logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಮದುವೆ ಹಾಲ್ ತಲುಪಲು ನಮ್ಮ ಮೆಟ್ರೋ ಏರಿದ ಬೆಂಗಳೂರಿನ ಚತುರೆ; ಟ್ರಾಫಿಕ್‌ನಲ್ಲಿ ಸಿಲುಕಿದ ವಧುವಿನ ಕಾರು

Bengaluru News: ಮದುವೆ ಹಾಲ್ ತಲುಪಲು ನಮ್ಮ ಮೆಟ್ರೋ ಏರಿದ ಬೆಂಗಳೂರಿನ ಚತುರೆ; ಟ್ರಾಫಿಕ್‌ನಲ್ಲಿ ಸಿಲುಕಿದ ವಧುವಿನ ಕಾರು

Umesh Kumar S HT Kannada

Jan 27, 2024 02:55 PM IST

google News

ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿ ಮುಹೂರ್ತಕ್ಕೆ ಮೊದಲು ಮದುವೆ ಹಾಲ್ ತಲುಪಿದ ವಧು. (ವಿಡಿಯೋ ಗ್ರ್ಯಾಬ್)

  • Peak Bengaluru Moment Viral Video: ಬೆಂಗಳೂರಿನ ಸಂಚಾರ ದಟ್ಟಣೆ ಅನುಭವದಿಂದ ಕಲಿಯುವ ಪಾಠ ಹಲವು. ಬೆಂಗಳೂರಲ್ಲಿ ಮುಹೂರ್ತಕ್ಕೆ ಮೊದಲು ಮದುವೆ ಹಾಲ್ ತಲಪುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ಬೆಂಗಳೂರಿನ ಚಾಣಕ್ಷ ವಧು. ಇಲ್ಲಿದೆ ಆ ಚಾಣಕ್ಷ ನಡೆಯ ವಿಡಿಯೋ ತುಣುಕು.

ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿ ಮುಹೂರ್ತಕ್ಕೆ ಮೊದಲು ಮದುವೆ ಹಾಲ್ ತಲುಪಿದ ವಧು. (ವಿಡಿಯೋ ಗ್ರ್ಯಾಬ್)
ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿ ಮುಹೂರ್ತಕ್ಕೆ ಮೊದಲು ಮದುವೆ ಹಾಲ್ ತಲುಪಿದ ವಧು. (ವಿಡಿಯೋ ಗ್ರ್ಯಾಬ್)

ಬೆಂಗಳೂರು: ಸಿಂಪಲ್ ಆಗಿ ಸಿಂಗರಿಸಿಕೊಂಡದ್ದಾಗಿದೆ. ಮದುವೆ ಹಾಲ್‌ಗೆ ಮುಹೂರ್ತಕ್ಕೆ ಮೊದಲೇ ತಲುಪಬೇಕು. ಹೀಗಂದುಕೊಂಡು ತರಾತುರಿಯಲ್ಲಿ ವಧು ಕುಳಿತ ಕಾರು ಟ್ರಾಫಿಕ್ ನಡುವೆ ಸಿಲುಕಿತು. ಬೆಂಗಳೂರು ಟ್ರಾಫಿಕ್ ಕೇಳಬೇಕಾ.. ಒಮ್ಮೆ ಶುರುವಾಯಿತೆಂದರೆ ಅದು ಕರಗಲು ಗಂಟೆಗಳೇ ಬೇಕು.. ಹೀಗಾದರೆ ಮದುವೆ ಹಾಲ್‌ಗೆ ತಲುಪಲಾಗದು ಎಂದಾಗ ವಧುವಿಗೆ ಥಟ್ಟಂತ ನೆನಪಾದುದು ಬೆಂಗಳೂರು ಮೆಟ್ರೋ.

ಬದುಕಿನ ಅತ್ಯಂತ ನಿರ್ಣಾಯಕ ದಿನ. ವಧುವಿನ ಅಲಂಕಾರದಲ್ಲಿ ನಮ್ಮ ಮೆಟ್ರೋ ಏರಿದ ವಧುವಿನ ಪ್ರತಿ ನಡೆಯೂ ವಿಡಿಯೋದಲ್ಲಿ ಸೆರೆಯಾಯಿತು. ಅದರಲ್ಲಿ ವಧು ಮತ್ತು ಆಕೆಯ ಕುಟುಂಬದ ಸದಸ್ಯರು, ಸ್ನೇಹಿತೆಯರು ಕಾರು ಬಿಟ್ಟು ನಮ್ಮ ಮೆಟ್ರೋದಲ್ಲಿ ಸಂಚರಿಸಲು ಮೆಟ್ರೋ ನಿಲ್ದಾಣದ ಪ್ರವೇಶದ್ವಾರದ ಮೂಲಕ ಹೋಗುವ ದೃಶ್ಯವೂ ಇದೆ. ಮೈಕ್ರೋಬ್ಲಾಗಿಂಗ್ ಸೈಟ್‌ ಎಕ್ಸ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಎಕ್ಸ್‌ನಲ್ಲಿ ಈ ವಿಡಿಯೋವನ್ನು @ForeverBLRU ಎಂಬ ಬಳಕೆದಾರರು ಶೇರ್ ಮಾಡಿದ್ದು, ಸಂಚಾರ ದಟ್ಟಣೆ ಗೆದ್ದ ವೀರನಾರಿಯಂತೆ ವಧುವನ್ನು ಬಿಂಬಿಸಲಾಗಿದೆ. “ಎಂಥಾ ಮಿನುಗುತಾರೆ… ಭಾರಿ ಸಂಚಾರದಟ್ಟಣೆಯಲ್ಲಿ ಸಿಲುಕಿದ್ರೂ, ಸ್ಮಾರ್ಟ್‌ ಆಗಿ ಕಾರು ಬಿಟ್ಟು ಮೆಟ್ರೋ ಏರಿ ಮುಹೂರ್ತಕ್ಕೆ ಮೊದಲೇ ಮದುವೆ ಹಾಲ್‌ಗೆ ತಲುಪಿದ ಬೆಂಗಳೂರಿನ ವಧು!” ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ.

ಈ ವಿಡಿಯೋ ಇಲ್ಲಿದೆ ಗಮನಿಸಿ…

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದವರು ಕೂಡಲೇ ಈ ವಧುವಿನ ವಿಡಿಯೋ, ಫೋಟೋ ತೆಗೆಯಲಾರಂಭಿಸಿದ್ದರು. ವಧು ಕೂಡ ಬಹುಬೇಗ ಅವರೆಲ್ಲರಿಗೆ ಸ್ಪಂದಿಸುತ್ತ ಫೋಟೋಗೆ ಪೋಸ್ ನೀಡಿದ್ದರು.

ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ ಹೀಗಿತ್ತು

ಬಹಳ ಅದೃಷ್ಟವಂತ ವಧು! ಆಕೆಯನ್ನು ಮದುವೆ ಹಾಲ್‌ಗೆ ಕರೆದೊಯ್ಯುವಂತೆ ನಿಮ್ಮನ್ನು ಕೇಳಿಲ್ಲವಲ್ಲ! ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಬಹಳ ಪ್ರಾಕ್ಟಿಕಲ್ ವ್ಯಕ್ತಿ. ಆಕೆಗೆ ಉತ್ತಮ ಭವಿಷ್ಯವನ್ನು ಹಾರೈಸೋಣ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಮೆಟ್ರೋವಾಲೇ ದುಲ್ಹನಿಯಾ ಲೇ ಜಾಯೆಂಗಾ ಎಂದು ಇನ್ನೊಬ್ಬರು ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಇದೆಲ್ಲವೂ ಪೂರ್ವ ಯೋಜಿತ ವಿಡಿಯೋ ಶೂಟ್‌ನಂತೆ ಕಾಣುತ್ತಿದೆ ಎಂದು ನಾಲ್ಕನೇ ವ್ಯಕ್ತಿ ಬರೆದುಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ