BESCOM Updates: ಹೊಸ ವರ್ಷಕ್ಕೆ ವಿದ್ಯುತ್ ದರ ಹೆಚ್ಚಳದ ಮುನ್ಸೂಚನೆ; ಯೂನಿಟ್‌ಗೆ 49 ಪೈಸೆ ಹೆಚ್ಚಿಸುವಂತೆ ಬೆಸ್ಕಾಂ ಪ್ರಸ್ತಾವನೆ
Dec 24, 2023 01:28 PM IST
ಬೆಸ್ಕಾಂ (ಸಾಂಕೇತಿಕ ಚಿತ್ರ)
ಹೊಸ ಆರ್ಥಿಕ ವರ್ಷದಲ್ಲಿ ವಿದ್ಯುತ್ ದರ ಯೂನಿಟ್‌ಗೆ 49 ಪೈಸೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಬೆಸ್ಕಾಂ ಸಲ್ಲಿಸಿದೆ. ಈ ವರ್ಷಕ್ಕೆ ಅನ್ವಯವಾಗುವಂತೆ 1.36 ರೂಪಾಯಿ ಹೆಚ್ಚಿಸುವಂತೆ ಪ್ರಸ್ತಾವನೆಯನ್ನು ಬೆಸ್ಕಾಂ ಕಳೆದ ವರ್ಷ ಸಲ್ಲಿಸಿದಾಗ, ಕೆಇಆರ್‌ಸಿ 70 ಪೈಸೆ ಹೆಚ್ಚಳಕ್ಕೆ ಮಾತ್ರ ಅನುಮೋದನೆ ನೀಡಿತ್ತು.
ಬೆಂಗಳೂರು: ಹೊಸ ಆರ್ಥಿಕ ವರ್ಷದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ನಿರೀಕ್ಷಿಸಬಹುದು. ಬೆಸ್ಕಾಂ ಈ ಕುರಿತ ಸುಳಿವನ್ನು ನೀಡಿದೆ.
ಹೌದು, ಕರ್ನಾಟಕದ ಜನರು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವಾಗಲೇ ಬೆಸ್ಕಾಂ ವಿದ್ಯುತ್ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ಇಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ (ಕೆಇಆರ್‌ಸಿ)ಗೆ ಸಲ್ಲಿಸಿದೆ. ಈ ಪ್ರಸ್ತಾವನೆ ಪ್ರಕಾರ, ಮುಂದಿನ ವರ್ಷ 2024- 25ರ ಹಣಕಾಸು ವರ್ಷದಲ್ಲಿ ವಿದ್ಯುತ್ ದರ ಯೂನಿಟ್‌ಗೆ 49 ಪೈಸೆ ಹೆಚ್ಚಿಸಬೇಕು ಎಂಬ ವಿಚಾರ ಗಮನಸೆಳೆದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬೆಸ್ಕಾಂ ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿರುವಂಥದ್ದು. ಈ ತಿಂಗಳ ಆರಂಭದಲ್ಲಿಯೇ ರ್ನಾಟಕ ಇಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ (ಕೆಇಆರ್‌ಸಿ)ಗೆ ಸಲ್ಲಿಕೆಯಾಗಿದೆ.
ಈ ಪ್ರಸ್ತಾವನೆಯಲ್ಲಿರುವ ಬೇಡಿಕೆಯನ್ನು ಸಮರ್ಥಿಸಿಕೊಂಡ ಬೆಸ್ಕಾಂ ಅಧಿಕಾರಿಗಳು, 2022 - 2023 ರ ಹಣಕಾಸು ವರ್ಷದಲ್ಲಿ 1,078.82 ಕೋಟಿ ರೂಪಾಯಿ ಆದಾಯ ನಷ್ಟ ಮತ್ತು 274 ಕೋಟಿ ರೂಪಾಯಿ ಕಾರ್ಯಾಚರಣೆಯ ನಷ್ಟ ಉಂಟಾಗಿತ್ತು. ಹೀಗಾಗಿ, 2024 - 2025 ರ ಅವಧಿಯಲ್ಲಿ ಅಂದಾಜು 1,738.69 ಕೋಟಿ ರೂಪಾಯಿ ಆದಾಯ ನಷ್ಟವನ್ನು ಕಡಿಮೆ ಮಾಡಲು ಈ ಹೆಚ್ಚಳ ಅಗತ್ಯ ಎಂದು ಹೇಳಿದ್ದಾರೆ.
ಹೆಚ್ಚಿದ ಆದಾಯ ನಷ್ಟ ಮತ್ತು ಸುಂಕ ಹೆಚ್ಚಳವನ್ನು ಮುಂದಿಟ್ಟುಕೊಂಡು ಕಾರಣವಾದ ವಿದ್ಯುತ್ ಖರೀದಿ ವೆಚ್ಚವನ್ನು ಹೆಚ್ಚಿಸಲಾಗಿದೆ. ಆದ್ದರಿಂದ ಬೆಸ್ಕಾಂ ಸ್ಥಿರ ಶುಲ್ಕಗಳ ಮೂಲಕ ಹೆಚ್ಚಿನ ಪ್ರಮಾಣದ ಸುಂಕವನ್ನು ಮರುಪಡೆಯಲು ಮತ್ತು ಖರೀದಿ ಶುಲ್ಕದ ಹೊರೆ ಕಡಿಮೆ ಮಾಡಲು ಪ್ರಯತ್ನಿಸಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ಅಂದರೆ, 2023 - 2024 ಕ್ಕೆ ಅನ್ವಯವಾಗುವಂತೆ, ಬೆಸ್ಕಾಂ 1.36 ರೂಪಾಯಿ ಸುಂಕ ಹೆಚ್ಚಳವನ್ನು ಕೋರಿತ್ತು. ಆದರೆ ಕೆಇಆರ್‌ಸಿ ಯೂನಿಟ್‌ಗೆ ಕೇವಲ 70 ಪೈಸೆ ಹೆಚ್ಚಳವನ್ನು ಅನುಮೋದಿಸಿತು. ಈ ವರ್ಷವೂ, ಸಾರ್ವಜನಿಕ ಅಭಿಪ್ರಾಯ ತೆಗೆದುಕೊಂಡು ವಸ್ತುಸ್ಥಿತಿ ಅವಲೋಕಿಸಿಕೊಂಡ ಬಳಿಕ ಆಯೋಗವು ನೈಜ ಹೆಚ್ಚಳವನ್ನು ನಿರ್ಧರಿಸುತ್ತದೆ. ಈ ಹೆಚ್ಚಳದ ಪ್ರಮಾಣ 2024ರ ಫೆಬ್ರವರಿಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.