logo
ಕನ್ನಡ ಸುದ್ದಿ  /  ಕರ್ನಾಟಕ  /  Namma Yatri: 'ನಮ್ಮ ಯಾತ್ರಿ' ಆ್ಯಪ್ ಮೂಲಕ 189 ಕೋಟಿ ರೂ. ಗಳಿಸಿದ ಬೆಂಗಳೂರಿನ ಆಟೋ ಚಾಲಕರು

Namma Yatri: 'ನಮ್ಮ ಯಾತ್ರಿ' ಆ್ಯಪ್ ಮೂಲಕ 189 ಕೋಟಿ ರೂ. ಗಳಿಸಿದ ಬೆಂಗಳೂರಿನ ಆಟೋ ಚಾಲಕರು

Meghana B HT Kannada

Oct 20, 2023 07:46 PM IST

google News

'ನಮ್ಮ ಯಾತ್ರಿ' ಆಟೋಗಳು

    • Namma Yatri App in Bengaluru: ಸಾರಿಗೆ ಇಲಾಖೆ ಮತ್ತು ಗ್ರಾಹಕರಿಗೆ ದುಬಾರಿ ಪ್ರಯಾಣ ಶುಲ್ಕ ವಿಧಿಸುವ ಓಲಾ-ಉಬರ್ ನಡುವಿನ ಜಗಳದ ನಡುವೆ ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿತ್ತು. ನಮ್ಮ ಯಾತ್ರಿಯು ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರನ್ನು ನೇರವಾಗಿ ಆಟೋ ಚಾಲಕರೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
'ನಮ್ಮ ಯಾತ್ರಿ' ಆಟೋಗಳು
'ನಮ್ಮ ಯಾತ್ರಿ' ಆಟೋಗಳು

ಬೆಂಗಳೂರಿನ ಆಟೋ-ಹೇಲಿಂಗ್ ಅಪ್ಲಿಕೇಶನ್ 'ನಮ್ಮ ಯಾತ್ರಿ' ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಇಲ್ಲಿಯವರೆಗೆ ನಗರದ ಆಟೋ ಚಾಲಕರಿಗೆ 189 ಕೋಟಿ ರೂಪಾಯಿ ಆದಾಯ ತಂದುಕೊಟ್ಟಿದೆ.

ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಬೆಂಬಲಿತ ಅಪ್ಲಿಕೇಶನ್ ಅನ್ನು ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ ಮತ್ತು ಉಬರ್‌ಗಳಿಗೆ ಸ್ಪರ್ಧೆಯಾಗಿ ಪ್ರಾರಂಭಿಸಲಾಯಿತು. ನಮ್ಮ ಯಾತ್ರಿಯು ಆಟೋ ಚಾಲಕರು ತಮ್ಮ ಶೂನ್ಯ-ಕಮಿಷನ್ ಮಾದರಿಯ ಮೂಲಕ ಸುಮಾರು 19 ಕೋಟಿ ರೂ. ಉಳಿತಾಯ ಮಾಡಿದ್ದಾರೆ.

ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ONDC ಉದ್ಯೋಗಿ ಟೀನಾ ಗುರ್ನಾನಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಚಾಲಕರು ಇಲ್ಲಿಯವರೆಗೆ ಒಟ್ಟಾಗಿ 189 ಕೋಟಿ ರೂ. ಗಳಿಸಿದ್ದಾರೆ. ಈ ಗಳಿಕೆಯ 100% ರಷ್ಟು ಗಣ ಶೂನ್ಯ ಕಮಿಷನ್ ಮಾದರಿಯ ಮೂಲಕ ಚಾಲಕರಿಗೆ ಸಿಗುತ್ತದೆ. ಮಧ್ಯವರ್ತಿಗಳಿಗೆ 10% ಕಮಿಷನ್‌ ಹೋಗುತ್ತಿತ್ತು ಅಂದುಕೊಂಡರೂ ನಮ್ಮ ಚಾಲಕರು 19 ಕೋಟಿ ಕಮಿಷನ್‌ ಉಳಿಸಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.

ಸಾರಿಗೆ ಇಲಾಖೆ ಮತ್ತು ಗ್ರಾಹಕರಿಗೆ ದುಬಾರಿ ಪ್ರಯಾಣ ಶುಲ್ಕ ವಿಧಿಸುವ ಓಲಾ-ಉಬರ್ ನಡುವಿನ ಜಗಳದ ನಡುವೆ ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿತ್ತು. ನಮ್ಮ ಯಾತ್ರಿಯು ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರನ್ನು ನೇರವಾಗಿ ಆಟೋ ಚಾಲಕರೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

Ola, Uber ಮತ್ತು Rapido 100 ಕ್ಕಿಂತ ಹೆಚ್ಚು ಶುಲ್ಕ ವಿಧಿಸಲು ಸರ್ಕಾರಿ ಸ್ಕ್ಯಾನರ್​ ಅಡಿಯಲ್ಲಿ ಬರುತ್ತಚೆ. ನಮ್ಮ ಯಾತ್ರಿ ದರಗಳು ಸರ್ಕಾರವು ನಿಗದಿಪಡಿಸಿದ ಬೆಲೆ ಪಟ್ಟಿಯನ್ನು ಆಧರಿಸಿವೆ. ಈ ಆ್ಯಪ್​ನಲ್ಲಿ 2 ಕಿಲೋ ಮೀಟರ್​ ವರೆಗೆ ಮಿನಿಮಮ್​ ಚಾರ್ಜ್​ 30 ರೂಪಾಯಿ ಆಗಿದೆ. 2ಕ್ಕಿಂತ ಹೆಚ್ಚು ಕಿಮೀ ಆದರೆ ಪ್ರತಿ ಕಿಮೀ ಗೆ 15 ರೂ ಚಾರ್ಜ್​ ಮಾಡಲಾಗುತ್ತದೆ. ಬುಕಿಂಗ್​ ಚಾರ್ಜ್​ 10 ರೂಪಾಯಿ ಆಗಿದೆ ಮತ್ತು ಚಾಲಕರು ಅದನ್ನು 30 ರೂ. ವರೆಗೆ ಹೆಚ್ಚಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ