logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ; ರಿಯಾಯಿತಿ ಕೇಳುವುದಕ್ಕೆ ಅವಕಾಶ ಸಿಕ್ಕೀತಾ

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ; ರಿಯಾಯಿತಿ ಕೇಳುವುದಕ್ಕೆ ಅವಕಾಶ ಸಿಕ್ಕೀತಾ

Umesh Kumar S HT Kannada

Feb 19, 2024 09:21 AM IST

google News

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ, ರಿಯಾಯಿತಿ ಕೇಳುವುದಕ್ಕೆ ಅವಕಾಶ ಇದೆಯೇ ಎಂಬಿತ್ಯಾದಿ ವಿವರವನ್ನು ಒಳಗೊಂಡ ವರದಿ ಇದು. (ಸಾಂಕೇತಿಕ ಚಿತ್ರ)

  • Bengaluru News: ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ, ಹಾಗಾದರೆ ರಿಯಾಯಿತಿ ಕೇಳುವುದಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆ ಸಹಜ. ಬೆಂಗಳೂರು ನಗರದಲ್ಲಿ 2,600ಕ್ಕೂ ಹೆಚ್ಚು ವಾಹನಗಳಿಗೆ 50,000 ರೂಪಾಯಿ ಮೇಲ್ಪಟ್ಟ ದಂಡ ಇದೆ. 

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ, ರಿಯಾಯಿತಿ ಕೇಳುವುದಕ್ಕೆ ಅವಕಾಶ ಇದೆಯೇ ಎಂಬಿತ್ಯಾದಿ ವಿವರವನ್ನು ಒಳಗೊಂಡ ವರದಿ ಇದು. (ಸಾಂಕೇತಿಕ ಚಿತ್ರ)
ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ 50,000 ರೂಪಾಯಗಿಂತ ಹೆಚ್ಚಿದೆಯೇ, ರಿಯಾಯಿತಿ ಕೇಳುವುದಕ್ಕೆ ಅವಕಾಶ ಇದೆಯೇ ಎಂಬಿತ್ಯಾದಿ ವಿವರವನ್ನು ಒಳಗೊಂಡ ವರದಿ ಇದು. (ಸಾಂಕೇತಿಕ ಚಿತ್ರ) (HT News/ Wikipedia)

ಬೆಂಗಳೂರು ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದಂಡ ಪಾವತಿಸಬೇ ಇರುವ ವಾಹನಗಳನ್ನು ವಶಪಡಿಸಿಕೊಳ್ಳುವ ಕೆಲಸ ಶುರುಮಾಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದ ವಿವಿಧ ಪ್ರಕರಣ ಹೊಂದಿದ್ದು, 50,000 ರೂಪಾಯಿಗಿಂತ ಹೆಚ್ಚು ದಂಡ ಇದ್ದರೆ ಅಂಥವರ ವಾಹನ ವಶಪಡಿಸುವುದರ ಕಡೆಗೆ ಪೊಲೀಸರು ಗಮನಹರಿಸಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ 50,000 ರೂಪಾಯಿ ಮತ್ತು ಮೇಲ್ಪಟ್ಟ ದಂಡ ಮೊತ್ತ ಪಾವತಿಸದೇ ಬಾಕಿ ಉಳಿಸಿಕೊಂಡ 2,681 ವಾಹನಗಳಿವೆ. ಪರಿಸ್ಥಿತಿ ಏನೇ ಇದ್ದರೂ ದಂಡ ಪಾವತಿಸಬೇಕಾದ್ದು ಕಡ್ಡಾಯ ಎಂಬುದು ಬೆಂಗಳೂರು ಸಂಚಾರ ಪೊಲೀಸರ ನಿಲುವು.

ಬೆಂಗಳೂರು ದಕ್ಷಿಣ ವಿಭಾಗದಲ್ಲಿ 850 ವಾಹನಗಳ ಮೆಲೆ 50,000 ರೂಪಾಯಿ ಮತ್ತು ಮೇಲ್ಪಟ್ಟ ದಂಡ ಇವೆ. ಈ ವಾಹನಗಳನ್ನು ವಶಪಡಿಸುವ ಕಾರ್ಯಾಚರಣೆಯನ್ನು ಪೊಲೀಸರು ಶುರುಮಾಡಿದ್ದಾರೆ. ವಶಪಡಿಸಿಕೊಂಡ ವಾಹನಗಳನ್ನು ಅಂತಹ ವಾಹನ ಮಾಲೀಕರು ಈಗ ತಮ್ಮ ವಾಹನಗಳನ್ನು ಮರಳಿ ಪಡೆಯಲು ತಮ್ಮ ಬಾಕಿಗಳನ್ನು ಇತ್ಯರ್ಥಪಡಿಸುವ ಅಗತ್ಯವಿದೆ ಅಥವಾ ಅವರು ಪರ್ಯಾಯವಾಗಿ ದಂಡದ ಮೇಲಿನ ಸಂಭಾವ್ಯ ರಿಯಾಯಿತಿಗಳನ್ನು ಕೋರಿ ಸಂಬಂಧಿತ ಟ್ರಾಫಿಕ್ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿರುವುದಾಗಿ ಟೈಮ್ಸ್ ನೌ ವರದಿ ಹೇಳಿದೆ.

ಬೆಂಗಳೂರು ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಈ ಉಪಕ್ರಮದ ಹೊರತಾಗಿ ಕಾರು ಸೇರಿ 85 ವಾಹನಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ಜಯನಗರ, ಬನಶಂಕರಿ, ಕೆಎಸ್ ಲೇಔಟ್, ಬಸವನಗುಡಿ, ವಿವಿ ಪುರಂ, ಹುಳಿಮಾವು, ಆಡುಗೋಡಿ, ಮೈಕೋ ಲೇಔಟ್, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಳ್ಳಂದೂರು ಸೇರಿ ವಿವಿಧ ಪ್ರದೇಶಗಳಲ್ಲಿ ವಶಪಡಿಸಿಕೊಂಡಿದ್ದು, ಜಯನಗರದಲ್ಲಿ 26 ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ದಂಡ ಮೊತ್ತದಲ್ಲಿ ಶೇಕಡ 50 ವಿನಾಯಿತಿಗೆ ಆಗ್ರಹ

ದಂಡ ಪಾವತಿಸದೇ ವಾಹನ ಓಡಿಸುತ್ತಿರುವ ಮಾಲೀಕರು ಪೊಲೀಸ್ ಕಾರ್ಯಾಚರಣೆ ಬಳಿಕ ಎಚ್ಚೆತ್ತುಕೊಂಡು ಠಾಣೆಯನ್ನು ಸಂಪರ್ಕಿಸತೊಡಗಿದ್ದಾರೆ. ದಂಡ ಮೊತ್ತದಲ್ಲಿ ಶೇಕಡ 50 ವಿನಾಯಿತಿ ನೀಡಬೇಕು ಎಂದು ಹಲವು ವಾಹನ ಮಾಲೀಕರು ಕೆಳುತ್ತಿದ್ದಾರೆ. ತತ್‌ಕ್ಷಣವೇ ವಾಹನ ಬಿಡುಗಡೆ ಕೋರಿ ಅರ್ಧದಷ್ಟು ದಂಡ ಮೊತ್ತ ಪಾವತಿಸುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಸದ್ಯ ಶೇಕಡ 50 ವಿನಾಯಿತಿಗೆ ಅವಕಾಶ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ.

ಅನೇಕ ವಾಹನಗಳ ಮೌಲ್ಯ ಮೀರಿದ ದಂಡ ವಿಧಿಸಲ್ಪಟ್ಟಿದ್ದು, ಮಾಲೀಕರು ಆ ವಾಹನಗಳನ್ನು ಠಾಣೆಯಲ್ಲಿ ಬಿಟ್ಟು ಹೋಗುತ್ತಿರುವ ಅಥವಾ ಪೊಲೀಸರ ವಶಕ್ಕೊಪ್ಪಿಸಿ ಹೋಗುವ ಪರಿಪಾಠ ಬೆಳೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ರೀತಿ ಪ್ರಕರಣಗಳಲ್ಲಿ ವಾಹನ ಮಾಲೀಕರು ನ್ಯಾಯಾಲಯದ ಮೊರೆ ಹೋಗುವುದು ಒಳ್ಳೆಯದು. ಸಂಬಂಧಪಟ್ಟ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಮೊದಲು ಸಂಚಾರ ಪೊಲೀಸರು ಎರಡು ವಾರ ಕಾಯುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

50,000 ರೂಪಾಯಿ ಮೇಲ್ಪಟ್ಟ ದಂಡ ಮೊತ್ತ ಮತ್ತು ಮಾಲೀಕರ ಹೊಣೆಗಾರಿಕೆ

ಬೆಂಗಳೂರು ಮಹಾನಗರದಲ್ಲಿ 50,000 ರೂಪಾಯಿ ಮತ್ತು ಮೇಲ್ಪಟ್ಟ ದಂಡ ಮೊತ್ತ ಪಾವತಿಸದೇ ಇರುವಂತಹ 2,681 ವಾಹನಗಳಿವೆ. ಈ ವಾಹನಗಳ ಮಾಲೀಕರನ್ನು ಸಂಪರ್ಕಿಸಿ ದಂಡ ಮೊತ್ತವನ್ನು ತಿಳಿಸಿ ಅದನ್ನು ವಸೂಲಿ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ವಾಹನ ಮಾರಾಟವಾಗಿದ್ದು, ಹಳೆಯ ಮಾಲೀಕರ ಕೈಯಲ್ಲಿದ್ದಾಗ ದಂಡ ವಿಧಿಸಲ್ಪಟ್ಟಿದೆ. ಆದರೆ ಅದನ್ನು ಪಾವತಿಸುವ ಬಾಧ್ಯತೆ ಈಗ ಹೊಸ ಮಾಲೀಕರದ್ದಾಗಿರುತ್ತದೆ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾಗಿ ವರದಿ ವಿವರಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ