Bengaluru Metro: ಬೆಂಗಳೂರಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯ; ತಡರಾತ್ರಿಯೂ ಇರಲಿದೆ ನಮ್ಮ ಮೆಟ್ರೋ, ಟಿಕೆಟ್ ದರ, ಸಮಯದ ವಿವರ ಹೀಗಿದೆ
Mar 23, 2024 09:11 AM IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ತಡರಾತ್ರಿಯೂ ಇರಲಿದೆ. (ಸಾಂಕೇತಿಕ ಚಿತ್ರ)
Bengaluru Metro Updates: ಬೆಂಗಳೂರಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ತಡರಾತ್ರಿಯೂ ಇರಲಿದೆ. ಈ ದಿನಗಳಲ್ಲಿ ಕಾಗದದ ಟಿಕೆಟ್ ದರ, ಸಮಯದ ವಿವರ ಹೀಗಿದೆ.
ಬೆಂಗಳೂರು: ಸದ್ಯ ಐಪಿಎಲ್ ಹವಾ. ಬೆಂಗಳೂರಿಗರು ಕೂಡ ಬೆಂಗಳೂರಿನ ಐಪಿಎಲ್ ಪಂದ್ಯಗಳಿಗೆ ಸಾಕ್ಷಿಯಾಗಲು ಕಾತರರಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ತಡರಾತ್ರಿಯೂ ಇರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಪಂದ್ಯಗಳನ್ನು ವೀಕ್ಷಿಸಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಮತ್ತು ತಡರಾತ್ರಿ ಅಲ್ಲಿಂದ ಹಿಂದಿರುಗುವ ಕ್ರಿಕೆಟ್ ಅಭಿಮಾನಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 25,29, ಏಪ್ರಿಲ್ 2ರಂದು ಐಪಿಎಲ್ ಪಂದ್ಯಗಳು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 25, 29 ಮತ್ತು ಏಪ್ರಿಲ್ 2 ರಂದು ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಹೀಗಾಗಿ ಈ ದಿನಗಳಲ್ಲಿ ಬೆಂಗಳೂರಿನ ನಾಲ್ಕು ಮೆಟ್ರೋ ಟರ್ಮಿನಲ್‌ಗಳಿಂದ ರಾತ್ರಿ 11.30ಕ್ಕೆ ಕೊನೆಯ ರೈಲು ಸೇವೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ದಿನಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತರ ಐಪಿಎಲ್ ತಂಡಗಳನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ಪ್ರವೇಶಿಸಬಹುದಾದ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಹತ್ತುವ ಮತ್ತು ಇಳಿಯುವವರಿಗೆ ಈ ದಿನಗಳಲ್ಲಿ ಕಾಗದದ ಟಿಕೆಟ್ ನೀಡಲಾಗುವುದು ಎಂದು ಬೆಂಗಳೂರು ಮೆಟ್ರೋ ತಿಳಿಸಿದೆ.
ಕಬ್ಬನ್ ಪಾರ್ಕ್, ಎಂಜಿ ರಸ್ತೆಯಿಂದ ಯಾವುದೇ ನಿಲ್ದಾಣಕ್ಕೆ 50 ರೂ. ಕಾಗದ ಟಿಕೆಟ್ ದರ
ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಒಂದು ಪ್ರಯಾಣಕ್ಕೆ ಈ ಕಾಗದದ ಟಿಕೆಟ್ ಬೆಲೆ 50 ರೂಪಾಯಿ ಇರಲಿದೆ. ಈ ಪೇಪರ್ ಟಿಕೆಟ್‌ಗಳ ಜೊತೆಗೆ, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್ ಟಿಕೆಟ್‌ಗಳ ಮೂಲಕ ಸಾಮಾನ್ಯ ದರದಲ್ಲಿ ಕೂಡ ಪ್ರಯಾಣ ಮಾಡುವುದಕ್ಕೆ ಅನುಮತಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಏತನ್ಮಧ್ಯೆ, ಬಿಡದಿ ಹಾಫ್ ಮ್ಯಾರಥಾನ್ ನಲ್ಲಿ ಭಾಗವಹಿಸಲಿರುವ ಜನರಿಗೆ ನಮ್ಮ ಮೆಟ್ರೋ ಭಾನುವಾರದಿಂದ ಆರಂಭಿಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆಯಲಿರುವ ಬಿಡದಿ ಹಾಫ್ ಮ್ಯಾರಥಾನ್ ನಲ್ಲಿ ಭಾಗವಹಿಸಲು ಜನರಿಗೆ ಅನುಕೂಲವಾಗುವಂತೆ ಬಿಎಂಆರ್ ಸಿಎಲ್ ತನ್ನ ಎಲ್ಲ ನಾಲ್ಕು ಟರ್ಮಿನಲ್ ಗಳಿಂದ ಬೆಳಿಗ್ಗೆ 07:00 ರ ಬದಲು ಬೆಳಿಗ್ಗೆ 04:30 ರಿಂದ ಮತ್ತು ಇಂಟರ್ ಚೇಂಜ್ ನಿಲ್ದಾಣ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ- ಮೆಜೆಸ್ಟಿಕ್ ನಿಂದ ರೈಲು ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ಹೇಳಿದೆ.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್, ಏಕದಿನ ಕ್ರಿಕೆಟ್, ಟೆಸ್ಟ್ ಕ್ರಿಕೆಟ್, ಸೇರಿದಂತೆ ಕ್ರಿಕೆಟ್ ಸುದ್ದಿ, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಐಪಿಎಲ್ ವೇಳಾಪಟ್ಟಿ, ಮ್ಯಾಚ್ ಅಪ್‌ಡೇಟ್, ಕ್ರಿಕೆಟ್ ವೇಳಾಪಟ್ಟಿ ನೋಡಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರಿಕೆಟ್ ವಿಭಾಗ ನೋಡಿ.
ಓದಬಹುದಾದ ಇನ್ನಷ್ಟು ಕ್ರಿಕೆಟ್ ಸುದ್ದಿಗಳು
1) ಆರ್‌ಸಿಬಿ vs ಸಿಎಸ್‌ಕೆ; ಐಪಿಎಲ್ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ
2) ರಿಷಭ್ ಪಂತ್ ಇನ್, ಡೇವಿಡ್ ವಾರ್ನರ್ ಔಟ್; ಪಂಜಾಬ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
3) ಡಬಲ್ ಸಂಭ್ರಮಕ್ಕಿದೆ ಅವಕಾಶ; ‘ಈ ಸಲ ಕಪ್ ನಮ್ದು’ ಎಂದು ಆರ್‌ಸಿಬಿ ಪುರುಷರ ತಂಡಕ್ಕೆ ಚಿಯರ್ ಮಾಡಿದ ಎಲ್ಲಿಸ್ ಪೆರ್ರಿ