logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಬಿಎಂಪಿ 225 ವಾರ್ಡ್​ಗಳ ನಕ್ಷೆ ಪ್ರಕಟ; ನಿಮ್ಮ ವಾರ್ಡ್​ನ ಮ್ಯಾಪ್​ ನೋಡಲು ಇಲ್ಲಿದೆ ಲಿಂಕ್​​

ಬಿಬಿಎಂಪಿ 225 ವಾರ್ಡ್​ಗಳ ನಕ್ಷೆ ಪ್ರಕಟ; ನಿಮ್ಮ ವಾರ್ಡ್​ನ ಮ್ಯಾಪ್​ ನೋಡಲು ಇಲ್ಲಿದೆ ಲಿಂಕ್​​

HT Kannada Desk HT Kannada

Oct 01, 2023 02:39 PM IST

google News

ಬಿಬಿಎಂಪಿ ವಾರ್ಡ್​ಗಳ ನಕ್ಷೆ ಪ್ರಕ

    • BBMP wards map: 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚಿಸಲಾಗಿರುತ್ತದೆ.
ಬಿಬಿಎಂಪಿ ವಾರ್ಡ್​ಗಳ ನಕ್ಷೆ ಪ್ರಕ
ಬಿಬಿಎಂಪಿ ವಾರ್ಡ್​ಗಳ ನಕ್ಷೆ ಪ್ರಕ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್​ಗಳ ಪುನರ್ ವಿಂಗಡಣೆಯ ಅಂತಿಮ ಪಟ್ಟಿಯ ನಕ್ಷೆಗಳನ್ನು ಪ್ರಕಟಿಸಲಾಗಿದೆ. ಬಿಬಿಎಂಪಿಗೆ ಸಂಬಂಧಿಸಿದಂತೆ ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪರಿಶೀಲನಾ ಸಮಿತಿಯು ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಒಪ್ಪಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ ಕಲಂ 7ರಲ್ಲಿ ಪುದತ್ತವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡುವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚಿಸಲಾಗಿರುತ್ತದೆ.

ವಾರ್ಡ್​ಗಳ ನಕ್ಷೆ ನೋಡುವುದು ಹೇಗೆ?

ಸದರಿ 225 ವಾರ್ಡ್​ಗಳ ನಕ್ಷೆಯನ್ನು http://bbmpdelimitation2023.com/ ಈ ಲಿಂಕ್ ಬಳಸಿ ವೀಕ್ಷಿಸಬಹುದಾಗಿದೆ. ಇಲ್ಲಿ ನೀವು ಪ್ರದೇಶ ( Locality) ಅಥವಾ ವಿಧಾನಸಭಾ ಕ್ಷೇತ್ರ (Assembly Constituency) ಅಥವಾ ವಾರ್ಡ್​ (Ward) ಹೆಸರು ಸೆಲೆಕ್ಟ್ ಮಾಡಿ ಹುಡುಕಬಹುದಾಗಿದೆ.

ಪ್ರತಿ ವಾರ್ಡ್‌ನ ಪ್ರಕಟಿತ ವೇಳಾಪಟ್ಟಿಯಲ್ಲಿ, ಪ್ರಮುಖ ಸ್ಥಳಗಳನ್ನು ಮಾತ್ರ ನಾಲ್ಕು ದಿಕ್ಕುಗಳಲ್ಲಿ ಸ್ಪಷ್ಟ ಗಡಿಯೊಂದಿಗೆ ನಮೂದಿಸಲಾಗಿದೆ. ಸಂಬಂಧಪಟ್ಟ ವಾರ್ಡ್‌ನ ಗಡಿಯೊಳಗೆ ಇರುವ ಯಾವುದೇ ಸ್ಥಳ, ಪ್ರದೇಶ, ಹೆಗ್ಗುರುತು ಅದೇ ಡಿಲಿಮಿಟೆಡ್ ವಾರ್ಡ್‌ನ ಭಾಗವಾಗಿದೆ ಎಂದು ಗಮನಿಸಬಹುದು.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ