logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು; ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ

ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು; ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ

Umesh Kumar S HT Kannada

Feb 03, 2024 09:41 AM IST

google News

ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು. ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ. ಈ ಫೋಟೋ 2023ರ ನವೆಂಬರ್ 29 ರಂದು 15 ಲಂಟಾನಾ ಆನೆಗಳು ಬೆಂಗಳೂರಿಗೆ ಬಂದಿಳಿದ ಸಂದರ್ಭದಲ್ಲಿ ಕನ್ಸರ್ವಿಂಗ್ ಸಿಐ ಎಕ್ಸ್‌ನಲ್ಲಿ ಶೇರ್ ಮಾಡಿದ್ದು.

  • ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು. ಹೌದು ಇವು ಸಹಬಾಳ್ವೆಯ ಸಂದೇಶ ಸಾರಲು ಬಂದಿರುವ ಆನೆಗಳಿವು. ಇಂದಿನಿಂದ ಇನ್ನೊಂದು ತಿಂಗಳು ಈ ಆನೆಗಳು ಹಿಂಡು ವಿಧಾನಸೌಧ ಸಮೀಪ, ಲಾಲ್‌ಬಾಗ್‌ ಮತ್ತಿತರೆಡೆ ಕಾಣಸಿಗುತ್ತವೆ. ಈ ಆನೆಗಳನ್ನು ನೋಡಬೇಕು, ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ..

ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು. ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ. ಈ ಫೋಟೋ 2023ರ ನವೆಂಬರ್ 29 ರಂದು 15 ಲಂಟಾನಾ ಆನೆಗಳು ಬೆಂಗಳೂರಿಗೆ ಬಂದಿಳಿದ ಸಂದರ್ಭದಲ್ಲಿ ಕನ್ಸರ್ವಿಂಗ್ ಸಿಐ ಎಕ್ಸ್‌ನಲ್ಲಿ ಶೇರ್ ಮಾಡಿದ್ದು.
ಬೆಂಗಳೂರಿಗೆ ವಲಸೆ ಬಂದಿದೆ 100 ಆನೆಗಳ ಗುಂಪು. ಈ ಸಹಬಾಳ್ವೆಯ ಹಬ್ಬದಲ್ಲಿ ಭಾಗವಹಿಸೋದಕ್ಕೆ ಮಾ 3 ರೊಳಗೆ ಲಾಲ್‌ಬಾಗ್‌ಗೆ ಬನ್ನಿ. ಈ ಫೋಟೋ 2023ರ ನವೆಂಬರ್ 29 ರಂದು 15 ಲಂಟಾನಾ ಆನೆಗಳು ಬೆಂಗಳೂರಿಗೆ ಬಂದಿಳಿದ ಸಂದರ್ಭದಲ್ಲಿ ಕನ್ಸರ್ವಿಂಗ್ ಸಿಐ ಎಕ್ಸ್‌ನಲ್ಲಿ ಶೇರ್ ಮಾಡಿದ್ದು. (@Conserving_CI)

ಕಾಡಿನ ಆನೆಗಳೆಲ್ಲ ನಾಡಿಗೆ ದಾಳಿ ಇಡುತ್ತಿರುವ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿವೆ ಆನೆಗಳ ಹಿಂಡು. ಗಾಬರಿಯಾಗಬೇಡಿ. ಇವು ಸಹಬಾಳ್ವೆಯ ಸಂದೇಶ ಸಾರಲು ಬಂದಿರುವ ಆನೆಗಳ ಗುಂಪು!

ನೀಲಗಿರಿ ಬೆಟ್ಟಗಳಲ್ಲಿ ನೈಜ ಕಾಡಾನೆಗಳಿಂದ ಸ್ಫೂರ್ತಿ ಪಡೆದ ನೂರಾರು ಬೃಹತ್ ಗಾತ್ರದ ಆನೆಗಳ ಹಿಂಡಿನ ದೃಶ್ಯವನ್ನು ಊಹಿಸಿಕೊಳ್ಳಿ. ಬೆಂಗಳೂರಿನ ನಗರ ಜೀವನದ ಜಂಜಾಟದ ನಡುವೆ ನಿಜಕ್ಕೂ ನೋಡಲೇಬೇಕಾದ ದೃಶ್ಯವಲ್ಲವೇ?

ಹೌದು, ಆನೆಗಾತ್ರದ 100 ಮರದ ಆನೆಗಳು ಬೆಂಗಳೂರಿನ ಲಾಲ್‌ಬಾಗ್‌ಗೆ ಬಂದಿವೆ. ಇಂದಿನಿಂದ ಒಂದು ತಿಂಗಳು ಅಂದರೆ ಮಾರ್ಚ್‌ 3 ರ ತನಕ ಈ ಆನೆಗಳ ಪ್ರದರ್ಶನ ಇರಲಿದೆ. ಅರವತ್ತು ಆನೆಗಳು ಲಾಲ್‌ಬಾಗ್‌ನಲ್ಲಿ ಇರಲಿದ್ದು, ಇವುಗಳ ಪ್ರದರ್ಶನದ ಉದ್ಘಾಟನೆ ಇಂದು (ಫೆ.3) ನಡೆಯಲಿದೆ. ಉಳಿದ ಆನೆಗಳ ಸಣ್ಣ ಸಣ್ಣ ಗುಂಪುಗಳು ಸಮೀಪದ ಮೆಟ್ರೋ ನಿಲ್ದಾಣಗಳು, ಟೆಕ್ ಕ್ಯಾಂಪಸ್‌ಗಳು ಮತ್ತು ಕಾಲೇಜುಗಳ ಆವರಣಗಳಲ್ಲಿ ಇರಿಸಲಾಗುತ್ತದೆ.

ಬೆಂಗಳೂರಿನಲ್ಲಿ ಮಾ 3 ರ ತನಕ ನಡೆಯಲಿದೆ ಸಹಬಾಳ್ವೆಯ ಹಬ್ಬ

ಬೆಂಗಳೂರು ಲಾಲ್‌ಬಾಗ್ ಸುತ್ತಮುತ್ತ ಮಾರ್ಚ್ 3 ರ ತನಕ 100 ಆನೆಗಳು ಸಹಬಾಳ್ವೆಯ ಕಥೆಗಳನ್ನು ಹೇಳಲಿವೆ. ಇದು ಸಹಬಾಳ್ವೆಯ ಹಬ್ಬ. ಹೌದು ಈ 100 ಆನೆಗಳು ಸಹಬಾಳ್ವೆಯ ಕಥೆಗಳನ್ನು ಹೇಳುತ್ತಾ ಜಗತ್ತಿನಾದ್ಯಂತ ನಗರಗಳನ್ನು ಪ್ರವೇಶಿಸುತ್ತವೆ. ಬೆಂಗಳೂರಿನ ಪ್ರದರ್ಶನದ ಬಳಿಕ ಈ ಆನೆಗಳು ಅಮೇರಿಕಕ್ಕೆ ತೆರಳಲಿವೆ.

ಪ್ರತಿ ಆನೆಯು ದಕ್ಷಿಣ ಭಾರತದ ಕಾಡುಗಳ ನೈಜ ಕಾಡಾನೆಯ ಪ್ರತಿರೂಪವೇ ಆಗಿದೆ. ಸ್ಥಳೀಯ ಕುಶಲಕರ್ಮಿಗಳ ತಂಡ ರಚಿಸಿದ ಅದ್ಭುತ ಕಲಾಕೃತಿಗಳಿವು. ಪ್ರದರ್ಶನದಿಂದ ಬರುವ ಆದಾಯವನ್ನು ಈ ತಂಡ ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಸಹಬಾಳ್ವೆಗಾಗಿ ಬಳಸುತ್ತವೆ ಎಂದು ಕನ್ಸೋರ್ಟಿಯಂ ಕೋ ಎಕ್ಸಿಸ್‌ಟೆನ್ಸ್‌ನ ಭಾಗವಾಗಿರುವ ರಿಯಲ್ ಎಲಿಫೆಂಟ್‌ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

“ ಕೋಎಕ್ಸಿಸ್‌ಟೆನ್ಸ್: ದ ಗ್ರೇಟ್‌ ಎಲಿಫೆಂಟ್‌ ಮೈಗ್ರೇಶನ್‌ (Coexistence: The Great Elephant Migration)” ಎಂಬುದು ಕಲೆ, ಸಹಬಾಳ್ವೆಯ ಸಮರ್ಥನೆ ಮತ್ತು ಸಂರಕ್ಷಣೆಯನ್ನು ಒಗ್ಗೂಡಿಸುವ ಸಂದೇಶವನ್ನು ಹೊಂದಿದೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ವ್ಯಾಪಿಸಿರುವ ನೀಲಗಿರಿ ಅಭಯಾರಣ್ಯದ ಸಮೀಪದಲ್ಲಿರುವ ಬುಡಕಟ್ಟು ಜನರ ಜೊತೆಗೆ ಸಹಬಾಳ್ವೆ ನಡೆಸುವ ಆನೆಗಳ ಪ್ರತಿರೂಪಗಳಿವು.

ಲಂಟಾನಾ ಆನೆಗಳು 150 ಬುಡಕಟ್ಟು ಕುಶಲಕರ್ಮಿಗಳ ಕೈಚಳಕದ ಫಲ

ಲಂಟಾನಾ ಕ್ಯಾಮಾರದಿಂದ ಆನೆಗಳ ಶಿಲ್ಪವನ್ನು ಸಿದ್ಧಪಡಿಸಲಾಗಿದೆ. ಲಂಟಾನಾ ಕ್ಯಾಮಾರ ಆನೆಗಳ ಪಾಲಿಗೆ ವಿಷಕಾರಿ ಕಳೆ. ಇವು ಆನೆಗಳ ಮೇವಿನ ನೆಲೆಯನ್ನು ಕಸಿದುಕೊಳ್ಳುವಂಥವು. ನೀಲಗಿರಿಯ ತಪ್ಪಲಲ್ಲಿರುವ 150 ಬುಡಕಟ್ಟು ಕುಶಲಕರ್ಮಿಗಳು ಲಂಟಾನ ಆನೆಗಳನ್ನು ತಯಾರಿಸುವ ಮೂಲಕ ಜೀವನೋಪಾಯವನ್ನು ಗಳಿಸುತ್ತಿದ್ದಾರೆ. ಸಂರಕ್ಷಣಾ ಯೋಜನೆಗಳಿಗೆ ಹಣ ನೀಡಲು ಈ ಶಿಲ್ಪಗಳನ್ನು ಹರಾಜು ಮಾಡಲಾಗುತ್ತಿದೆ.

ಈ 150 ಕುಶಲಕರ್ಮಿಗಳು ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿರುವ ಸೋಲಿಗ, ಬೆಟ್ಟಕುರುಂಬ, ಕಟ್ಟುನಾಯಕನ ಸಮುದಾಯಕ್ಕೆ ಸೇರಿದವರು. ಇವರೆಲ್ಲಮುದುಮಲೈ, ಬಿಆರ್ ಹಿಲ್ಸ್, ಎಂಎಂ ಹಿಲ್ಸ್‌ನಿಂದ ಬಂದವರು ಎಂಬುದು ಗಮನಿಸಬೇಕಾದ ವಿಚಾರ.

ಸೃಜನಶೀಲ ಸ್ಪರ್ಶ ಮತ್ತು ಸಹಬಾಳ್ವೆಯ ಸಂದೇಶದ ಚೌಕಟ್ಟಿಗೆ ತಂದವರು ಇವರು

ರುತ್ ಗಣೇಶ್ ಮತ್ತು ತಾರ್ಶ್ ತೆಕೇಕರ ಅವರು ವಿನ್ಯಾಸಗೊಳಿಸಿದ ಮತ್ತು ಶುಭ್ರ ನಾಯರ್ ವಿನ್ಯಾಸಗೊಳಿಸಿದ ಪ್ರದರ್ಶನ ಇದು. ಈ ಪ್ರದರ್ಶನವು ರುತ್ ಅವರ ದೈತ್ಯ ಶಿಲ್ಪಕಲೆ, ಆನೆಗಳೊಂದಿಗೆ ತಾರ್ಶ್ ಅವರ ಕೆಲಸ, ಲಂಟಾನ ಮತ್ತು ಸ್ಥಳೀಯ ಕುಶಲಕರ್ಮಿಗಳೊಂದಿಗಿನ ಅವರ ಸಂಬಂಧ ಮತ್ತು ವಿನ್ಯಾಸಕ್ಕಾಗಿ ಶುಭ್ರ ಅವರ ವಿಶಿಷ್ಟ ರೀತಿಯ ನಿಧಿ ಸಂಗ್ರಹದ ಪ್ರದರ್ಶನವನ್ನು ಒಳಗೊಂಡಿದೆ. ರಂಜಿನಿ ಜಾನಕಿ, ಕುಟ್ಟಿ, ಸುಭಾಷ್ ಗೌತಮ್, ತಾರಿಕ್ ತೇಕೇಕರ ಮತ್ತು ತಂಡದ ಅನೇಕರ ಶ್ರಮ ಇದರಲ್ಲಿದೆ ಎಂದು ರಿಯಲ್ ಎಲಿಫೆಂಟ್‌ ವೆಬ್‌ನಲ್ಲಿರುವ ಮಾಹಿತಿ ವಿವರಿಸಿದೆ.

ಕೊಚ್ಚಿನ್‌ನ ಸಮುದ್ರ ತೀರದಲ್ಲಿ ನಡೆದಿತ್ತು ಲಂಟಾನಾ ಆನೆಗಳ ಮೊದಲ ಪ್ರದರ್ಶನ

ಸಹಬಾಳ್ವೆ ಸಾರುವ ಲಂಟಾನಾ ಆನೆಗಳ ಮೊದಲ ಪ್ರದರ್ಶನವು 2019ರಲ್ಲಿ ಕೊಚ್ಚಿನ್ ಕಡಲ ಕಿನಾರೆಯಲ್ಲಿ ನಡೆಯಿತು. ಅಂದು 45 ಲಂಟಾನಾ ಆನೆಗಳು ಪ್ರದರ್ಶನದಲ್ಲಿದ್ದವು. 2021ರಲ್ಲಿ ಲಂಡನ್‌ನಲ್ಲಿ ಇಂಥದ್ದೇ ಪ್ರದರ್ಶನ ನಡೆಯಿತು. ಅಲ್ಲಿ 125 ಆನೆಗಳಿದ್ದವು. 2022ರಲ್ಲಿ ಚೆನ್ನೈನಲ್ಲಿ 10 ಆನೆಗಳ ಪ್ರದರ್ಶನ ನಡೆಯಿತು. ಈಗ ಬೆಂಗಳೂರಿನಲ್ಲಿ 100 ಆನೆಗಳ ಪ್ರದರ್ಶನ ಶುರುವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ