logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru: ಕೆಮಿಕಲ್​ ಗ್ಯಾಸ್​ ತುಂಬಿದ ಬಲೂನು ಕಟ್ಟಿ ಬರ್ತಡೇ ಆಚರಣೆ; ಬಲೂನು ಸ್ಫೋಟಿಸಿ ಐವರಿಗೆ ಗಂಭೀರ ಗಾಯ

Bengaluru: ಕೆಮಿಕಲ್​ ಗ್ಯಾಸ್​ ತುಂಬಿದ ಬಲೂನು ಕಟ್ಟಿ ಬರ್ತಡೇ ಆಚರಣೆ; ಬಲೂನು ಸ್ಫೋಟಿಸಿ ಐವರಿಗೆ ಗಂಭೀರ ಗಾಯ

HT Kannada Desk HT Kannada

Oct 01, 2023 09:02 PM IST

google News

ರಾಸಾಯನಿಕ ಗಾಳಿ ತುಂಬಿದ ಬಲೂನು ಕಟ್ಟಿ ಹುಟ್ಟುಹಬ್ಬ ಆಚರಣೆ (ಪ್ರಾತಿನಿಧಿಕ ಚಿತ್ರ)

    • ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಹೀಲಿಯಂ ತುಂಬಿದ ಬಲೂನ್​​ಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು. ಬರ್ತ್ ಡೇ ಆಚರಣೆ ನಡೆಯುತ್ತಿದ್ದಾಗ ಬಲೂನು ಸ್ಫೋಟಗೊಂಡು ವಿದ್ಯುತ್ ವೈರ್​​ಗೆ ತಗುಲಿದೆ. ವಿದ್ಯುತ್ ವೈರ್ ಗೆ ಬೆಂಕಿ ಹತ್ತಿಕೊಂಡು ಇವರೆಲ್ಲರಿಗೂ ವ್ಯಾಪಿಸಿದೆ.
ರಾಸಾಯನಿಕ ಗಾಳಿ ತುಂಬಿದ ಬಲೂನು ಕಟ್ಟಿ ಹುಟ್ಟುಹಬ್ಬ ಆಚರಣೆ (ಪ್ರಾತಿನಿಧಿಕ ಚಿತ್ರ)
ರಾಸಾಯನಿಕ ಗಾಳಿ ತುಂಬಿದ ಬಲೂನು ಕಟ್ಟಿ ಹುಟ್ಟುಹಬ್ಬ ಆಚರಣೆ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ರಾಸಾಯನಿಕ ಗಾಳಿ ತುಂಬಿದ ಬಲೂನು ಕಟ್ಟಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಕುಟುಂಬ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಚ್​​ಎಎಲ್ ಉದ್ಯೋಗಿ ವಿಜಯ್ ಆದಿತ್ಯ ಕುಮಾರ್ ಅವರ ನಿವಾಸದಲ್ಲಿ ಕಳೆದ ರಾತ್ರಿ ಘಟನೆ ವರದಿಯಾಗಿದೆ. ಘಟನೆಯಲ್ಲಿ ಓರ್ವ ವಯಸ್ಕರು ಮತ್ತು ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.

ಒಟ್ಟು ಐವರು ತೀವ್ರ ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ವಿಜಯ್ ಆದಿತ್ಯ ಕುಮಾರ್, ಇವರ ಪುತ್ರ ಧ್ಯಾನ್ ಚಂದಾ (7), ಪುತ್ರಿ ಸೋಹಿಲಾ (3), ಬಂಧುಗಳಾದ ಲೋಕೇಶ್ ಅವರ ಪುತ್ರಿ ಇಶಾನ್ (2), ಶಿವಕುಮಾರ್ ಅವರ ಪುತ್ರ ಸಂಜಯ್​ (7) ಎಂದು ಗುರುತಿಸಲಾಗಿದೆ.

ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಹೀಲಿಯಂ ತುಂಬಿದ ಬಲೂನ್​​ಗಳಿಂದ ವೇದಿಕೆಯನ್ನು ಅಲಂಕರಿಸಲಾಗಿತ್ತು. ಬರ್ತ್ ಡೇ ಆಚರಣೆ ನಡೆಯುತ್ತಿದ್ದಾಗ ಬಲೂನು ಸ್ಫೋಟಗೊಂಡು ವಿದ್ಯುತ್ ವೈರ್​​ಗೆ ತಗುಲಿದೆ. ವಿದ್ಯುತ್ ವೈರ್ ಗೆ ಬೆಂಕಿ ಹತ್ತಿಕೊಂಡು ಇವರೆಲ್ಲರಿಗೂ ವ್ಯಾಪಿಸಿದೆ. ಕೂಡಲೇ ಎಲ್ಲರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗಳಾಗಿದ್ದರೂ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ