logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರು; ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರು; ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ

Umesh Kumar S HT Kannada

Feb 23, 2024 10:22 AM IST

google News

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ನಡೆಸಿದ ಸಂದರ್ಭದ ವಿಡಿಯೋ ತುಣುಕಿನಿಂದ ತೆಗೆದ ಚಿತ್ರ.

  • ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ವ್ಯಕ್ತವಾಯಿತು. ಬೆದರಿಕೆ ಹಾಕಿದವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ನಡೆಸಿದ ಸಂದರ್ಭದ ವಿಡಿಯೋ ತುಣುಕಿನಿಂದ ತೆಗೆದ ಚಿತ್ರ.
ಮೈಸೂರು- ಅಯೋಧ್ಯಾ ಧಾಮ ರೈಲು ಸುಟ್ಟು ಹಾಕುವುದಾಗಿ ಬೆದರಿಸಿದ ಯುವಕರ ಬಂಧನಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರಯಾಣಿಕರ ಪ್ರತಿಭಟನೆ ನಡೆಸಿದ ಸಂದರ್ಭದ ವಿಡಿಯೋ ತುಣುಕಿನಿಂದ ತೆಗೆದ ಚಿತ್ರ.

ಬಳ್ಳಾರಿ: ಮೈಸೂರು- ಅಯೋಧ್ಯಾ ಧಾಮ ರೈಲಿನಲ್ಲಿ ಅನ್ಯಕೋಮಿನ ಯುವಕರು ರೈಲು ಬೋಗಿಗಳನ್ನು ಸುಟ್ಟುಹಾಕುವುದಾಗಿ ಬೆದರಿಸಿದರು ಎಂದು ಆರೋಪಿಸಿ ಪ್ರಯಾಣಿಕರು ಹೊಸಪೇಟೆ ರೈಲು ನಿಲ್ಧಾಣದಲ್ಲಿ ಪ್ರತಿಭಟನೆ ಮಾಡಿದರು.

ಅಯೋಧ್ಯಾ ಧಾಮ ರೈಲು ಗುರುವಾರ ರಾತ್ರಿ ಹೊಸಪೇಟೆ ತಲುಪಿದಾಗ ಯುವಕರು ರೈಲಿನಿಂದ ಇಳಿದ ಕೂಡಲೇ ಪ್ರಯಾಣಿಕರ ಪ್ರತಿಭಟನೆ ವ್ಯಕ್ತವಾಗಿದೆ. ಹೀಗಾಗಿ ರೈಲನ್ನು ಎರಡು ಗಂಟೆ ಕಾಲ ಅಲ್ಲೇ ನಿಲ್ಲಿಸಲಾಗಿತ್ತು. ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾ ನಿರತ ಪ್ರಯಾಣಿಕರು ಆಗ್ರಹಿಸಿದರು.

ಹೊಸಪೇಟೆ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ

ಅನ್ಯಕೋಮಿನ ಮೂವರು ಯುವಕರ ಕೃತ್ಯದಿಂದಾಗಿ ಅಯೋಧ್ಯಾ ಧಾಮ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿದ್ದರು. ಅವರು ಹೊಸಪೇಟೆಯಲ್ಲಿ ಇಳಿಯುತ್ತಿದ್ದಂತೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ಶುರುಮಾಡಿದರು.

ಇದರಿಂದಾಗಿ, ರೈಲು ನಿಲ್ದಾಣದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಎಸ್ಪಿ ಶ್ರೀಹರಿಬಾಬು ಹಾಗೂ ಇನ್ನಿತರ ಪೊಲೀಸ್‌ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಈ ವಿದ್ಯಮಾನದಿಂದಾಗಿ ರೈಲು ಎರಡು ತಾಸು ತಡವಾಗಿ ಪ್ರಯಾಣ ಮುಂದುವರಿಸಿತು. ಮುಂಜಾಗ್ರತಾ ಕ್ರಮವಾಗಿ ರೈಲಿನಲ್ಲಿ ಸ್ಥಳೀಯ ಪೊಲೀಸರು ಕೂಡ ತೆರಳಿದ್ದು, ಪ್ರಯಾಣಿಕರ ಭದ್ರತೆಗೆ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಮೈಸೂರು- ಅಯೋಧ್ಯಾ ಧಾಮ ವಿಶೇಷ ಆಸ್ತಾ ರೈಲಿನಲ್ಲಿ ನಡೆದ ಘಟನೆ

ಮೈಸೂರಿನಿಂದ ಅಯೋಧ್ಯಾ ಧಾಮಕ್ಕೆ ಹೊರಟ ವಿಶೇಷ ಆಸ್ತಾ ರೈಲಿನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿತ್ತು. ಅಯೋಧ್ಯೆ ರೈಲಿನ ಬೋಗಿ ಸಂಖ್ಯೆ ಎರಡರಲ್ಲಿ ಅನ್ಯಕೋಮಿನ ಮೂವರು ಯುವಕರು, ಅಯೋಧ್ಯೆಗೆ ತೆರಳುತ್ತಿದ್ದ ಪ್ರಯಾಣಿಕರ ಜೊತೆಗೆ ವಾಗ್ವಾದ ನಡೆಸಿದರು. ವಾಕ್ಸಮರದ ನಡುವೆ ಬೋಗಿಗೆ ಬೆಂಕಿ ಸುಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದು ಪ್ರಯಾಣಿಕರ ಆರೋಪ.

ಅವರು ಹೊಸಪೇಟೆಯಲ್ಲಿ ಇಳಿಯಲು ಮುಂದಾದಾಗ ಅವರನ್ನು ಇಳಿಯಲು ಬಿಡದೇ, ರೈಲು ಮುಂದೆ ಚಲಿಸದಂತೆ ಪದೇಪದೆ ಚೈನ್ ಎಳೆದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದ ಕೂಡಲೇ ಪ್ರಯಾಣಿಕರು ಆ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಆದರೆ, ಪೊಲೀಸರು ಅವರನ್ನು ವಿಚಾರಣೆ ನಡೆಸಿ ಯಾವುದೇ ಕ್ರಮ ತೆಗೆದುಕೊಳ್ಳದೇ ಕಳುಹಿಸಿದರು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಜೈಶ್ರೀರಾಮ್ ಘೋಷಣೆ ಕೂಗಿದ್ದರು. ಪೊಲೀಸರು ಅವರನ್ನು ಸಮಾಧಾನಗೊಳಿಸಿ ರೈಲು ಹತ್ತಿಸುತ್ತಿರುವ ದೃಶ್ಯದ ವಿಡಿಯೋದ ತುಣುಕು ವೈರಲ್ ಆಗಿದೆ.

ಮೈಸೂರು- ಅಯೋಧ್ಯಾ ಧಾಮ ವಿಶೇಷ ಆಸ್ತಾ ರೈಲು

ಮೈಸೂರು- ಅಯೋಧ್ಯಾ ಧಾಮ ವಿಶೇಷ ಆಸ್ತಾ ರೈಲು ಇದೇ ತಿಂಗಳು ನಾಲ್ಕರಂದು ಮೊದಲ ಸಂಚಾರ ನಡೆಸಿತ್ತು. ಫೆ.21ಕ್ಕೆ ಎರಡನೇ ಸಂಚಾರ ನಿಗದಿಯಾಗಿತ್ತು. ಈ ರೈಲು ಮೈಸೂರಿನಿಂದ ಹೊರಟು ಬೆಂಗಳೂರು, ತುಮಕೂರು, ಅರಸೀಕೆರೆ ಜಂಕ್ಷನ್‌, ಕಡೂರು, ಬೀರೂರು ಜಂಕ್ಷನ್‌ಗಳಲ್ಲಿ ನಿಂತು ಮುನ್ನಡೆಯಲಿದೆ. ಇದರಲ್ಲಿ 20 ಸ್ಲೀಪರ್‌ ಕೋಚ್‌ ಸೇರಿ ಒಟ್ಟು 22 ಬೋಗಿಗಳನ್ನು ಹೊಂದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ