logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ, ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ, ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯ

Umesh Kumar S HT Kannada

Aug 03, 2024 08:09 PM IST

google News

ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ ಹೇರಿದ ಸಂಚಾರ ಪೊಲೀಸರು ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.

  • ಬೆಂಗಳೂರು ಸಂಚಾರ ಪೊಲೀಸರ ಸಂಚಾರ ಸಲಹೆ ಪ್ರಕಾರ, ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಇದರ ವಿವರ ಇಲ್ಲಿದೆ. 

ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ ಹೇರಿದ ಸಂಚಾರ ಪೊಲೀಸರು ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದೊಳಗೆ ಭಾರಿ ವಾಹನ ಸಂಚಾರಕ್ಕೆ ಸಮಯ ನಿರ್ಬಂಧ ಹೇರಿದ ಸಂಚಾರ ಪೊಲೀಸರು ಎಚ್‌ಎಎಲ್‌ ಹೊರ ವರ್ತುಲ ರಸ್ತೆಯಲ್ಲಿ 10 ದಿನ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ. (HT News)

ಬೆಂಗಳೂರು: ಸಂಚಾರ ದಟ್ಟಣೆ ಬೆಂಗಳೂರಿನಲ್ಲಿ ಹೊಸದಲ್ಲ. ಆದಾಗ್ಯೂ, ಪ್ರತಿ ನಿತ್ಯ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಹೊಸ ಹೊಸ ಉಪಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಈಗ ಹೊಸ ಆದೇಶ ಪ್ರಕಾರ, ಭಾರಿ ವಾಹನಗಳ ನಗರ ಪ್ರವೇಶಕ್ಕೆ ಸಮಯ ನಿರ್ಬಂಧವನ್ನು ಹೇರಲಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ನಗರದಲ್ಲಿ ಭಾರೀ ಸರಕು ವಾಹನಗಳ ಸಂಚಾರಕ್ಕೆ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ.

ಶುಕ್ರವಾರ (ಆಗಸ್ಟ್ 2) ಹೊರಡಿಸಲಾದ ಅಧಿಕೃತ ಹೇಳಿಕೆಯ ಪ್ರಕಾರ, ಭಾರೀ ಸರಕು ವಾಹನಗಳನ್ನು ವಾರದ ಎಲ್ಲಾ ದಿನಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ನಿಷೇಧಿಸಲಾಗಿದೆ. ಈ ಸಂಬಂಧ ಪೊಲೀಸ್ ಆಯುಕ್ತರು ಅಧಿಸೂಚನೆ ಹೊರಡಿಸಿದ್ದು, ನಗರದಲ್ಲಿ ಸುಗಮ ಸಂಚಾರಕ್ಕೆ ನಿರ್ಬಂಧ ಅಗತ್ಯ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಭಾರಿ ಸರಕು ವಾಹನಗಳಿಗೆ ನಗರ ಪ್ರವೇಶಕ್ಕೆ ಸಮಯ ನಿರ್ಬಂಧ

ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7-11 ಮತ್ತು ಸಂಜೆ 4-10 ರವರೆಗೆ ಭಾರೀ ಸರಕು ವಾಹನಗಳು ಬೆಂಗಳೂರು ಮಹಾನಗರದ ಒಳಗಿರುವ ರಸ್ತೆಗಳಲ್ಲಿ ಸಂಚರಿಸುವಂತೆ ಇಲ್ಲ. ಇದಲ್ಲದೆ, ಎಲ್ಲಾ ಶನಿವಾರಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ಮತ್ತು ಸಂಜೆ 4.30-9 ರವರೆಗೆ ಭಾರಿ ಸರಕು ವಾಹನಗಳ ಸಂಚಾರವನ್ನು ನಗರದೊಳಗೆ ನಿಷೇಧಿಸಲಾಗಿದೆ. ವಾರದ ಉಳಿದ ಆರು ದಿನಗಳ ಮೇಲಿನ ನಿರ್ಬಂಧಗಳು ಮೊದಲಿನಂತೆಯೇ ಮುಂದುವರಿಯುತ್ತವೆ ಎಂದು ಬೆಂಗಳೂರು ಸಂಚಾರ ಪೊಲೀಸರ ಪ್ರಕಟಣೆ ಸ್ಪಷ್ಟಪಡಿಸಿದೆ.

ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯ ಮಾತು

ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಮಾಡುವ ಉದ್ದೇಶದೊಂದಿಗೆ ಭಾರಿ ವಾಹನಗಳಿಗೆ ನಗರ ಪ್ರವೇಶಕ್ಕೆ ಸಮಯ ನಿರ್ಬಂಧ ಹೇರಿದ ಕುರಿತು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ ವಿಡಿಯೋ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ಇನ್ನು 10 ದಿನ ಸಂಚಾರ ವ್ಯತ್ಯಯ

ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ಇನ್ನು 10 ದಿನ ಸಂಚಾರ ವ್ಯತ್ಯಯವಾಗಲಿದ್ದು, ಬಿಎಂಆರ್‌ಸಿಎಲ್ ಮತ್ತು ಬೆಸ್ಕಾಂ ಕಾಮಗಾರಿಗಳು ನಡೆಯುತ್ತಿರುವುದು ಇದಕ್ಕೆ ಕಾರಣ. ಈ ಸಂಬಂಧ ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಇದರಂತೆ, ಹೆಚ್.ಎ.ಎಲ್ ಏರ್‌ ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರ ವರ್ತುಲ ರಸ್ತೆಯ ಐ.ಬಿ.ಐ.ಎಸ್ ಹೊಟೇಲ್‌ ನಿಂದ ದೇವರಬೀಸನಹಳ್ಳಿ ಜಂಕ್ಷನ್ ವರೆಗಿನ ಸರ್ವಿಸ್ ರಸ್ತೆಯಲ್ಲಿ ಬಿಎಂಆರ್‌ಸಿಎಲ್‌ ಮತ್ತು ಬೆಸ್ಕಾಂ ವತಿಯಿಂದ ಕೇಬಲ್‌ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ. ಆಗಸ್ಟ್ 3 ರಿಂದ ಆಗಸ್ಟ್ 13 ರ ತನಕ ಈ ಬದಲಾವಣೆ ಇರಲಿದ್ದು, ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಯಲ್ಲಿ ರಾತ್ರಿ 11.00 ಗಂಟೆಯಿಂದ ಬೆಳಗ್ಗೆ 6.00 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಹೊರ ವರ್ತುಲ ರಸ್ತೆಯ ಐ.ಬಿ.ಐ.ಎಸ್ ಹೊಟೇಲ್‌ ನಿಂದ ದೇವರಬಿಸನಹಳ್ಳಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧವಿದೆ. ಈ ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ದೇವರಬಿಸನಹಳ್ಳಿ ಮೇಲು ಸೇತುವೆ ಮೂಲಕ ಸಂಚರಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ