Bengaluru floods: ಪ್ರತಿ ವಾರ್ಡಲ್ಲೂ ನಿವಾಸಿ ಕುಂದುಕೊರತೆ ವಿಭಾಗ; BBMPಗೆ ಕೋರ್ಟ್ ಸೂಚನ
Sep 07, 2022 05:48 PM IST
ಕರ್ನಾಟಕ ಹೈಕೋರ್ಟ್ (HT Archives)
- ಬೆಂಗಳೂರಿನ ಇಲ್ಲಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿರುವ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ತತ್‌ಕ್ಷಣವೇ ಕುಂದುಕೊರತೆ ವಿಭಾಗಗಳನ್ನು ಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರ್ದೇಶನ ನೀಡಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಇಲ್ಲಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿರುವ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ತತ್‌ಕ್ಷಣವೇ ಕುಂದುಕೊರತೆ ವಿಭಾಗಗಳನ್ನು ಸ್ಥಾಪಿಸುವಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರ್ದೇಶನ ನೀಡಿದೆ.
ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ಸಾರ್ವಜನಿಕರ ಕುಂದುಕೊರತೆ ವಿಭಾಗ ಸ್ಥಾಪಿಸುವುದು ಕಡ್ಡಾಯ ಎಂದು ಕೋರ್ಟ್ ನಿರ್ದೇಶನ ಹೇಳಿದೆ.
ಪ್ರತಿ ಸೆಲ್‌ನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಎಂಜಿನಿಯರ್ ಇರಬೇಕು. ನಿವಾಸಿಗಳ ಕುಂದುಕೊರತೆಗಳನ್ನು ನಿಭಾಯಿಸಲು ಪ್ರತಿ ವಾರ್ಡ್‌ನಲ್ಲಿರುವ ವಾರ್ಡ್ ಎಂಜಿನಿಯರ್‌ಗೆ ಸೂಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರತಿ ವಾರ್ಡ್‌ಗೆ ಇಂಜಿನಿಯರ್‌ಗಳ ತಂಡವನ್ನು ನಿಯೋಜಿಸಲು ಮತ್ತು ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಲು ಕ್ರಮ ತೆಗೆದುಕೊಳ್ಳಬೇಕು. ಅದೇ ರೀತಿ, “ವ್ಯವಸ್ಥಿತವಾಗಿ ನೀರಿನ ನಿರ್ವಹಣೆ” ಮಾಡುವಂತೆ ನ್ಯಾಯಾಲಯವು ಬಿಬಿಎಂಪಿಗೆ ಸೂಚಿಸಿದೆ.
ಅಂತಹ ಪ್ರಸ್ತಾವನೆಯನ್ನು ತ್ವರಿತಗೊಳಿಸುವಂತೆ ಮತ್ತು ರಾಜ್ಯ ಸರ್ಕಾರದ ಅನುಮೋದನೆಯನ್ನು ಶೀಘ್ರವಾಗಿ ಪಡೆಯುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿಯ "ಕಳಪೆ ನಿರ್ವಹಣೆ" ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಬಿಬಿಎಂಪಿ ವಕೀಲರು, ತತ್‌ಕ್ಷಣದ ಕ್ರಮವಾಗಿ, ಪಂಪ್‌ಗಳನ್ನು ಬಳಸಿ ಜಲಾವೃತ ಪ್ರದೇಶಗಳಿಂದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಬಿಬಿಎಂಪಿ ಸಲ್ಲಿಸಿದೆ. ನಗರದಲ್ಲಿ ಪ್ರವಾಹ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಬೆಂಗಳೂರಿನ ಎಲ್ಲ ಕೆರೆಗಳಿಗೆ ಹೆಚ್ಚುವರಿ ನೀರು ನಿರ್ವಹಿಸುವ ಗೇಟ್ ಅಳವಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.
ಈ ದಿನದ ಪ್ರಮುಖ ಸುದ್ದಿಗಳು
1. Bengaluru rain: ಬೆಂಗಳೂರು ಮಹಾನಗರದಲ್ಲಿ ಬುಧವಾರ ಮುಂಜಾನೆ ಬಹಳ ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ, ಮತ್ತೆ ಭಾರೀ ಮಳೆ ಬೀಳಲಿದ್ದು, ಪರಿಸ್ಥಿತಿ ಕಠೋರವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ವಿವರ ಇಲ್ಲಿದೆ. Bengaluru Rain Red alert: ಬೆಂಗಳೂರಲ್ಲಿ ಮಳೆ; ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
2. ಕ್ಯಾಬಿನೆಟ್ 'ಪಿಎಂ-ಶ್ರೀ ಯೋಜನಾ'ವನ್ನು ಅನುಮೋದಿಸಿದೆ. ದೇಶದ 14,500 ಶಾಲೆಗಳನ್ನು ಉನ್ನತೀಕರಣದ ಪ್ರಸ್ತಾವನೆಯೂ ಈ ಯೋಜನೆಯಲ್ಲಿ ಒಳಗೊಂಡಿದೆ. ಈ ಶಾಲೆಗಳು ಮಾದರಿ ಶಾಲೆಗಳಾಗುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಸಂಪೂರ್ಣ ಚೈತನ್ಯವನ್ನು ಒಳಗೊಂಡಿರುತ್ತವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. Cabinet approves 'PM-SHRI Yojna': ಪಿಎಂ ಶ್ರೀ ಯೋಜನೆಗೆ ಕೇಂದ್ರ ಸಂಪುಟ ಸಮ್ಮತಿ
3. SBI Clerk Recruitment 2022: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜೂನಿಯರ್ ಅಸೋಸಿಯೇಟ್/ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಕನ್ನಡಿಗರಿಗೂ ಬೆಂಗಳೂರು ವೃತ್ತದಲ್ಲಿ 400ರಷ್ಟು ಉದ್ಯೋಗಾವಕಾಶವಿದೆ. ಅರ್ಜಿ ಸಲ್ಲಿಕೆಗೆ sbi.co.in ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.27 ಕೊನೇ ದಿನ. ಉಳಿದ ವಿವರಗಳಿಗೆ ವರದಿ ಗಮನಿಸಿ.- SBI Clerk Recruitment 2022: SBIನ 5008 ಜೂನಿಯರ್ ಕ್ಲರ್ಕ್ ಅರ್ಜಿ ಸಲ್ಲಿಕೆ ಶುರು
4. ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಹೃದಯಾಘಾತಕ್ಕೆ ಒಳಗಾಗಿದ್ದ ಉಮೇಶ್ ಕತ್ತಿ ಅವರ ಬದುಕಿನ ಕೊನೆಯ ಕ್ಷಣದ ವಿಡಿಯೋ ಈಗ ವೈರಲ್ ಆಗಿದೆ. Last minutes of Umesh Katti: ಉಮೇಶ್ ಕತ್ತಿ ಅವರ ಬದುಕಿನ ಕೊನೆಯ ಕ್ಷಣ; ವಿಡಿಯೋ ಇಲ್ಲಿದೆ.