logo
ಕನ್ನಡ ಸುದ್ದಿ  /  ಕರ್ನಾಟಕ  /  Hsrp Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು 3 ತಿಂಗಳು ವಿಸ್ತರಿಸಿದ ಕರ್ನಾಟಕ ಸರ್ಕಾರ; ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವರ ಘೋ‍ಷಣೆ

HSRP Deadline: ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು 3 ತಿಂಗಳು ವಿಸ್ತರಿಸಿದ ಕರ್ನಾಟಕ ಸರ್ಕಾರ; ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವರ ಘೋ‍ಷಣೆ

Umesh Kumar S HT Kannada

Feb 15, 2024 08:14 AM IST

google News

HSRP Deadline: ಕರ್ನಾಟಕ ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು 3 ತಿಂಗಳು ವಿಸ್ತರಿಸಿದೆ. ಈ ವಿಚಾರವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಪರಿಷತ್‌ನಲ್ಲಿ ಘೋ‍ಷಣೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

  • HSRP Deadline: ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವು 3 ತಿಂಗಳು ವಿಸ್ತರಿಸಿದ ಕರ್ನಾಟಕ ಸರ್ಕಾರ, ಈ ಕುರಿತು ಜಾಗೃತಿ ಮೂಡಿಸುವುದಾಗಿ ತಿಳಿಸಿದೆ. ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ವಿಷಯ ಪ್ರಕಟಿಸಿದರು.

HSRP Deadline: ಕರ್ನಾಟಕ ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು 3 ತಿಂಗಳು ವಿಸ್ತರಿಸಿದೆ. ಈ ವಿಚಾರವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ವಿಧಾನ ಪರಿಷತ್‌ನಲ್ಲಿ ಘೋ‍ಷಣೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)
HSRP Deadline: ಕರ್ನಾಟಕ ಸರ್ಕಾರವು ಎಚ್‌ಎಸ್‌ಆರ್‌ಪಿ ಅಳವಡಿಕೆಯ ಗಡುವನ್ನು 3 ತಿಂಗಳು ವಿಸ್ತರಿಸಿದೆ. ಈ ವಿಚಾರವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಪರಿಷತ್‌ನಲ್ಲಿ ಘೋ‍ಷಣೆ ಮಾಡಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ವಾಹನಗಳಿಗೆ ಹಳೆಯ ನೋಂದಣಿ ಫಲಕಗಳ ಬದಲಾಗಿ ಅತಿ ಸುರಕ್ಷತಾ ನೋಂದಣಿ ಫಲಕ (ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್- ಎಚ್‌ಎಸ್‌ಆರ್‌ಪಿ) ಅಳವಡಿಸುವುದಕ್ಕೆ ನೀಡಲಾಗಿದ್ದ ಗಡುವನ್ನು ಕರ್ನಾಟಕ ಸರ್ಕಾರ 3 ತಿಂಗಳು ವಿಸ್ತರಿಸಿದೆ.

ಜಾಗೃತಿ ಮತ್ತು ಮಾಹಿತಿ ಕೊರತೆ, ತಾಂತ್ರಿಕ ಸಮಸ್ಯೆಗಳ ಕಾರಣ ಎಚ್‌ಎಸ್ಆರ್‌ಪಿ ಅಳವಡಿಕೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವ ಕಾರಣ, ವಾಹನ ಮಾಲೀಕರಿಗೆ ಕಾಲಾವಕಾಶ ನೀಡಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ವಾಹನಗಳ ಹಳೆಯ ನೋಂದಣಿ ಫಲಕಗಳನ್ನು ತೆಗೆದು ಹೊಸ ಎಚ್‌ಎಸ್‌ಆರ್‌ಪಿ ಅಳವಡಿಸಲು ನೀಡಲಾಗಿದ್ದ ಗಡುವನ್ನು ಮತ್ತೆ 3 ತಿಂಗಳು ವಿಸ್ತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬುಧವಾರ (ಫೆ.14) ತಿಳಿಸಿದರು.

ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆ ಇದು ಎರಡನೇ ಬಾರಿ

ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆಗೆ ಹಲವು ಶಾಸಕರು ಬೇಡಿಕೆ ಇರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕದಲ್ಲಿ ಇದುವರೆಗೆ ಸುಮಾರು 18 ಲಕ್ಷ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ. ಇತರ ರಾಜ್ಯಗಳು ಈಗಾಗಲೇ ಇದನ್ನು ಜಾರಿಗೆ ತಂದಿವೆ. ಜಾಗೃತಿ ಮೂಡಿಸಲು ಸಾಕಷ್ಟು ಪ್ರಚಾರ ನೀಡುತ್ತೇವೆ ಎಂದು ಅವರು ತಿಳಿಸಿದರು.

ಕರ್ನಾಟಕದಲ್ಲಿ 2019ರ ಏಪ್ರಿಲ್ 1 ರ ನಂತರ 2 ಕೋಟಿಯಷ್ಟು ಹೊಸ ವಾಹನಗಳ ನೋಂದಣಿ ಆಗಿದೆ. ಈ ಪೈಕಿ 18 ಲಕ್ಷ ವಾಹನಗಳಿಗಷ್ಟೆ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ. ಕರ್ನಾಟಕ ಸರ್ಕಾರ 2023ರ ಆಗಸ್ಟ್‌ನಲ್ಲಿ ಎಚ್‌ಎಸ್‌ಆರ್‌ಪಿ ಸಂಬಂಧಿತ ಅಧಿಸೂಚನೆಯನ್ನು ಪ್ರಕಟಿಸಿತ್ತು. ಅದರಲ್ಲಿ ನ.17ರ ತನಕ ಗಡುವು ವಿಧಿಸಲಾಗಿತ್ತು. ಆದರೆ ಗಡುವಿನೊಳಗೆ ಗುರಿ ತಲುಪಲಾಗದ ಕಾರಣ ಮೊದಲ ಬಾರಿಗೆ 2024ರ ಫೆ.17ರ ವಿಸ್ತರಿಸಿತ್ತು. ಈಗ ಮತ್ತೆ ಮೂರು ತಿಂಗಳ ವಿಸ್ತರಣೆ ಸಿಕ್ಕಿದೆ.

ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡದಿದ್ದರೆ ಹೆಚ್ಚಾಗಲಿದೆ ದಂಡ

ಕರ್ನಾಟಕದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಎರಡು ಕೋಟಿ ವಾಹನಗಳು ಸಂಚಾರದಲ್ಲಿವೆ. ಈ ಪೈಕಿ 2023ರ ಆಗಸ್ಟ್‌ 18 ರಿಂದ 2024ರ ಫೆಬ್ರವರಿ 12ರ ಅವಧಿಯಲ್ಲಿ 18,32,787 (ಶೇಕಡ 9.16) ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಿದೆ

ಗಡುವಿನೊಳಗೆ ಫಲಕ ಅಳವಡಿಸದಿದ್ದರೆ ಮೊದಲನೇ ಅಪರಾಧಕ್ಕೆ 500 ರೂ., ಎರಡು ಮತ್ತು ನಂತರದ ಅಪರಾಧಗಳಿಗೆ 1000 ರೂ, ಹಾಗೂ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ಆದೇಶದ ಪ್ರಕಾರ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಧಾನಪರಿಷತ್‌ನಲ್ಲಿ ವಿವರಿಸಿದರು.

ಎಚ್‌ಎಸ್‌ಆರ್‌ಪಿ ನಕಲಿ ವೆಬ್‌ಸೈಟ್‌ಗಳ ಕಾಟ

ಎಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ಮತ್ತು ಜನರಲ್ಲಿ ಜಾಗೃತಿಯ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸೈಬರ್ ಕಿಡಿಗೇಡಿಗಳು ಅಧಿಕೃತ ವೆಬ್‌ಸೈಟ್ ಮಾದರಿಯಲ್ಲೇ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿಕೊಂಡು ಹಣ ವಸೂಲಿ ಮಾಡಿ ವಂಚಿಸುವ ಕೆಲಸ ಶುರುಮಾಡಿದ್ದಾರೆ.

ವಿಧಾನ ಪರಿಷತ್‌ ಕಲಾಪದಲ್ಲಿ ಕಾಂಗ್ರೆಸ್‌ ಪಕ್ಷದ ಮಧು ಜಿ. ಮಾದೇಗೌಡ ಅವರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿ ನಕಲಿ ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಇದರಿಂದ ವಂಚನೆಯಾಗುತ್ತಿದೆ ಎಂಬ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಆದೇಶದ ಪ್ರಕಾರ 2019ರ ಏಪ್ರಿಲ್ 1ರ ಬಳಿಕ ನೋಂದಣಿಯಾದ ವಾಹನಗಳಿಗೆ ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕು ಎಂಬುದನ್ನು ದೇಶದ ಭದ್ರತೆಯ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ. ಅಪರಾಧ ನಿಯಂತ್ರಣ, ವಾಹನಗಳ ಗುರುತು ಪತ್ತೆ, ನಕಲಿ ನೋಂದಣಿ ಫಲಕಗಳ ಅಳವಡಿಕೆಯನ್ನು ನಿಯಂತ್ರಿಸಲು ವಾಹನಗಳ ಎಚ್‌ಎಸ್‌ಆರ್‌ಪಿ ನೆರವಾಗುತ್ತದೆ ಎಂದು ವಿವರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ