Bengaluru News: ಬೆಂಗಳೂರು ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಹೊಸ ಹೆಸರು, 73 ಕಿಮೀಗೆ ವಿಸ್ತರಣೆ, ಶೀಘ್ರ ಟೆಂಡರ್
Jan 27, 2024 01:13 PM IST
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಹೆಸರು ಮರುನಾಮಕರಣ ಸಾಧ್ಯತೆ. (ಸಾಂಕೇತಿಕ ಚಿತ್ರ)
Bengaluru's Peripheral Ring Road Project: ಎಂಟು ಪಥಗಳ ಬೆಂಗಳೂರು ಪೆರಿಫೆರಲ್ ವರ್ತುಲ ರಸ್ತೆ ಯೋಜನೆ ಹೊಸ ಹೆಸರಿನೊಂದಿಗೆ ಮತ್ತೆ ಚಾಲ್ತಿಗೆ ಬರುತ್ತಿದೆ. ಈ ಸಲ ಈ ಯೋಜನೆಯು 73 ಕಿಮೀಗೆ ವಿಸ್ತರಣೆಯಾಗಿದ್ದು, ಯೋಜನಾ ವೆಚ್ಚ ಕೂಡ 27,000 ಕೋಟಿ ರೂಪಾಯಿಗೆ ಏರಿದೆ.
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆ ಪ್ರಗತಿಯಲ್ಲಿದ್ದು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಮರುನಾಮಕರಣಗೊಳ್ಳಲಿದೆ. ಈ ಯೋಜನೆಗೆ 27,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರದ ಟೆಂಡರ್ ಪೂರ್ವ ಕಮಿಟಿಯಿಂದ ಅನುಮೋದನೆ ಕೂಡ ಸಿಕ್ಕಿದೆ.
ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ನಿವಾರಿಸಲು 18 ವರ್ಷಗಳ ಹಿಂದೆ ಪ್ರಸ್ತಾಪಿಸಲಾದ ಯೋಜನೆಯ ವೆಚ್ಚವು ಈಗ ಎರಡು ಪಟ್ಟು ಹೆಚ್ಚಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bangalore Development Authority) ಈ ಯೋಜನೆಯ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಟೆಂಡರ್ ಪೂರ್ವ ಕಮಿಟಿಯಿಂದ ಅನುಮೋದನೆ ಪಡೆದುಕೊಂಡಿದೆ. ಪ್ರಸ್ತಾವನೆ ಪ್ರಕಾರ, ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಜಾಗತಿಕ ಮಟ್ಟದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಕಮಿಟಿ ಸೂಚಿಸಿದ ಕೆಲವೊಂದು ಪರಿಷ್ಕರಣೆಗಳನ್ನು ಬಿಡಿಎ ಮಾಡಲಿದೆ ಎಂದು ವರದಿ ವಿವರಿಸಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರು ಬಳಸಬಹುದು. ಇದಕ್ಕಾಗಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆ, ಸೂಚನೆ ನೀಡುವಂತೆ ಬಿಬಿಎಂಪಿಯ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು ಮತ್ತು ಮುಖ್ಯ ಆರೋಗ್ಯ ಅಧಿಕಾರಿಯವರಿಗೆ ನಿರ್ದೇಶಿಸಲಾಗಿದೆ ಎಂದು ಹೈಕೋರ್ಟ್‌ಗೆ ನೀಡಿರುವ ಅಫಿಡವಿಟ್‌ನಲ್ಲಿ ಬಿಬಿಎಂಪಿ ತಿಳಿಸಿದೆ.
ಬೆಂಗಳೂರಿನಲ್ಲಿ 100 ಶಿ ಶೌಚಾಲಯಗಳು
ಬೆಂಗಳೂರು ಮಹಾನಗರದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ವಿಶೇಷವಾಗಿ ಮಹಿಳೆಯರಿಗೆ ಸೀಮಿತವಾದ 100 ಶಿ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ಉದ್ದೇಶಿಸಿದೆ. ಈ ಶೌಚಾಲಯಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆಯಲಾಗುವುದು. ಇಲ್ಲದೇ ಹೋದರೆ, 2024-25ನೇ ಸಾಲಿನ ಬಜೆಟ್‌ನಲ್ಲಿ ನಿಗದಿಪಡಿಸುವ 25.50 ಕೋಟಿ ರೂಪಾಯಿ ಅನುದಾನ ಬಳಸಿಕೊಂಡು ನಿರ್ಮಿಸಲಾಗುವುದು ಎಂದು ಕೋರ್ಟ್‌ಗೆ ಬಿಬಿಎಂಪಿ ತಿಳಿಸಿದೆ.
ಇನ್ನೊಂದೆಡೆ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯ ಜಾಗತಿಕ ಟೆಂಡರ್ ಘೋಷಣೆ ಜನವರಿ 29ಕ್ಕೆ ಅಥವಾ ಅದಕ್ಕೂ ಮೊದಲೇ ನಡೆಯಲಿದೆ. ಕರ್ನಾಟಕ ಸರ್ಕಾರದ ಪ್ರೀ ಟೆಂಡರ್ ಕಮಿಟಿ ಸೂಚಿಸಿದ ಬದಲಾವಣೆಗಳನ್ನು ಪ್ರಸ್ತಾವನೆಯಲ್ಲಿ ಮಾಡಲಾಗುತ್ತಿದ್ದು, ಅದು ಪೂರ್ಣಗೊಂಡ ಕೂಡಲೇ ಟೆಂಡರ್ ಪ್ರಕಟಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಹಿಂದಿನ ಟೆಂಡರ್‌ಗಳಿಗೆ ಉತ್ತಮ ಸ್ಪಂದನೆ ಸಿಕ್ಕಿರಲಿಲ್ಲ ಎಂಬುದರ ಕಡೆಗೂ ವರದಿ ಗಮನ ಸೆಳೆದಿದೆ.
ಏನಿದು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂಬುದು ಎಂಟು ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ವಿನ್ಯಾಸ, ನಿರ್ಮಾಣ, ಹಣಕಾಸು, ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಡಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲೂಕುಗಳ ಮೂಲಕ ಬೆಂಗಳೂರು ಮಹಾನಗರದ ಸುತ್ತಲೂ ಅರ್ಧ-ವೃತ್ತದ ಸಂಚಾರ ಪಥವನ್ನು ರೂಪಿಸುತ್ತದೆ. ಈ ಎಕ್ಸ್‌ಪ್ರೆಸ್ ಮಾರ್ಗಕ್ಕೆ ಪ್ರವೇಶ ಮತ್ತು ನಿರ್ಗಮನ ಬಿಂದುಗಳು ಇರಲಿದ್ದು, ಮಧ್ಯಂತರದಲ್ಲಿ ಹಲವೆಡೆ ಸೇವಾ ರಸ್ತೆಗಳನ್ನು ಒಳಗೊಂಡಿರುತ್ತದೆ.
ಪ್ರಸ್ತಾವಿತ ಯೋಜನೆಯು 73.03 ಕಿಮೀ ಉದ್ದ, 2,569 ಎಕರೆ 29.5 ಗುಂಟೆ ಭೂಮಿಯನ್ನು ಒಳಗೊಂಡಿದೆ. ತುಮಕೂರು ರಸ್ತೆ (NH-48) ನಿಂದ ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹಳೆಯ ಮದ್ರಾಸ್ ರಸ್ತೆ ಮತ್ತು ವೈಟ್‌ಫೀಲ್ಡ್ ರಸ್ತೆ ಮೂಲಕ ಹೊಸೂರು ರಸ್ತೆ (NH-44) ವರೆಗೆ ವಿಸ್ತರಿಸುತ್ತದೆ. ಯೋಜನಾ ವೆಚ್ಚದಲ್ಲಿ ಬಹುಲಾಲು ಭೂಸ್ವಾಧೀನ ವೆಚ್ಚಕ್ಕೆ ಅಂದರೆ 21,000 ಕೋಟಿ ರೂಪಾಯಿ ಹೋಗಲಿದೆ.
ಯೋಜನೆಗೆ ನಿಧಿಯನ್ನು ಪಡೆಯುವ ರಿಯಾಯಿತಿದಾರರಿಗೆ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 50 ವರ್ಷಗಳ ಗುತ್ತಿಗೆಯನ್ನು ನೀಡಲಾಗುತ್ತದೆ/ ಟೋಲ್ ಸಂಗ್ರಹ ಮತ್ತು ಜಾಹೀರಾತು ಹಕ್ಕುಗಳನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿ ಹೇಳಿದ್ದಾರೆ.
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಯೋಜನೆ ಹೀಗಿತ್ತು
ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್ ಯೋಜನೆಯು 2007ರಷ್ಟು ಹಳೆಯದು. 65.5 ಕಿಮೀ ಉದ್ದದ ಈ ಯೋಜನೆಯ ಅಂದಿನ ವೆಚ್ಚ 11,500 ಕೋಟಿ ರೂಪಾಯಿ. 1,810 ಎಕರೆ ಜಮೀನನ್ನು ಒಳಗೊಂಡಿತ್ತು. ಆದಾಗ್ಯೂ, ಭೂಸ್ವಾಧೀನ ಸವಾಲು ಮತ್ತು ನಂತರದ ಕಾನೂನು ವಿವಾದ ಕಾರಣ ಉಂಟಾದ ವಿಳಂಬದಿಂದ ಯೋಜನಾ ವೆಚ್ಚದಲ್ಲಿ ಎರಡು ಪಟ್ಟು ಹೆಚ್ಚಳ ಉಂಟಾಗಿದೆ.
ಯೋಜನೆಯು 2013 ರ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರವನ್ನು ಕೋರಿ ರೈತರಿಂದ ಕಾನೂನು ವಿರೋಧವನ್ನು ಎದುರಿಸಿತು. ಆದರೆ ಬಿಡಿಎ ಪೂರ್ವ ಅಸ್ತಿತ್ವದಲ್ಲಿರುವ ಕಾಯಿದೆಗೆ ಬದ್ಧವಾಗಿರುವುದನ್ನು ಖಚಿತಪಡಿಸಿತು. ಅಂತಿಮವಾಗಿ ಬಿಡಿಎ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.