logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime News: ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಲು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ

Bengaluru Crime News: ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಲು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ

HT Kannada Desk HT Kannada

Jul 09, 2024 12:12 PM IST

google News

ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಲು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ

    • ಈ ಹುಸಿ ಬಾಂಬ್‌ ಕರೆ ಮಾಡುವಾಗ ಮೆಹ್ದಿ ಮತ್ತು ಇಂದ್ರ ರಾಜ್ವಾರ್‌ ಇಬ್ಬರೂ ವಿಮಾನ ನಿಲ್ದಾಣದಲ್ಲೇ ಇದ್ದರು ಎಂದು ಸಿಸಿಟಿವಿ ಪರಿಶೀಲನೆಯ ನಂತರ ಗೊತ್ತಾಗಿದೆ.
ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಲು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ
ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಲು ಪೊಲೀಸರಿಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ

ಬೆಂಗಳೂರು: ಯುವತಿಯೊಬ್ಬರು ತಮ್ಮ ಬಾಯ್‌ಫ್ರೆಂಡ್‌ ಮುಂಬೈ ಗೆ ತೆರಳುವುದನ್ನು ತಡೆಯಲು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸ ಕ್ರಿಮಿನಲ್‌ ಕಾನೂನು ಜಾರಿಗೆ ಬರುವುದಕ್ಕೂ ಮುನ್ನ, ಅಂದರೆ ಜೂನ್‌ 25 ರಂದು ಈ ಘಟನೆ ನಡೆದಿದೆ. ಭಾರತೀಯ ದಂಡ ಸಂಹಿತೆ 501 (10ಬಿ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪುಣೆ ಮೂಲದ 29 ವರ್ಷದ ಇಂದ್ರ ರಾಜ್ವಾರ್‌ ಎಂದು ಗುರುತಿಸಲಾಗಿದೆ. ಈಕೆಯು ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಪ್ರಕಾರ ಮಹಿಳೆಯೊಬ್ಬರು ವಿಮಾನ ನಿಲ್ದಾಣದ ಸಹಾಯವಾಣಿಗೆ ಕರೆ ಮಾಡಿ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿರುವ ಮಿರ್‌ ರಾಜಾ ಮೆಹ್ದಿ ಎಂಬುವರು ಬ್ಯಾಗ್‌ನಲ್ಲಿ ಬಾಂಬ್‌ ಇದೆ. ನಾನು ಅವರ ಗರ್ಲ್‌ ಫ್ರೆಂಡ್‌ ಆಗಿದ್ದು ನನಗೆ ಈ ವಿಷಯ ಈ ತಿಳಿದಿದೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಪೊಲೀಸರು ಮೆಹ್ದಿ ಅವರನ್ನು ಅಮೂಲಾಗ್ರವಾಗಿ ತಪಾಸಣೆ ನಡೆಸಿದ್ದು, ಯಾವುದೇ ವಿನಾಶಕಾರಕ ವಸ್ತು ಪತ್ತೆಯಾಗಲಿಲ್ಲ. ನಂತರ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು.

ಈ ಹುಸಿ ಬಾಂಬ್‌ ಕರೆ ಮಾಡುವಾಗ ಮೆಹ್ದಿ ಮತ್ತು ಇಂದ್ರ ರಾಜ್ವಾರ್‌ ಇಬ್ಬರೂ ವಿಮಾನ ನಿಲ್ದಾಣದಲ್ಲೇ ಇದ್ದರು ಎಂದು ಸಿಸಿಟಿವಿ ಪರಿಶೀಲನೆಯ ನಂತರ ಗೊತ್ತಾಗಿದೆ. ಇವರಿಬ್ಬರೂ ಮುಂಬೈಗೆ ತೆರಳಲು ಪ್ರತ್ಯೇಕ ವಿಮಾನಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ್ದಾರೆ. ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಪಾಸಣೆ ನಡೆಸಿದಾಗ ಇಂದ್ರ ರಾಜ್ವಾರ್‌ ಅವರ ಮೊಬೈಲ್‌ ನಂಬರ್‌ನಿಂದ ಕರೆ ಬಂದಿರುವುದು ತಿಳಿದು ಬಂದಿದೆ. ನಂತರ ಪೊಲೀಸರು ಯುವತಿಯನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಯುವತಿ ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಈ ರೀತಿ ಕರೆ ಮಾಡಿದರೆ ಬಾಯ್‌ ಫ್ರೆಂಡ್‌ ಮುಂಬೈಗೆ ಹೋಗುವುದನ್ನು ತಡೆಯಬಹುದು ಎಂದು ಈ ರೀತಿ ಸಂಚು ರೂಪಿಸಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾರೆ. ಅವಶ್ಯಕತೆ ಕಂಡು ಬಂದಾಗ ಪೊಲೀಸ್‌ ಠಾಣೆಗೆ ಬರಬೇಕು ಎಂದು ತಾಕೀತು ಮಾಡಿ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿದ್ದಾರೆ.

ಕೌಟುಂಬಿಕ ಕಲಹ. ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ನೊಂದು ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿನಿಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್‌ ಆತ್ಮಹತ್ಯೆ ಮಾಡಿಕೊಂಡ ನರ್ಸಿಂಗ್‌ ವಿದ್ಯಾರ್ಥಿನಿ. ಇವರು ಬೆಂಗಳೂರಿನ ಜಾಲಹಳ್ಳಿಯ ಮದರ್‌ ಥೆರೆಸಾ ನರ್ಸಿಂಗ್‌ ಹೋಮ್‌ನಲ್ಲಿ ನರ್ಸಿಂಗ್‌ ಓದುತ್ತಿದ್ದರು. ಎರಡು ದಿನಗಳ ಹಿಂದೆ ಇವರು ಕಾಲೇಜಿನ ವಿದ್ಯಾರ್ಥಿನಿ ನಿಲಯದ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸ್ನೇಹಿತರು ‌ಕಾಲೇಜಿನಿಂದ ಹಾಸ್ಟೆಲ್‌ ಕೊಠಡಿಗೆ ಆಗಮಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದಿಂದ ನೊಂದು ದಿಯಾ ಮಂಡೋಲ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನನ್ನು ಕುಟುಂಬದವರಿಗೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ