ಬಿಇ, ಬಿಟೆಕ್, ಬಿಎಸ್ಸಿ, ಎಂಬಿಎ, ಎಂಎಸ್‌ಡಬ್ಲ್ಯು ಆದವರಿಗೆ ಬಿಇಎಲ್ ಉದ್ಯೋಗ, 232 ಪ್ರೊಬೆಷನರಿ ಅಧಿಕಾರಿ ಹುದ್ದೆ, ಪ್ಯಾಕೇಜ್ 12 ಲಕ್ಷ ರೂ
Oct 06, 2023 03:15 PM IST
ಬಿಇಎಲ್ ಉದ್ಯೋಗ ನೇಮಕಾತಿ
BEL Jobs 2023: ಬಿಇ, ಬಿಟೆಕ್, ಬಿಎಸ್ಸಿ ಇಂಜಿನಿಯರಿಂಗ್ ಮುಗಿದಿದೆಯೇ, ಎಂಬಿಎ ಎಚ್‌ಆರ್, ಎಂಎಸ್‌ಡಬ್ಲ್ಯು ಮಾಡಿದ್ದೀರಾ, ಉದ್ಯೋಗಾವಕಾಶಕ್ಕಾಗಿ ಎದುರು ನೋಡುತ್ತಿದ್ದೀರಾ ಇಲ್ಲಿದೆ ನೋಡಿ ಭರ್ಜರಿ ಆಫರ್. ಭಾರತ ಸರ್ಕಾರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿದೆ 232 ಪ್ರೊಬೆಷನರಿ ಅಧಿಕಾರಿ ಹುದ್ದೆ. ತಿಂಗಳಿಗೆ 1 ಲಕ್ಷ ರೂಪಾಯಿ ವೇತನ. ಉಳಿದ ವಿವರ ಹೀಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಪ್ರೊಬೆಷನರಿ ಅಧಿಕಾರಿಗಳ 232 ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇರುವ ಬಿಇಎಲ್ ಘಟಕಗಳಲ್ಲಿ ಈ ಉದ್ಯೋಗ ಅವಕಾಶ ಇರುವಂಥದ್ದು.
ಬಿಇಎಲ್ ಪ್ರೊಬೇಷನರಿ ಇಂಜಿನಿಯರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಬಿಇಎಲ್‌ನ ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 28 ಕೊನೇ ದಿನ. ಅರ್ಹತೆ, ವೇತನ ಮತ್ತು ಇತರೆ ಮಾಹಿತಿ ಹೀಗಿದೆ.
ಬಿಇಎಲ್‌ನಲ್ಲಿರುವ ಪ್ರೊಬೆಷನರಿ ಅಧಿಕಾರಿಗಳ ಖಾಲಿ ಹುದ್ದೆಗಳ ವಿವರ
- ಪ್ರೊಬೆಷನರಿ ಎಂಜಿನಿಯರ್ ಹುದ್ದೆಗಳು 205
- ಪ್ರೊಬೆಷನರಿ ಅಧಿಕಾರಿ ಹುದ್ದೆಗಳು 12
- ಪ್ರೊಬೆಷನರಿ ಅಕೌಂಟ್ಸ್ ಆಫೀಸರ್ ಹುದ್ದೆಗಳು 15
- ಒಟ್ಟು ಹುದ್ದೆಗಳ ಸಂಖ್ಯೆ 232
ಬಿಇಎಲ್‌ನಲ್ಲಿರುವ ಪ್ರೊಬೆಷನರಿ ಅಧಿಕಾರಿಗಳ ಖಾಲಿ ಹುದ್ದೆಗಳ ಅಹರ್ತಾ ಮಾನದಂಡ
ಪ್ರೊಬೇಷನರಿ ಇಂಜಿನಿಯರ್: ಅಗತ್ಯ ವಿಷಯದಲ್ಲಿ ಬಿ.ಇ / ಬಿ.ಟೆಕ್ / ಬಿ.ಎಸ್ಸಿ ಎಂಜಿನಿಯರಿಂಗ್ ಪದವೀಧರರು
ಪ್ರೊಬೇಷನರಿ ಅಧಿಕಾರಿ: ಎರಡು ವರ್ಷಗಳ ಎಂಬಿಎ/ಎಂಎಸ್‌ಡಬ್ಲ್ಯ/ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಪಿಜಿ ಡಿಪ್ಲೊಮಾ / ಇಂಡಸ್ಟ್ರಿಯಲ್ ರಿಲೇಶನ್ಸ್/ಪರ್ಸನಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ.
ಪ್ರೊಬೇಷನರಿ ಅಕೌಂಟ್ಸ್ ಆಫೀಸರ್ : ಸಿಎ/ಸಿಎಂಎ ಫೈನಲ್
ಬಿಇಎಲ್‌ನಲ್ಲಿರುವ ಪ್ರೊಬೆಷನರಿ ಅಧಿಕಾರಿಗಳ ಖಾಲಿ ಹುದ್ದೆಗಳ ವಯೋಮಿತಿ
ಮೀಸಲಾತಿ ಸೌಲಭ್ಯವಿಲ್ಲದ ಅಭ್ಯರ್ಥಿಗಳಿಗೆ 2023ರ ಸೆಪ್ಟೆಂಬರ್ 1ಕ್ಕೆ ಅನ್ವಯವಾಗುವಂತೆ ಗರಿಷ್ಠ ವಯಸ್ಸಿನ ಮಿತಿಯು ಪ್ರೊಬೇಷನರಿ ಇಂಜಿನಿಯರ್ ಮತ್ತು ಪ್ರೊಬೇಷನರಿ ಆಫೀಸರ್ (ಎಚ್‌ಆರ್) ಹುದ್ದೆಗೆ 25 ವರ್ಷ. ಪ್ರೊಬೇಷನರಿ ಅಕೌಂಟ್ಸ್ ಅಧಿಕಾರಿ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ 30 ವರ್ಷ.
ಬಿಇಎಲ್‌ನಲ್ಲಿರುವ ಪ್ರೊಬೆಷನರಿ ಅಧಿಕಾರಿಗಳ ಖಾಲಿ ಹುದ್ದೆಗಳ ಅರ್ಜಿ ಶುಲ್ಕ
ಜನರಲ್/ಆರ್ಥಿಕವಾಗಿ ಹಿಂದುಳಿದ ವರ್ಗ /ಒಬಿಸಿ(ಎನ್‌ಸಿಎಲ್) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 1000 ರೂಪಾಯಿ + ಜಿಎಸ್‌ಟಿ ಸೇರಿಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ,. ಅಂದರೆ ರೂ. 1180 ರೂಪಾಯಿ ಆಗುತ್ತದೆ. ಇನ್ನು ಎಸ್‌ಸಿ/ ಎಸ್‌ಟಿ/ PwBD/ ಇಎಸ್‌ಎಂ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಬಿಇಎಲ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
ಬಿಇಎಲ್ ಪ್ರೊಬೆಷನರಿ ಆಫೀಸರ್ಸ್ ನೇಮಕಾತಿ ಅಕ್ಟೋಬರ್ 2023 ಅಧಿಸೂಚನೆಯ ಪಿಡಿಎಫ್
‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್
“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.