Bengaluru Power Cuts: ಕತ್ತಲಲ್ಲಿ ಕೃಷ್ಣಾಷ್ಟಮಿ ಆಚರಿಸಬೇಕಷ್ಟೆ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು, ನಾಳೆ, ನಾಡಿದ್ದು ಕರೆಂಟ್ ಇರಲ್ಲ
Sep 05, 2023 02:33 PM IST
ಬೆಂಗಳೂರಿನಲ್ಲಿ ವಿವಿಧೆಡೆ ನಿರ್ವಹಣಾ ಕಾಮಗಾರಿಯನ್ನು ಬೆಸ್ಕಾಂ ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿದೆ. ಬೆಂಗಳೂರಿನಲ್ಲಿ ಪವರ್‌ಕಟ್ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಇರಬಹುದು ಎಂದು ನಿರೀಕ್ಷಿಸಲಾಗಿದೆ. (ಸಾಂಕೇತಿಕ ಚಿತ್ರ)
Bengaluru Power Cuts: ಬೆಂಗಳೂರಿನ ವಿವಿಧೆಡೆ ನಿಯತ ನಿರ್ವಹಣೆ ಕಾರ್ಯ ಮತ್ತು ಇತರೆ ಕಾಮಗಾರಿಗಳನ್ನು ಬೆಸ್ಕಾಂ ಕೈಗೆತ್ತಿಕೊಂಡಿದೆ. ಹೀಗಾಗಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಇಂದಿನಿಂದ ಮೂರು ದಿನ ಕರೆಂಟ್ ಸರಿಯಾಗಿ ಇರಲ್ಲ. ಕೃಷ್ಣಜನ್ಮಾಷ್ಟಮಿಯ ದಿನವೂ ಪವರ್‌ಕಟ್ ಸಮಸ್ಯೆ ಎದುರಾದೀತು. ಯಾವ ಏರಿಯಾದಲ್ಲಿ ಕರೆಂಟ್ ಇರಲ್ಲ, ಇಲ್ಲಿದೆ ನೋಡಿ ಮಾಹಿತಿ.
ಕರ್ನಾಟಕದ ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಗುರುವಾರದ ತನಕ ಪವರ್ ಕಟ್ ಚಾಲ್ತಿಯಲ್ಲಿರಲಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆ ಹೊರಡಿಸಿದ್ದು, ನಿಯತವಾದ ನಿರ್ವಹಣೆ ಮತ್ತು ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವ ಕಾರಣ ಇಂದು, ನಾಳೆ ಮತ್ತು ನಾಡಿದ್ದು ಅಂದರೆ ಮಂಗಳವಾರ (ಸೆ.5) ಬುಧವಾರ ಮತ್ತು ಗುರುವಾರ ಪವರ್ ಕಟ್ ಇರಲಿದೆ ಎಂದು ತಿಳಿಸಿದೆ.
ನಿಯತ ನಿರ್ವಹಣಾ ಯೋಜನೆ ಜತೆಗೆ ಮರುನಿರ್ವಾಹಕ, ವಿದ್ಯುತ್ ಲೈನ್‌ಗಳಲ್ಲಿರುವಲ್ಲಿ ಅಡ್ಡಿ ಆಗುತ್ತಿರುವ ಅರಣ್ಯ ನಿವಾರಣೆ, ಮರಗಳನ್ನು ಕತ್ತರಿಸುವುದು ಮುಂತಾದ ಕೆಲಸಗಳು ಪ್ರಗತಿಯಲ್ಲಿವೆ. ಹೀಗಾಗಿ ಬೆಂಗಳೂರಿನ ಈ ಪ್ರದೇಶಗಳ ಜನರಿಗೆ ಇಂದು, ನಾಳೆ ಮತ್ತು ನಾಡಿದ್ದು ಕರೆಂಟ್ ಇರಲ್ಲ ಎಂದು ಬೆಸ್ಕಾಂ ಹೇಳಿದೆ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು (ಸೆ.5) ಕರೆಂಟ್ ಇರಲ್ಲ
ಮತಿ, ಆಂಜನೇಯ ನಗರ, ಗೊನ್ವಾಡಾ, ಗೊನ್ವಾಡಾ ಕ್ಯಾಂಪ್, ಹೂವಿನಮಡು ಮತ್ತು ತಿಮ್ಮಪ್ಪ ಕ್ಯಾಂಪ್, ನಾಗರಸಹಳ್ಳಿ, ಜಡಗನಹಳ್ಳಿ ಗ್ರಾಮ, ಗುಂಡಿಮಡು, ಅಗ್ರಹಾರ, ಕುನಗಳ್ಳಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಕಾಂಚಿಪುರ ಗ್ರಾ.ಪಂ., ಕೈನೋಡು ಗ್ರಾ.ಪಂ.,ಮಾತೋಡು ಗ್ರಾ.ಪಂ, ಕರೆಹಳ್ಳಿ ಗ್ರಾಪಂ, ರಾಮಲಿಂಗಪುರ, ಸಲಾಪುರ, ಬಾಲಪುರ, ಮಾದೇನಯಹಳ್ಳಿ ಮನ್ನಮ್ಮ ದೇವಾಲಯ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ರಾಜಾಜಿನಗರ 2ನೇ ಮುಖ್ಯರಸ್ತೆ 4ನೇ ಬ್ಲಾಕ್, ಗುಬ್ಬಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, ಅಪೋಲೋ ಬಾರ್ ಡಿಟಿಸಿ - 38, ಅಪೋಲೋ ಬಾರ್ 7ನೇ ಕ್ರಾಸ್, ರಾಜಾಜಿನಗರ 6ನೇ ಬ್ಲಾಕ್, ಜಿಕೆಡಬ್ಲ್ಯು ಲೇಔಟ್, ಸುವರ್ಣಾ ಲೇಔಟ್, ಅನುಭವನಗರ, ಪ್ರಿಯದರ್ಶಿನಿ ಲೇಔಟ್, ಪಿಎಫ್ ಲೇಔಟ್, ಶಿವಾನಂದ ನಗರ, ಇಂಡಸ್ಟ್ರಿಯಲ್ ಟೌನ್ 1. 2, 3ನೇ ಮೇನ್, ಎ.ಡಿ.ಹಳ್ಳಿ, ಕುವೆಂಪು ರಂಗಮಂದಿರ ಪಾರ್ಕ್, ವೀರಭದ್ರೇಶ್ವರ ಥಿಯೇಟರ್, ಬೆಮಲ್ ಲೇಔಟ್ ಭಾಗ, ಮಣಿವಿಲಾಸ್ ಗಾರ್ಡನ್, ಎನ್‌ಜಿಒ ಕಾಲೋನಿ, ಕಮಲಾನಗರ ಸರ್ಕಾರಿ ಶಾಲೆ, ವೃಷಭಾವತಿ ನಗರ, ಚಂದ್ರ ನಗರ, ಪಶು ಆಸ್ಪತ್ರೆ, ಶಂಕರ್ ನಾಗ್ ಬಸ್ ನಿಲ್ದಾಣ ಮತ್ತು ಕಮಲಾ ನಗರ ಸುತ್ತಮುತ್ತ.
ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ (ಸೆ.6) ಅಷ್ಟಮಿ ದಿನ ಕರೆಂಟ್ ಇರಲ್ಲ..
ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಮತೋಡ್ ಗ್ರಾ.ಪಂ., ಕರೇಹಳ್ಳಿ ಗ್ರಾ.ಪಂ., ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ಮಣ್ಣಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಗುಬ್ಬಣ್ಣ ಇಂಡಸ್ಟ್ರಿಯಲ್ ಎಸ್ಟೇಟ್, 6ನೇ ಬ್ಲಾಕ್, ರಾಜಾಜಿನಗರ, ಅಪೋಲೋ ಬಾರ್ ಡಿಟಿಸಿ - 38, ಅಪೋಲೋ ಬಾರ್ 7ನೇ ಕ್ರಾಸ್, ಸುಬ್ಬಣ್ಣ ಗಾರ್ಡನ್, ಆದಾಯ ತೆರಿಗೆ ಲೇಔಟ್, ವಿಡಿಯಾ ಲೇಔಟ್, ಮಾರೇನಹಳ್ಳಿ, ಮಾರುತಿ ನಗರ 1ನೇ, 2ನೇ, 3ನೇ ಮುಖ್ಯ, ಇಂಡಸ್ಟ್ರಿಯಲ್ ಟೌನ್, ಎ.ಡಿ.ಹಳ್ಳಿ, ಕಾಮಾಕ್ಷಿಪಾಳ್ಯ, ಕಾಮಾಕ್ಷಿಪಾಳ್ಯ. ಸ್ವಯಂ ಪ್ರಭಾ ರಸ್ತೆ, ಆರೋಗ್ಯ ಕೇಂದ್ರ, ಗಡಿ ಮುದ್ದಣ್ಣ ರಸ್ತೆ, ನಾಜಪ್ಪ ಫ್ಲೋರ್ ಮಿಲ್ ಮತ್ತು ಎಂಎಲ್‌ಎ ಹೌಸ್ ಸುತ್ತಮುತ್ತ
ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.7ರಂದು ಕರೆಂಟ್ ವ್ಯತ್ಯಯವಾಗಲಿದೆ
ಗುಂಡಿಮಡು, ಅಗ್ರಹಾರ, ಕುಣಗಲಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಬೆಳಗೂರು ಗ್ರಾ.ಪಂ, ಬಲ್ಲಸಮುದ್ರ ಗ್ರಾ.ಪಂ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ರಾಜಾಜಿನಗರ 1 ಮತ್ತು 2ನೇ ಬ್ಲಾಕ್, ಸುಬ್ಬನ ಗಾರ್ಡನ್, ವಿನಾಯಕ ಲೇಔಟ್, ಬಾಪೂಜಿ ಲೇಔಟ್, ಚಂದ್ರಾ ಲೇಔಟ್ 60 ಅಡಿ ರಸ್ತೆ, ವೈಯಾಲಿಕಾವಲ್ ಲೇಔಟ್, ಕೆಪಿಎ ಬ್ಲಾಕ್, ಡಬ್ಲ್ಯೂಸಿಆರ್, 1ನೇ, 2ನೇ, 3ನೇ ಮುಖ್ಯ, ಇಂಡಸ್ಟ್ರಿಯಲ್ ಟೌನ್, ಎ.ಡಿ.ಹಳ್ಳಿ, ಕೆಂಪೇಗೌಡ ಭಾಗ, ಲಕ್ಷ್ಮಿ ನಗರ, ಕರ್ನಾಟಕ, ಲಾ1ನೇ ಕಾಲೋನಿ ಕಾವೇರಿ ನಗರ, ಕಸ್ತೂರಿ ಲೇಔಟ್, ಚಂದ್ರ ನಗರ, ಕಮಲಾ ನಗರದ ಭಾಗ, ಎನ್‌ಜಿಒ ಕಾಲನಿ, ಕುರುಬರಹಳ್ಳಿ ಸುತ್ತಮುತ್ತ.