logo
ಕನ್ನಡ ಸುದ್ದಿ  /  ಕರ್ನಾಟಕ  /  ಮೆಟ್ರೋ ಪ್ರಯಾಣಿಕರೇ ಗಮನಿಸಿ; ಅಕ್ಟೋಬರ್ 3ರಂದು ಈ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ಸಂಚಾರ ಸ್ಥಗಿತ

ಮೆಟ್ರೋ ಪ್ರಯಾಣಿಕರೇ ಗಮನಿಸಿ; ಅಕ್ಟೋಬರ್ 3ರಂದು ಈ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ಸಂಚಾರ ಸ್ಥಗಿತ

Prasanna Kumar P N HT Kannada

Oct 02, 2024 03:21 PM IST

google News

ಬೆಂಗಳೂರು ಮೆಟ್ರೋ ರೈಲು ಸಂಚಾರ

    • Namma Metro: ಅಕ್ಟೋಬರ್​ 3ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ಗ್ರೀನ್​ಲೈನ್​ನಲ್ಲಿ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಾಯ ಉಂಟಾಗಲಿದೆ.
 ಬೆಂಗಳೂರು ಮೆಟ್ರೋ ರೈಲು ಸಂಚಾರ
ಬೆಂಗಳೂರು ಮೆಟ್ರೋ ರೈಲು ಸಂಚಾರ

ಬೆಂಗಳೂರು: ಅಕ್ಟೋಬರ್​ 3ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL​) ಪ್ರಕಟಣೆ ಹೊರಡಿಸಿದೆ. ನಾಗಸಂದ್ರ ಮತ್ತು ಮಾಧವರ ಮೆಟ್ರೋ ನಿಲ್ದಾಣಗಳ ನಡುವಿನ ಹೊಸ ರೈಲು ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆಸುವ ಕಾರಣಕ್ಕೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ದಕ್ಷಿಣ ವೃತ್ತ) ನಡೆಸಲಿದ್ದಾರೆ ಎಂದು ಬಿಎಂಆರ್​ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ನಾಗಸಂದ್ರ ಮತ್ತು ಮಾಧವರ ನಿಲ್ದಾಣಗಳ ನಡುವಿನ ಹೊಸ ಮಾರ್ಗವನ್ನು ಮೆಟ್ರೋ ರೈಲ್ವೆ ಸುರಕ್ಷತಾ ಕಮೀಷನರ್ ತಪಾಸಣೆ ನಡೆಸಲಿದ್ದಾರೆ. ಅಕ್ಟೋಬರ್​​ 3ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಕಾರ್ಯಾಚರಣೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬದಲಾವಣೆಯಾಗಲಿದೆ. ನಾಗಸಂದ್ರ ಮತ್ತು ಪೀಣ್ಯ ಇಂಡಸ್ಟ್ರಿ ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ರೈಲು ಸೇವೆ ಇರುವುದಿಲ್ಲ. ಈ ಅವಧಿಯಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ಸಿಲ್ಕ್ ಇನ್​ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ರೈಲುಗಳು ಸಂಚರಿಸಲಿವೆ.

ಸಿಲ್ಕ್ ಇನ್​ಸ್ಟಿಟ್ಯೂಟ್​​ನಿಂದ ಬೆಳಿಗ್ಗೆ 9 ಗಂಟೆಗೆ ಹೊರಡುವ ಕೊನೆಯ ರೈಲು ನಾಗಸಂದ್ರ ನಿಲ್ದಾಣಕ್ಕೆ ತಲುಪಲಿದೆ. ನೇರಳೆ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ. ನಮ್ಮ ಮೆಟ್ರೊ ಪ್ರಯಾಣಿಕರು ಬದಲಾವಣೆ ಗಮನಿಸಿ ಮತ್ತು ಸಹಕರಿಸಲು ಕೋರಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗವು ವಾಯುವ್ಯದ ನಾಗಸಂದ್ರವನ್ನು ದಕ್ಷಿಣದ ಸಿಲ್ಕ್ ಇನ್​ಸ್ಟಿಟ್ಯೂಷನ್ ಅನ್ನು ಸಂಪರ್ಕಿಸುತ್ತದೆ.

ಈ ಮಾರ್ಗವು ಉತ್ತರದಲ್ಲಿ ಪೀಣ್ಯ ಮತ್ತು ಯಶವಂತಪುರದ ಕೈಗಾರಿಕಾ ಕೇಂದ್ರಗಳನ್ನು ಮೆಜೆಸ್ಟಿಕ್​​ನಿಂದ ಕೇಂದ್ರ ಮತ್ತು ಬೆಂಗಳೂರಿನ ದಕ್ಷಿಣ ವಸತಿ ಪ್ರದೇಶಗಳೊಂದಿಗೆ (ಬಸವನಗುಡಿ, ಜಯನಗರ, ಬನಶಂಕರಿ, ತಲಘಟ್ಟಪುರ, ಕನಕಪುರ ರಸ್ತೆ ಇತ್ಯಾದಿ) ಸಂಪರ್ಕಿಸುತ್ತದೆ. ಹಸಿರು ಮಾರ್ಗವು ಹೆಚ್ಚಾಗಿ ಎತ್ತರದಲ್ಲಿದ್ದು, 26 ಎತ್ತರಿಸಿದ ಮತ್ತು 3 ಭೂಗತ ನಿಲ್ದಾಣಗಳನ್ನು ಹೊಂದಿದೆ. 2ನೇ ಹಂತ ಪೂರ್ಣಗೊಂಡ ನಂತರ ಈ ಮಾರ್ಗ ವಾಯುವ್ಯದಲ್ಲಿ ಮಾಧವರದಿಂದ ದಕ್ಷಿಣದಲ್ಲಿ ಸಿಲ್ಕ್ ಇನ್​ಸ್ಟಿಟ್ಯೂಟ್​ವರೆಗೆ ವಿಸ್ತರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ