ನಮ್ಮ ಮೆಟ್ರೋ ನಿಲ್ದಾಣಗಳಿಗೆ ಬೇಕು ಪ್ಲಾಟ್‌ಫಾರಂ ಸ್ಕ್ರೀನ್ ಡೋರ್; ಆತ್ಮಹತ್ಯೆ ಘಟನೆ ಬಳಿಕ ಹೆಚ್ಚಿದ ಆಗ್ರಹ
Mar 23, 2024 04:40 PM IST
ಮೆಟ್ರೋ ನಿಲ್ದಾಣಗಳಿಗೆ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ (ಸಾಂಕೇತಿಕ ಚಿತ್ರ)
ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಬೇಕು ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಈ ಕುರಿತ ವರದಿ ಇಲ್ಲಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ರೈಲು ನಿಲ್ದಾಣದಲ್ಲಿ ನಾಗರಭಾವಿಯ ಇಂಡಿಯನ್ ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿ ಧ್ರುವ್ ಜತಿನ್ ಥಕ್ಕರ್ (19) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶದ ಗಮನಸೆಳೆದಿದೆ. ಮೆಟ್ರೋ ರೈಲುಹಳಿಗೆ ಬಿದ್ದು ಆತ್ಮಹತ್ಯೆ ಮಾಡಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚಾಗಿರುವ ಕಾರಣ, ಇದನ್ನು ತುರ್ತಾಗಿ ತಡೆಯುವ ಅಗತ್ಯ ಇದೆ. ಇದಕ್ಕಾಗಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಬೆಂಗಳೂರು ಮೆಟ್ರೋ ವ್ಯಾಪ್ತಿಯಲ್ಲಿ ಈ ರೀತಿ ಆತ್ಮಹತ್ಯೆೆ ಯತ್ನದ ಹಲವು ಘಟನೆಗಳಾಗಿವೆ. ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಯುವಕನೊಬ್ಬ ಹಳಿಗೆ ಜಿಗಿದಿದ್ದ. ಆ ದಿನ ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದ, ಕೆಂಗೇರಿ ನಿಲ್ದಾಣದಲ್ಲೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಈ ಬೆಳವಣಿಗೆಗಳಿಂದಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ 3 ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ 5 ಅವಾಂತರ
ಬೆಂಗಳೂರು ಮೆಟ್ರೋ ರೈಲು ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಅನುಕೂಲಕರವಾಗಿದ್ದರೂ, ಇತ್ತೀಚೆಗೆ ಸಮಸ್ಯೆಗಳ ಬೀಡಾಗುತ್ತಿರುವುದು ಕಳವಳಕಾರಿ. ನಮ್ಮ ಮೆಟ್ರೋದಲ್ಲಿ ಎಷ್ಟೇ ಭದ್ರತೆ ಒದಗಿಸಿದರೂ ಪ್ರಯಾಣಿಕರು ಒಂದಲ್ಲಾ ಒಂದು ಅವಾಂತರಗಳನ್ನು ಮಾಡುತ್ತಿರುವುದರಿಂದ ಕಳವಳ ಹೆಚ್ಚಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಇಂತಹ 5 ಘಟನೆಗಳು ನಡೆದಿವೆ.
1) ಜನವರಿ 1ರಂದು ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್ ಹಳಿಗೆ ಬಿತ್ತು ಎಂದು ಹಳಿಗೆ ಜಿಗಿದಿದ್ದರು.
2) ಜನವರಿ 5ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಕೇರಳ ಮೂಲದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ.
3) ಜನವರಿ 6ರಂದು ಜೆ.ಪಿ.ನಗರ ನಿಲ್ದಾಣದಲ್ಲಿ ಬೆಕ್ಕು ಕಾಣಿಸಿಕೊಂಡಿತ್ತು.
4) ಮಾರ್ಚ್ 12ರಂದು ಜ್ಞಾನಭಾರತಿ ನಿಲ್ದಾಣದ ಹಳಿಯ ವಯಾಡೆಕ್ಸ್‌ನಲ್ಲಿ ಅಪರಿಚಿತ ವ್ಯಕ್ತಿ ಓಡಾಡಿದ್ದ. ಇದರಿಂದ ಸಮಸ್ಯೆಯೂ ಎದುರಾಗಿತ್ತು.
5) ಮಾ. 21ರಂದು ವಿದ್ಯಾರ್ಥಿ ಧ್ರುವ ಟಕ್ಕರ್ ಎಂಬಾತ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೀಗೆ ನಮ್ಮ ಮೆಟ್ರೋ ಹಳಿಗೆ ಪ್ರಯಾಣಿಕರು ಜಿಗಿಯುವುದು, ಮೆಟ್ರೋ ಹಳಿಯಲ್ಲಿ ಕಾಣಿಸಿಕೊಳ್ಳುವುದು, ಪ್ರಾಣಿಗಳು ಕೂಡಾ ಹಳಿಗಳ ಮೇಲೆ ಕಾಣಿಸಿಕೊಂಡ ಘಟನೆಗಳು ಅನೇಕ. ಆದರೆ, ನಮ್ಮ ಮೆಟ್ರೋ ನೇರಳೆ ಮಾರ್ಗದ ಅತ್ತಿಗುಪ್ಪೆ ನಿಲ್ದಾಣದಲ್ಲಿ ಗುರುವಾರ ವಿದ್ಯಾರ್ಥಿಯೊಬ್ಬ ರೈಲು ಬರುವ ಸಂದರ್ಭದಲ್ಲಿ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೆಟ್ರೋ ರೈಲು ಆರಂಭವಾದ ನಂತರ ಈ ರೀತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣವಾಗಿದೆ. ಹೀಗಾಗಿ ಕಳವಳ ಹೆಚ್ಚಾಗಿದೆ.
ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ಆಗ್ರಹ
ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನ ಪ್ರಕರಣಗಳು ವರದಿಯಾಗುತ್ತಿದ್ದರೂ, ಅದನ್ನು ತಡೆಯುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ಅತ್ತಿಗುಪ್ಪೆ ನಿಲ್ದಾಣದಲ್ಲಿ ಆತ್ಮಹತ್ಯೆ ಘಟನೆ ಜರುಗಿದೆ. ಯತ್ನಗಳು ನಡೆದಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಭದ್ರತಾ ವ್ಯವಸ್ಥೆ ಕೈಗೊಂಡಿದ್ದರೆ ಯುವಕನ ಆತ್ಮಹತ್ಯೆ ತಡೆಯಬಹುದಾಗಿತ್ತು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ.
ಬೆಂಗಳೂರು ನಗರದಲ್ಲಿ ದೇಶದ ಅತೀದೊಡ್ಡ ಮೆಟ್ರೋ ಸಂಪರ್ಕ ಜಾಲ ಇರುವಂಥದ್ದು. ಆದರೆ, ದೆಹಲಿ ಹಾಗೂ ಚೆನ್ನೈ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಡೋರ್ ನಿರ್ಮಿಸಲಾಗಿದೆ. ಇದನ್ನು ಬೆಂಗಳೂರು ಮೆಟ್ರೋ ಅಧಿಕಾರಿಗಳು ಮಾದರಿಯಾಗಿ ತೆಗೆದುಕೊಂಡು ಅನುಷ್ಠಾನಕ್ಕೆ ತರಬಹುದು. ಶೀಘ್ರವೇ ಈ ಬಗ್ಗೆ ಚಿಂತನೆ ನಡೆಸಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ವಿಕಲಚೇತನರಿಗಾಗಿ ಸಕ್ಷಮ್ ಆ್ಯಪ್; ನಿಮ್ಮ ಮತದಾನ ಪ್ರಕ್ರಿಯೆ ಮತ್ತಷ್ಟು ಸುಲಭ
2) ಬೆಂಗಳೂರಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ; ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ; ಇಲ್ಲಿದೆ ವಿವರ
3) ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್ ಟ್ವಿಸ್ಟ್
4) ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು