logo
ಕನ್ನಡ ಸುದ್ದಿ  /  ಕರ್ನಾಟಕ  /  ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರ; ಉಳಿಕೆ ತೆರಿಗೆ ಆಧರಿಸಿ ಗರಿಷ್ಠ 8 ಸಂದೇಶವನ್ನು ಕಳುಹಿಸಲಿದೆ ಬಿಬಿಎಂಪಿ

ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರ; ಉಳಿಕೆ ತೆರಿಗೆ ಆಧರಿಸಿ ಗರಿಷ್ಠ 8 ಸಂದೇಶವನ್ನು ಕಳುಹಿಸಲಿದೆ ಬಿಬಿಎಂಪಿ

Umesh Kumar S HT Kannada

Feb 07, 2024 10:43 AM IST

google News

ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರವನ್ನು ಬಿಬಿಎಂಪಿ ಅನುಸರಿಸಲಿದೆ. ಹೀಗಾಗಿ ತೆರಿಗೆದಾರರ ಉಳಿಕೆ ತೆರಿಗೆ ಆಧರಿಸಿ ತಿಂಗಳಿಗೆ ಗರಿಷ್ಠ 8 ಸಂದೇಶವನ್ನು ಬಿಬಿಎಂಪಿ ಕಳುಹಿಸಲಿದೆ. (ಸಾಂಕೇತಿಕ ಚಿತ್ರ)

  • ಬೆಂಗಳೂರಿನಲ್ಲಿ 6 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ಉಳಿಸಿಕೊಂಡಿರುವ ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರವನ್ನು ಅನುಸರಿಸಲು ಬಿಬಿಎಂಪಿ ಮುಂದಾಗಿದೆ. ಈ ಉಳಿಕೆ ತೆರಿಗೆ ಪ್ರಮಾಣವನ್ನು ಆಧರಿಸಿ ಗರಿಷ್ಠ 8 ಸಂದೇಶವನ್ನು ಬಿಬಿಎಂಪಿ ಕಳುಹಿಸಲಿದೆ. 

ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರವನ್ನು ಬಿಬಿಎಂಪಿ ಅನುಸರಿಸಲಿದೆ. ಹೀಗಾಗಿ ತೆರಿಗೆದಾರರ ಉಳಿಕೆ ತೆರಿಗೆ ಆಧರಿಸಿ ತಿಂಗಳಿಗೆ ಗರಿಷ್ಠ 8 ಸಂದೇಶವನ್ನು ಬಿಬಿಎಂಪಿ ಕಳುಹಿಸಲಿದೆ. (ಸಾಂಕೇತಿಕ ಚಿತ್ರ)
ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬ್ಯಾಂಕಿಂಗ್ ವಲಯದ ತಂತ್ರವನ್ನು ಬಿಬಿಎಂಪಿ ಅನುಸರಿಸಲಿದೆ. ಹೀಗಾಗಿ ತೆರಿಗೆದಾರರ ಉಳಿಕೆ ತೆರಿಗೆ ಆಧರಿಸಿ ತಿಂಗಳಿಗೆ ಗರಿಷ್ಠ 8 ಸಂದೇಶವನ್ನು ಬಿಬಿಎಂಪಿ ಕಳುಹಿಸಲಿದೆ. (ಸಾಂಕೇತಿಕ ಚಿತ್ರ)

ಬಾಕಿ ಇರುವ ಆಸ್ತಿ ತೆರಿಗೆ ವಸೂಲಿಗಾಗಿ ಬ್ಯಾಂಕಿಂಗ್ ತಂತ್ರವನ್ನು ಅನುಸರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಇಂಟಿಗ್ರೇಟೆಡ್ ವಾಯಿಸ್ ರೆಸ್ಪಾನ್ಸ್ ಸಿಸ್ಟಂ' (ಐವಿಆರ್‌ಎಸ್) ಮೂಲಕ ಧ್ವನಿ ಸಂದೇಶ ಮತ್ತು ಪದೇಪದೆ ಎಸ್‌ಎಂಎಸ್‌ ಅನ್ನು ಆಸ್ತಿ ತೆರಿಗೆ ಬಾಳಿ ಉಳಿಸಿಕೊಂಡವರ ಮೊಬೈಲ್ ಸಂಖ್ಯೆಗೆ ರವಾನಿಸುವ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿದೆ.

ಈಗಾಗಲೇ, ಆಸ್ತಿ ತೆರಿಗೆ ವಸೂಲಿಗೆ ಕಟ್ಟಡಗಳನ್ನು ಸೀಜ್ ಮಾಡುವುದು ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಪಾಲಿಕೆ ಕೈಗೊಂಡಿತ್ತು. ಇದೀಗ ಉಳಿಸಿಕೊಂಡ ಬಾಕಿ ಆಸ್ತಿ ಮಾಲೀಕರ ಮೊಬೈಲ್ ಸಂಖ್ಯೆಗಳಿಗೆ ನಿಯತವಾಗಿ ಬಾಕಿ ತೆರಿಗೆ ಮೊತ್ತದ ಆಧಾರದ ಮೇಲೆ ಇಂತಿಷ್ಟು ಸಂಖ್ಯೆಯ 'ಇಂಟಿಗ್ರೇಟೆಡ್ ವಾಯಿಸ್ ರೆಸ್ಪಾನ್ಸ್ ಸಿಸ್ಟಂ' (ಐವಿಆರ್‌ಎಸ್) ಮೂಲಕ ಧ್ವನಿ ಸಂದೇಶ ಕಳುಹಿಸಲು ನಿರ್ಧರಿಸಿದೆ.

ಈ ಧ್ವನಿ ಸಂದೇಶವನ್ನು ಕಳಿಸಲು ಖಾಸಗಿ ಏಜನ್ಸಿ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಟೆಂಡರ್ ಆಹ್ವಾನಿಸಿದೆ. ಇದು ಎರಡು ವರ್ಷದ ಅವಧಿಯ ಗುತ್ತಿಗೆ ಕೆಲಸವಾಗಿದ್ದು, ಹೊಸ ಮಾದರಿಯ ಟೆಂಡರ್ ಆಗಿರುವುದರಿಂದ ಕಡಿಮೆ ಹಣ ನಿಗದಿ ಪಡಿಸುವ ಸಂಸ್ಥೆಗೆ ಟೆಂಡರ್ ನೀಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಉಳಿಸಿಕೊಂಡವರ ಮೊಬೈಲ್‌ಗೆ ಸಂದೇಶ ರವಾನೆ ಎಷ್ಟು ಹೇಗೆ

1) ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಾರದ ಎಲ್ಲ ದಿನವೂ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆ ನಡುವಿನ ಅವಧಿಯಲ್ಲಿ ಈ ಸಂದೇಶ ರವಾನೆಯಾಗಲಿದೆ.

2) 10,000 ರೂಪಾಯಿ ಒಳಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ತಿಂಗಳಿಗೆ ಒಂದು ದ್ವನಿ ಸಂದೇಶ ಹೋಗಲಿದೆ.

3) 10,000 ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ತೆರಿಗೆ ಬಾಕಿದಾರರಿಗೆ ತಿಂಗಳಿಗೆ ಎರಡು ಬಾರಿ ಸಂದೇಶ ರವಾನೆಯಾಗಲಿದೆ.

4) 1 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ 3 ಬಾರಿ ಸಂದೇಶ ಹೋಗಲಿದೆ.

5) 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ತನಕ ತೆರಿಗೆ ಬಾಕಿದಾರರಿಗೆ 4 ಬಾರಿ ಸಂದೇಶ ಕಳುಹಿಸಲಾಗುತ್ತದೆ.

6) 1 ಕೋಟಿ ರೂಪಾಯಿಗಿಂತ ಹೆಚ್ಚಿನ ಬಾಕಿ ಉಳಿಸಿಕೊಂಡವರಿಗೆ ಮಾಸಿಕ 8 ಬಾರಿ ಧ್ವನಿ ಸಂದೇಶ ಹೋಗಲಿದೆ.

6 ಲಕ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ಬಾಕಿ

ಎ ಖಾತಾ ಅಥವಾ ಬಿ ಖಾತಾ ರಿಜಿಸ್ಟ್ರಿಯಲ್ಲಿ 20 ಲಕ್ಷ ಆಸ್ತಿಗಳ ನೋಂದಣಿ ಆಗಿದೆ. ಇವೆಲ್ಲವೂ ಆಸ್ತಿ ತೆರಿಗೆ ಪಾವತಿಸಲು ಬದ್ಧವಾಗಿದೆ. ಆದರೆ, 6 ಲಕ್ಷಕ್ಕೂ ಹೆಚ್ಚು ಆಸ್ತಿಗಳ ತೆರಿಗೆ ಪಾವತಿಯಾಗಿಲ್ಲ. ತೆರಿಗೆ ಪಾವತಿಯ ವಿಳಂಬವಾದರೆ ಅದರ ಮೇಲೆ ಗರಿಷ್ಠ ದಂಡ ಮತ್ತು ಬಡ್ಡಿ ವಿಧಿಸುವುದಕ್ಕೆ ಪಾಲಿಕೆಗೆ ಅವಕಾಶ ಇದೆ. ಇದೇ ರೀತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಆಸ್ತಿ ಮುಟ್ಟುಗೋಲು ಮುಂತಾದ ಕ್ರಮಕ್ಕೂ ಅವಕಾಶ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಐವಿಆರ್‌ಎಸ್‌ ಸೇವೆಯು ತೆರಿಗೆ ಬಾಕಿ ಉಳಿಸಿಕೊಂಡ ಲಕ್ಷಗಟ್ಟಲೆ ನಾಗರಿಕರಿಗೆ ತೊಂದರೆ-ಮುಕ್ತ ಅನುಸರಣೆಗೆ ನೆರವಾಗುತ್ತದೆ. ಐವಿಆರ್‌ಎಸ್ ಸೇವೆಯನ್ನು ಕರೆ ಮಾಡಲು ಮತ್ತು ತೆರಿಗೆ ಸುಸ್ತಿದಾರರಿಗೆ ತೆರಿಗೆ ಪಾವತಿಸುವುದಕ್ಕೆ ನೆನಪಿಸಲು ಮಾತ್ರವಲ್ಲದೆ, ಸಹಾಯ 2.0 ಮತ್ತು ಇತರ ಪೋರ್ಟಲ್‌ಗಳ ಮೂಲಕ ನಾಗರಿಕರಿಂದ ಅವರ ದೂರುಗಳ ಬಗ್ಗೆ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಸಹ ಅನುಕೂಲಕರ.

ತೆರಿಗೆ ಸುಸ್ತಿದಾರರಿಗೆ ದಿನಕ್ಕೆ ಸುಮಾರು 60,000 ರಿಂದ 70,000 ಫೋನ್ ಕರೆಗಳನ್ನು ಮಾಡುವ ಗುರಿಯನ್ನು ಪಾಲಿಕೆ ಹೊಂದಿದೆ. ಪಾಲಿಕೆಯು ನಾಗರಿಕರ ಪ್ರಶ್ನೆಗಳಿಗೆ ಎಐ ಆಧಾರಿತ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

'

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ