ಸ್ಮಾರಕವನ್ನು 12 ಹಳೆಯ ಟೈರ್ ಗಳಿಂದ ನಿರ್ಮಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಲ್ಪಿಗಳು ಕೆಲಸ ಆರಂಭಿಸಿದ್ದಾರೆ. ಗೋಡೆಗಳನ್ನು ನಿರ್ಮಿಸಲು ಟೈರ್ ಗಳನ್ನು ಬಳಕೆ ಮಾಡಲಾಗುತ್ತದೆ. ಹಳೆಯ ಟೈರ್ ಗಳನ್ನು ಮಣ್ಣಿನಿಂದ ತುಂಬಿ ಮಣ್ಣಿನಿಂದಲೇ ಪ್ಲಾಸ್ಟಿಂಗ್ ಮಾಡಲಾಗುತ್ತದೆ. ಇದರಿಂದ ಹೊರಗಡೆಗಿಂತ ಒಳಗೆ 5-6 ಡಿಗ್ರಿಗಳಷ್ಟು ಬಿಸಿ ಹವೆ ಕಡಿಮೆಯಾಗಲಿದೆ. ಯಾವುದೇ ಹವಾ ನಿಯಂತ್ರಣಗಳ ಅವಶ್ಯಕತೆ ಉಂಟಾಗದು ಎಂದು ಚರಣ್ ತಿಳಿಸಿದ್ದಾರೆ.

ಸ್ಮಾರಕದಲ್ಲಿ ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಆಂಪಿಥಿಯೇಟರ್, ಸಮಾಧಿ ಮತ್ತು ಕೆಫೆಟೇರಿಯಾ ಇರಲಿದೆ. ಸಂಗ್ರಹಾಲಯದಲ್ಲಿ ಖ್ಯಾತ ಬಾಲಿವುಡ್ ಗಾಯಕ ಮಹಮದ್ ರಫಿ ಅವರ ಫಿಯಟ್ ಕಾರನ್ನು ಪ್ರದರ್ಶಿಸಲಾಗುತ್ತದೆ. ಈ ಕಾರನ್ನು ಮಹಮದ್ ರಫಿ ಅವರ ಕುಟುಂಬ ಅಪ್ಪನಿಗೆ ನೀಡಿತ್ತು. ನಿಜ ಹೇಳಬೇಕೆಂದರೆ ಈ ಕಾರನ್ನು ಇಟ್ಟು ಕೊಳ್ಳಬೇಕೆಂಬುದು ಅಪ್ಪನ ಆಸೆಯೂ ಆಗಿತ್ತು ಎಂದು ಚರಣ್ ಹೇಳಿದರು.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನಪ್ರಿಯ ಹಾಡುಗಳನ್ನು ಅವರದ್ದೇ ಧ್ವನಿಯಲ್ಲಿ ಸಂಗೀತದ ಸಹಾಯ ಇಲ್ಲದೆ ಪ್ರದರ್ಶಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕನ್ನಡದ ಸಂಗೀತ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದರು. ಬೆಂಗಳೂರು ಕೇವಲ ಆರಂಭ ಮಾತ್ರ. ಈ ಸಂಗೀತ ಕಾರ್ಯಕ್ರಮ ಯಶಸ್ವಿಯಾದರೆ ಇತರ ನಗರಗಳಲ್ಲೂ ಆಯೋಜಿಸುತ್ತೇವೆ ಎಂದು ತಿಳಿಸಿದರು.

ಆಸಕ್ತರು ಬುಕ್ ಮೈ ಶೋ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. 5000, 3000 ಮತ್ತು 2000 ರೂ.ಗಳ ಟಿಕೆಟ್ ಲಭ್ಯವಿದೆ. ಇನ್ನೇಕೆ ತಡ, ಬುಕ್ ಮೈ ಶೋ ಆಪ್ ಓಪನ್ ಮಾಡಿ, ಟಿಕೆಟ್ ಕಾಯ್ದಿರಿಸಿ, ನಿಮ್ಮ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನಪ್ರಿಯ ಗೀತೆಗಳನ್ನು ನೆಚ್ಚಿನ ಗಾಯಕರಿಂದ ಕೇಳಿ ಆನಂದಿಸಬಹುದು. ಅವರಿಗೆ ಗೌರವವನ್ನೂ ಈ ಮೂಲಕ ಸಲ್ಲಿಸಬಹುದು.

ವರದಿ: ಎಚ್. ಮಾರುತಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ