logo
ಕನ್ನಡ ಸುದ್ದಿ  /  ಕರ್ನಾಟಕ  /  ಸಿಲಿಕಾನ್ ಸಿಟಿ ಸವಾರರೇ ಗಮನಿಸಿ; ಬೆಂಗಳೂರಿನ ರಸ್ತೆ ಬದಿಯಲ್ಲಿ ಬಿಟ್ಟು ಹೋದ ವಾಹನ ತೆರವಿಗೆ ಕಾಲಮಿತಿ ನಿಗದಿಪಡಿಸಿದ ಹೈಕೋರ್ಟ್

ಸಿಲಿಕಾನ್ ಸಿಟಿ ಸವಾರರೇ ಗಮನಿಸಿ; ಬೆಂಗಳೂರಿನ ರಸ್ತೆ ಬದಿಯಲ್ಲಿ ಬಿಟ್ಟು ಹೋದ ವಾಹನ ತೆರವಿಗೆ ಕಾಲಮಿತಿ ನಿಗದಿಪಡಿಸಿದ ಹೈಕೋರ್ಟ್

Raghavendra M Y HT Kannada

Feb 10, 2024 08:21 PM IST

google News

ಬೆಂಗಳೂರು ನಗರದ ರಸ್ತೆ ಬದಿಯಲ್ಲಿ 15 ದಿನಗಳಿಗೂ ಹೆಚ್ಚು ಕಾಲ ನಿಲ್ಲಿಸಿ ಹೋಗಿರುವ ವಾಹನಗಳ ತೆರಿವಿಗೆ ಕರ್ನಾಟಕ ಹೈಕೋರ್ಟ್ ಕಾಲಮಿತಿ ನಿಗದಿತಪಡಿಸಿದೆ.

  • Bangalore News: ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಬಿಟ್ಟು ಹೋದ ವಾಹನ ತೆರವಿಗೆ ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿದೆ. ಹೀಗಾಗಿ 15 ದಿನ ರಸ್ತೆ ಬದಿಯಲ್ಲೇ ಇರುವ ವಾಹನಗಳ ಹರಾಜಾಗಲಿದೆ.

ಬೆಂಗಳೂರು ನಗರದ ರಸ್ತೆ ಬದಿಯಲ್ಲಿ 15 ದಿನಗಳಿಗೂ ಹೆಚ್ಚು ಕಾಲ ನಿಲ್ಲಿಸಿ ಹೋಗಿರುವ ವಾಹನಗಳ ತೆರಿವಿಗೆ ಕರ್ನಾಟಕ ಹೈಕೋರ್ಟ್ ಕಾಲಮಿತಿ ನಿಗದಿತಪಡಿಸಿದೆ.
ಬೆಂಗಳೂರು ನಗರದ ರಸ್ತೆ ಬದಿಯಲ್ಲಿ 15 ದಿನಗಳಿಗೂ ಹೆಚ್ಚು ಕಾಲ ನಿಲ್ಲಿಸಿ ಹೋಗಿರುವ ವಾಹನಗಳ ತೆರಿವಿಗೆ ಕರ್ನಾಟಕ ಹೈಕೋರ್ಟ್ ಕಾಲಮಿತಿ ನಿಗದಿತಪಡಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಹೋಗುವ ಸವಾರರಿಗೆ ಹೈಕೋರ್ಟ್ (Karnataka High Court) ಬಿಗ್ ಶಾಕ್ ನೀಡಿದೆ. ಸಾರ್ವಜನಿಕರು ರಸ್ತೆಗಳು, ಫುಟ್‌ಪಾತ್‌ಗಳಲ್ಲಿ ಬಿಟ್ಟು ಹೋಗಿರುವ ವಾಹನಗಳ ತೆರವುಗೊಳಿಸಲು ಕೋರ್ಟ್ ಕಾಲಮಿತಿ ನಿಗದಿಪಡಿಸಿದೆ.

ರಸ್ತೆ ಬದಿಯಲ್ಲಿ 15 ದಿನಗಳಿಗಿಂತ ಅಧಿಕ ಸಮಯದವರೆಗೆ ಬಿಟ್ಟು ಹೋಗಿರುವ ವಾಹನಗಳನ್ನು ಹರಾಜು ಹಾಕುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಸಂಚಾರಿ ವಿಭಾಗದ ಪೊಲೀಸ್ ಆಯುಕ್ತರಿಗೆ ಕೋರ್ಟ್ ಗುರುವಾರ (ಫೆಬ್ರವರಿ 8) ನಿರ್ದೇಶನ ನೀಡಿದೆ.

ಫುಟ್‌ಪಾತ್ ಒತ್ತುವರಿ ವಿಚಾರವಾಗಿ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ.

15 ವರ್ಷಕ್ಕಿಂತ ಹಳೆಯ ವಾಹನಗಳನ್ನು 30 ದಿನಗಳಲ್ಲಿ ಹರಾಜು ಹಾಕಬೇಕು. 1 ರಿಂದ 5 ವರ್ಷ ಹಳೆಯ ವಾಹನಗಳನ್ನು ಮೂರು ತಿಂಗಳ ನಂತರ ಹರಾಜು ಮಾಡಬಹುದು. 5 ರಿಂದ 15 ವರ್ಷ ಹಳೆಯದಾದ ವಾಹನಗಳನ್ನು 2 ತಿಂಗಳ ನಂತರ ಹರಾಜ ಮಾಡಬಹುದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಮತ್ತು ಅವರು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಪರಿಗಣಿಸಿ ಈ ನಿರ್ದೇಶವನ್ನು ನೀಡಿದ್ದಾರೆ. ಹಕ್ಕು ಪಡೆಯದ ಅಥವಾ ರಸ್ತೆಬದಿಯಲ್ಲೇ ಬಿಟ್ಟು ಹೋಗಿರುವ ವಾಹನಗಳನ್ನು ಹರಾಜು ಹಾಕುವ ಮೂಲಕ ವಿಲೇವಾರಿ ಮಾಡುವವರೆಗೆ ಅಥವಾ ಸ್ಕ್ರ್ಯಾಪಿಂಗ್‌ಗೆ ಕಳುಹಿಸುವವರೆಗೆ ಇಡಲು ಬೆಂಗಳೂರು ಉತ್ತರದ ಮಲ್ಲಸಂದ್ರದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಗುರುತಿಸಲಾಗಿದೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ಅಲ್ಲದೆ, ಫುಟ್‌ಪಾತ್‌ಗಳು, ಸಾರ್ವಜನಿಕ ಮಾರ್ಗಗಳು, ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು ತಂಡಗಳನ್ನು ರಚಿಸುವ ಯೋಜನೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್‌ಪಾತ್‌ಗಳು ಅತವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ಬಿಟ್ಟು ಹೋದ ವಾಹನ ಅತಂ ಪರಿಗಣಿಸಲಾಗುತ್ತದೆ. ನೋಂದಾಯಿತ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ವಾಹನ ಪಡೆಯಲು ವಿಫಲವಾದರೆ ಇ ಹಾರಾಜು ಮೂಲಕ ಅವುಗಳನ್ನು ಸ್ಕ್ರ್ಯಾಪ್ ಆಗಿ ಮಾರಾಟ ಮಾಡಲಾಗುತ್ತದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅದರಲ್ಲೂ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಾಚಾರಿಗಳು ರಸ್ತೆ ಪಕ್ಕದಲ್ಲೇ ಸಾಗುತ್ತಾರೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ