logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಬಜೆಟ್‌ ಅಧಿವೇಶನ; ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ಹೀಗಿತ್ತು

ಕರ್ನಾಟಕ ಬಜೆಟ್‌ ಅಧಿವೇಶನ; ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ಹೀಗಿತ್ತು

Umesh Kumar S HT Kannada

Feb 14, 2024 07:21 AM IST

google News

ಕರ್ನಾಟಕ ಬಜೆಟ್‌ ಅಧಿವೇಶನ; ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ನೀಡಿದರು.

  • ಕರ್ನಾಟಕ ಬಜೆಟ್‌ ಅಧಿವೇಶನ (ಕರ್ನಾಟಕ ಬಜೆಟ್ 2024) ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಶಾಸಕರು ಗಮನಸೆಳೆದಾಗ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ನೀಡಿದರು. ಆ ವಿವರ ಈ ವರದಿಯಲ್ಲಿದೆ.

ಕರ್ನಾಟಕ ಬಜೆಟ್‌ ಅಧಿವೇಶನ; ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ನೀಡಿದರು.
ಕರ್ನಾಟಕ ಬಜೆಟ್‌ ಅಧಿವೇಶನ; ಬೆಂಗಳೂರು ನಗರದ ಕುಡಿಯುವ ನೀರು ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ಪಷ್ಟೀಕರಣ ನೀಡಿದರು.

ಬೆಂಗಳೂರು: ಕೋವಿಡ್ 19 ಸಂಕಷ್ಟ ಮರೆಯಾಗುತ್ತಿದ್ದು, ಬೆಂಗಳೂರು ಜನಜೀವನಕ್ಕೆ ಮತ್ತೆ ಹಳೆಯ ವೇಗ ಸಿಕ್ಕಿದೆ. ಫೆಬ್ರವರಿ ತಿಂಗಳಲ್ಲೇ ಕುಡಿಯುವ ನೀರಿನ ಕೊರತೆ ಎದುರಾಗಿದೆ ಎಂಬ ವಿಚಾರ ಕರ್ನಾಟಕ ವಿಧಾನಶಬೆ ಅಧಿವೇಶನ (ಕರ್ನಾಟಕ ಬಜೆಟ್ 2024)ದಲ್ಲಿ ಪ್ರಸ್ತಾಪವಾಗಿದೆ.

ಬೆಂಗಳೂರಲ್ಲಿ ಇರುವಷ್ಟೂ ಜನರಿಗೆ ಪರಿಶುದ್ಧ ಕುಡಿಯುವ ನೀರು ಪೂರೈಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಫೆಬ್ರವರಿಯಲ್ಲೇ ಬಿರುಬೇಸಿಗೆ ಅನುಭವಕ್ಕೆ ಬಂದಿದ್ದು, ಕಾವೇರಿ ನೀರು ಹರಿಯುವಿಕೆ ಕಡಿಮೆಯಾಗಿದೆ. ಮೇವರೆಗೆ ಬೇಸಿಗೆಯೇ ಇರಲಿದ್ದು ಮುಂದಿನ ತಿಂಗಳಿನಿಂದ ನೀರಿನ ಲಭ್ಯತೆ ಮತ್ತಷ್ಟು ಕುಸಿಯುವ ಕಳವಳವನ್ನು ಪ್ರಶೋತ್ತರ ವೇಳೆ ಬಿಜೆಪಿ ಸದಸ್ಯ ಸಿ.ಕೆ.ರಾಮಮೂರ್ತಿ ಮಂಗಳವಾರ ವ್ಯಕ್ತಪಡಿಸಿದ್ದರು.

ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪ್ರತಿ ವರ್ಷ ಬೆಂಗಳೂರಿನ ಜನಸಂಖ್ಯೆ 10 ಲಕ್ಷದಷ್ಟು ಹೆಚ್ಚಾಗುತ್ತಿದ್ದು, ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಬೆಂಗಳೂರಿಗೆ ಮೀಸಲು ಇಡಬೇಕಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಬೆಂಗಳೂರಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 6.5 ಟಿಎಂಸಿ ಕಾವೇರಿ ನೀರು ಮೀಸಲು ಇಡಬೇಕು ಎಂಬ ಹೊಸ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 1.5 ಟಿಎಂಸಿಯಷ್ಟು ನೀರು ಉಳಿಯುವ ನಿರೀಕ್ಷೆ ಇದೆ. ದಿನೇದಿನೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬೆಂಗಳೂರಿಗರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಪೂರೈಸುವುದು ನಮ್ಮ ಕರ್ತವ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಭರವಸೆ ನೀಡಿದರು.

11 ವರ್ಷದಿಂದ ಜಲ ಮಂಡಳಿ ನೀರಿನ ದರ ಏರಿಸಿಲ್ಲ; ಉಪ ಮುಖ್ಯಮಂತ್ರಿ ವಿವರಣೆ

ಬೆಂಗಳೂರಿನಲ್ಲಿ 2013 ರಿಂದ ಈಚೆಗೆ ನೀರಿನ ದರ ಏರಿಕೆ ಮಾಡಿಲ್ಲ. ವಿದ್ಯುತ್ ಬೆಲೆ ಏರಿಕೆ ಮತ್ತು ಇತರೇ ವೆಚ್ಚಗಳು ಹೆಚ್ಚಾದರೂ ವಿವಿಧ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬಿಜೆಪಿ ಶಾಸಕ ಕೆ.ಸಿ. ಕೃಷ್ಣಮೂರ್ತಿ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಕೊಳಗೇರಿಗೆ 2017 ರಿಂದ ಉಚಿತವಾಗಿ ನೀರು ಪೂರೈಸಲಾಗುತ್ತಿದೆ. ವಿವೇಕಾನಂದ ವಸತಿ ಸಂಕೀರ್ಣ ಹಾಗೂ ರಾಜೇಶ್ವರಿ ಕೊಳಗೇರಿ ಪ್ರದೇಶದಲ್ಲಿ 2000 ಫ್ಲಾಟ್‌ಗಳಿವೆ. ಜಲಮಂಡಳಿ ಶುಲ್ಕಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ಪಾವತಿಸಿದಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಅಶೋಕ್, ಜಾಣತನದ ಉತ್ತರ ಕೊಡಬೇಡಿ. ರಾಮಮೂರ್ತಿ ಹೊಸದಾಗಿ ಶಾಸಕರಾಗಿದ್ದಾರೆ. ಶಾಸಕ ಪ್ರದೇಶಾಭಿವೃದ್ಧಿಗೆ ನೀಡುವ ಅನುದಾನ ಬೇರೆ. ಈಗ ಬಿಬಿಎಂಪಿ ವತಿಯಿಂದ ಈ ಕೆಲಸ ಮಾಡಿಸಿಕೊಡಿ ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಸಾಮಾನ್ಯ ಜನ ಕುಡಿಯಲು 5 ರೂಪಾಯಿ ನೀರನ್ನು ಬಳುಸುತ್ತಾರೆ. 5 ರೂಪಾಯಿ ನಾಣ್ಯ ಹಾಕಿ 20 ಲೀಟರ್ ನೀರು ಪಡೆಯುವ ಜನರಿಗೆ ಈಗ ಆ ನೀರು ಕೂಡ ಸಿಗುತ್ತಿಲ್ಲ. ಸದ್ಯ ಬರದ ಹಿನ್ನಲೆ ಆ ನೀರಿಗೂ ತತ್ವಾರ ಎದುರಾಗುವ ಆತಂಕ ಎದುರಾಗಿದೆ. ಕೆಲವೆಡೆ ಅದೇ ನೀರಿಗೆ ದುಪ್ಪಟ್ಟು ಮೊತ್ತ ನೀಡಬೇಕಾದ ಅನಿವಾರ್ಯತೆಯೂ ಇದೆ.

ಬೆಂಗಳೂರು ಕುಡಿಯುವ ನೀರು ಪೂರೈಕೆಯಲ್ಲಿ ಟ್ಯಾಂಕರ್‌ ಲಾಬಿ

ಈ ಚರ್ಚೆ ಪ್ರಗತಿಯಲ್ಲಿರುವಾಗಲೇ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಅವರು, ಬೆಂಗಳೂರು ಕುಡಿಯುವ ನೀರು ಪೂರೈಕೆಯಲ್ಲಿ ಟ್ಯಾಂಕರ್‌ ಲಾಬಿ ನಡೆಯುತ್ತಿರುವುದರ ಕುರಿತು ಗಮನಸೆಳೆದರು.

ಟ್ಯಾಂಕರ್ ಮೂಲಕ ಕೆಲ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. ಸಾಮಾನ್ಯವಾಗಿ ಒಂದು ಸಾವಿರ ಲೀಟರ್ ಟ್ಯಾಂಕರ್ ನೀರಿಗೆ 400 ರಿಂದ 500ರೂಪಾಯಿ ಇತ್ತು. ಸದ್ಯ ನೀರಿನ ಕೊರತೆ ಹಿನ್ನಲೆ ಅದರ ಮೊತ್ತ ಬೆಂಗಳೂರಿನಲ್ಲಿ 900 ರಿಂದ 1,000 ರೂಪಾಯಿಗೆ ಏರಿದೆ.

ಬೆಂಗಳೂರಿನಲ್ಲಿ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಲು ನೀರು ಇದೆ. ಆದರೆ ಜನರಿಗೆ ಜಲಮಂಡಳಿಯಿಂದ ನೀರು ಪೂರೈಸಲು ನೀರು ಸಿಗುತ್ತಿಲ್ಲ. ಹೀಗಾದರೆ ಹೇಗೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಬೆಂಗಳೂರಿಗೆ ಶೇ.20 ನೀರು ಟ್ಯಾಂಕರ್ ಮೂಲಕವೇ ಹೋಗುತ್ತಿದೆ. ನೀರಿನ ವಿಚಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನಿಮ್ಮ ಅಕ್ಕಪಕ್ಕ ಕುಳಿತಿರುವ ಆರ್ ಅಶೋಕ್‌ ಮತ್ತು ಸುರೇಶ್‌ ಕುಮಾರ್ ಅವರನ್ನು ಕೇಳಿ ಎಂದು ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantime.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ