logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಲೆಕ್ಕಾಚಾರ, ಸಮನ್ವಯ ಸಾಧನೆ ಬಳಿಕ 34 ಶಾಸಕರ ಹೆಗಲೇರಿತು ಕರ್ನಾಟಕ ನಿಗಮ ಮಂಡಳಿಗೆ ಅಧ್ಯಕ್ಷ ಹೊಣೆಗಾರಿಕೆ

Bengaluru News: ಲೆಕ್ಕಾಚಾರ, ಸಮನ್ವಯ ಸಾಧನೆ ಬಳಿಕ 34 ಶಾಸಕರ ಹೆಗಲೇರಿತು ಕರ್ನಾಟಕ ನಿಗಮ ಮಂಡಳಿಗೆ ಅಧ್ಯಕ್ಷ ಹೊಣೆಗಾರಿಕೆ

Umesh Kumar S HT Kannada

Jan 27, 2024 09:25 AM IST

google News

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಅಳೆದೂ ತೂಗಿ, ಸಮನ್ವಯ ಸಾಧಿಸಿಕೊಂಡು ಕರ್ನಾಟಕದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. (ಚಿತ್ರ ಸಾಂಕೇತಿಕ)

  • ಅಳೆದು ತೂಗಿದ ರಾಜಕೀಯ ಲೆಕ್ಕಾಚಾರದ ಬಳಿಕ ಕರ್ನಾಟಕದ ನಿಗಮ ಮಂಡಳಿಗಳಿಗೆ ಅಧ್ಯಕ್ಷ ನೇಮಕ ಪ್ರಕ್ರಿಯೆ ಶುರುವಾಗಿದೆ. ಮೊದಲ ಹಂತದಲ್ಲಿ 34 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. (ವರದಿ - ಎಚ್.ಮಾರುತಿ, ಬೆಂಗಳೂರು)

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಅಳೆದೂ ತೂಗಿ, ಸಮನ್ವಯ ಸಾಧಿಸಿಕೊಂಡು ಕರ್ನಾಟಕದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. (ಚಿತ್ರ ಸಾಂಕೇತಿಕ)
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಅಳೆದೂ ತೂಗಿ, ಸಮನ್ವಯ ಸಾಧಿಸಿಕೊಂಡು ಕರ್ನಾಟಕದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಶಾಸಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. (ಚಿತ್ರ ಸಾಂಕೇತಿಕ) (ANI / HT_PRINT)

ಬೆಂಗಳೂರು: ಅಳೆದೂ ತೂಗಿ ಕೊನೆಗೂ ರಾಜ್ಯ ಸರಕಾರ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶ ಹೊರಡಿಸಿದೆ. ಮೊದಲ ಪಟ್ಟಿಯಲ್ಲಿ 36 ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಅಧ್ಯಕ್ಷರಿಗೂ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ.

ಅಪ್ಪಾಜಿ ಸಿ ಎಸ್ ನಾಡಗೌಡ, ಹೆಚ್ ಸಿ ಬಾಲಕೃಷ್ಣ, ಎನ್ ಎ ಹ್ಯಾರಿಸ್, ಗೋಪಾಲಕೃಷ್ಣ ಬೇಳೂರು, ಪಿ. ಎಂ ನರೇಂದ್ರಸ್ವಾಮಿ, ಜಿ. ಎಸ್ ಪಾಟೀಲ್, ಕೌಜಲಗಿ ಮಹಾಂತೇಶ್ ಶಿವಾನಂದ ಅಧ್ಯಕ್ಷ ಸ್ಥಾನ ಪಡೆದ ಪ್ರಮುಖ ಶಾಸಕರು

ಬಜೆಟ್ ಅಧಿವೇಶನಕ್ಕೂ ಮುನ್ನ ಈ ಪಟ್ಟಿ ಹೊರ ಬಿದ್ದಿದೆ ಎನ್ನುವುದು ಸಮಾಧಾನ. ಕಳೆದ ಎರಡು ತಿಂಗಳಿನಿಂದ ಶಾಸಕರು ಶೀಘ್ರ ನೇಮಕ ಮಾಡುವಂತೆ ಒತ್ತಡ ಹೇರುತ್ತಿದ್ದರು. ಪಟ್ಟಿ ಒಮ್ಮೆಗೇ ಸಿದ್ಧವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತ್ಯೇಕ ಪಟ್ಟಿ ಸಿದ್ದಪಡಿಸಿದ್ದರು. ಈ ಮಧ್ಯೆ ಪರಮೇಶ್ವರ್, ಜಾರಕಿಹೊಳಿ ಸೇರಿದಂತೆ ಅನೇಕ ಹಿರಿಯ ಸಚಿವರು ತಮ್ಮದೇ ಆದ ಶಾಸಕರ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರು. ಪಟ್ಟಿಯಲ್ಲಿದ್ದ ಹೆಸರುಗಳನ್ನು ನೋಡಿ ಎರಡು ಮೂರು ಬಾರಿ ಹೈ ಕಮಾಂಡ್ ಗರಂ ಆಗಿತ್ತು.

ಶಾಸಕರು ಮತ್ತು ಕಾರ್ಯಕರ್ತರನ್ನು ನೇಮಿಸಿ ಒಂದೇ ಬಾರಿಗೆ ಆದೇಶ ಹೊರಡಿಸುವ ಸಂಬಂಧ ಆರಂಭದಲ್ಲಿ ಸಿಎಂ ಡಿಸಿಎಂ ನಡುವೆ ಜಟಾಪಟಿ ನಡೆದಿತ್ತು.

1) ಹಂಪನಗೌಡ ಬಾದರ್ಲಿ(ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ)

2) ಅಪ್ಪಾಜಿ ಸಿ ಎಸ್ ನಾಡಗೌಡ (ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್)

3) ಭರಮಗೌಡ ಅಲಗೌಡ ಕಾಗೆ(ಹುಬ್ಬಳ್ಳಿ ಸಾರಿಗೆ ನಿಗಮ, ವಾಯುವ್ಯ ಸಾರಿಗೆ)

4) ಯಮುನಪ್ಪ ವೈ ಮೇಟಿ (ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ)

5) ಎಸ್ ಆರ್ ಶ್ರೀನಿವಾಸ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ)

6) ಬಸವರಾಜ್ ನೀಲಪ್ಪ ಶಿವಣ್ಣನವರ(ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ)

7) ಬಿ ಜಿ ಗೋವಿಂದಪ್ಪ(ಆಹಾರ ಮತ್ತು ನಾಗರಿಕ ಸರಬರಾಜು ನಿಗಮ)

8) ಹೆಚ್ ಸಿ ಬಾಲಕೃಷ್ಣ(ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ)

9) ಜಿ. ಎಸ್ ಪಾಟೀಲ್(ಕರ್ನಾಟಕ ಖನಿಜ ನಿಗಮ ಅಭಿವೃದ್ಧಿ ನಿಗಮ ನಿಯಮಿತ)

10) ಎನ್ ಎ ಹ್ಯಾರಿಸ್ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)

11) ಕೌಜಲಗಿ ಮಹಾಂತೇಶ್ ಶಿವಾನಂದ(ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ)

12) ಪುಟ್ಟರಂಗಶೆಟ್ಟಿ(ಮೈಸೂರ್ ಸೇಲ್ಸ್ ಲಿಮಿಟೆಡ್ ಇಂಟರ್ ನ್ಯಾಶನಲ್)

13) ಜೆ ಟಿ ಪಾಟೀಲ್(ಹಟ್ಟಿ ಚಿನ್ನದ ಗಣಿ)

14) ರಾಜಾ ವೆಂಕಟಪ್ಪ ನಾಯಕ್ (ಕರ್ನಾಟಕ ರಾಜ್ಯ ಉಗ್ರಾಣ ನಿಗಮ)

15) ಬಿ ಕೆ ಸಂಗಮೇಶ್ವರ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ)

16) ಕೆ. ಎಂ ಶಿವಲಿಂಗೇಗೌಡ (ಕರ್ನಾಟಕ ಗೃಹ ಮಂಡಳಿ) ಅಬ್ಬಯ್ಯ ಪ್ರಸಾದ್ (ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ)

17) ಬಿ.ಕೆ.ಗೋಪಾಲಕೃಷ್ಣ ಬೇಳೂರು (ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತ)

18) ಎಸ್.ಎನ್ ನಾರಾಯಣ ಸ್ವಾಮಿ(ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ)

19) ಪಿ. ಎಂ ನರೇಂದ್ರಸ್ವಾಮಿ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ)

20) ಟಿ ರಘುಮೂರ್ತಿ (ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ)

21) ಎ. ಬಿ ರಮೇಶ್ ಬಂಡಿ ಸಿದ್ದೇಗೌಡ(ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ)

22) ಬಿ. ಶಿವಣ್ಣ(ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)

23) ಎಸ್ ಎನ್ ಸುಬ್ಬಾರೆಡ್ಡಿ(ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ)

24) ವಿನಯ್ ಕುಲಕರ್ಣಿ(ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ)

25) ಅನಿಲ್ ಚಿಕ್ಕಮಾದು(ಜಂಗಲ್ ಲಾಡ್ಜಸ್ )

26) ಬಸವನ ಗೌಡ ದದ್ದಲ್(ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ)

27) ಕನೀಜ್ ಫಾತಿಮಾ(ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ)

28) ವಿಜಯಾನಂದ ಕಾಶಪ್ಪನವರ (ಕರ್ನಾಟಕ ಕ್ರೀಡಾ ಪ್ರಾಧಿಕಾರ)

29) ಶ್ರೀನಿವಾಸ ಮಾನೆ ( ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು)

30) ಟಿ ಡಿ ರಾಜೇಗೌಡ(ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತ)

31) ರೂಪಕಲಾ ಎಂ(ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ)

32) ಸತೀಶ್ ಕೃಷ್ಣ ಸೈಲ್ (ಕರ್ನಾಟಕ ಮಾರ್ಕೆಟಿಂಗ್ ಕನ್ಸಲೆಂಟ್ ಆಂಡ್ ಏಜೆನ್ಸಿಸ್)

33) ಶರತ್ ಕುಮಾರ್ ಬಚ್ಚೇಗೌಡ(ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ)

34) ಜೆ ಎನ್ ಗಣೇಶ್ ಕಂಪ್ಲಿ(ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ)

  • ಬಸವನಗೌಡ ತುರುವಿಹಾಳ ಮಸ್ಕಿ ಇವರ ಹೆಸರು ಪಟ್ಟಿಯಲ್ಲಿದ್ದು ಯಾವುದೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿಲ್ಲ.

(ವರದಿ - ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ