Ramachandran Viswanathan: ಉದ್ಯಮಿ ರಾಮಚಂದ್ರನ್ ವಿಶ್ವನಾಥನ್ ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಬೆಂಗಳೂರು ಸಿಬಿಐ ಕೋರ್ಟ್
Jun 10, 2023 09:13 PM IST
ರಾಮಚಂದ್ರನ್ ವಿಶ್ವನಾಥನ್
- Bengaluru CBI Court: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಮಚಂದ್ರನ್ ವಿಶ್ವನಾಥನ್ ಭಾರತದಿಂದ ಪಲಾಯನವಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಇಸ್ರೋದ ಅಂತರಿಕ್ಷ್ (Antrix) ಕಾರ್ಪೊರೇಶನ್ ಜೊತೆ ಒಪ್ಪಂದ ಮಾಡಿಕೊಂಡು ಅಕ್ರಮವಾಗಿ 578 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ದೇವಾಸ್ ಕಂಪನಿ ಮೇಲಿದೆ.
ಬೆಂಗಳೂರು: ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ವಿಶ್ವನಾಥನ್ (Ramachandran Vishwanathan) ಅವರನ್ನು ‘ತಲೆಮರೆಸಿಕೊಂಡ ಆರ್ಥಿಕ ಅಪರಾಧಿ’ (Fugitive Economic Offender) ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಾಮಚಂದ್ರನ್ ವಿಶ್ವನಾಥನ್ ಭಾರತದಿಂದ ಪಲಾಯನವಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಈ ಸಂಬಂಧ 2022ರ ಮೇ 4 ರಂದು ಜಾರಿ ನಿರ್ದೇಶನಾಲಯದ (ಇಡಿ) ಬೆಂಗಳೂರು ಕಚೇರಿಯ ವಿಭಾಗೀಯ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದೆ.
'2018ರ ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆ' ಅಡಿಯಲ್ಲಿ ರಾಮಚಂದ್ರನ್ ವಿಶ್ವನಾಥನ್ ಅವರನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿದ ನ್ಯಾಯಮೂರ್ತಿ ಕೆ ಎಲ್ ಅಶೋಕ್ ಅವರು ಸೆಕ್ಷನ್ 12(2)ರ ಅಡಿ ರಾಮಚಂದ್ರನ್ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿ ಜೂನ್ 8 (ಗುರುವಾರ) ಆದೇಶ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಲಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನಲ್ಲಿ ಉಪಗ್ರಹಗಳಿಗೆ ಸಂಬಂಧಿತ ದೇವಾಸ್ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು 2004ರಲ್ಲಿ ರಾಮಚಂದ್ರನ್ ವಿಶ್ವನಾಥನ್ ಆರಂಭಿಸಿದ್ದರು. ಇಸ್ರೋದ ಅಂತರಿಕ್ಷ್ (Antrix) ಕಾರ್ಪೊರೇಶನ್ ಜೊತೆ ಒಪ್ಪಂದ ಮಾಡಿಕೊಂಡು ಅಕ್ರಮವಾಗಿ 578 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ ಎಂಬ ಆರೋಪ ದೇವಾಸ್ ಕಂಪನಿ ಮೇಲಿದೆ.
ದೇವಾಸ್ ಕಂಪನಿಯ ಸಿಇಒ ಆಗಿರುವ ವಿಶ್ವನಾಥನ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಸಿಬಿಐ ಪ್ರಕರಣವನ್ನು ದಾಖಲಿಸಿತ್ತು. ಅನಂತರ, 2002ರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆಯನ್ನು ಆರಂಭಿಸಿತ್ತು.
ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದೆ. ಬೇಗ ನಗರ ತಲುಪುವ ಧಾವಂತದಲ್ಲಿ ಸ್ಪೀಡ್ ಲಿಮಿಟ್ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ