logo
ಕನ್ನಡ ಸುದ್ದಿ  /  ಕರ್ನಾಟಕ  /  ಬಾಬ್ರಿ ಮಸೀದಿ ಧ್ವಂಸದ ಬಳಿಕ ಟೆಂಟಲ್ಲಿ 2 ಗೊಂಬೆ ಇಟ್ಟು ರಾಮ ಅಂದ್ರು; ಬಾಲರಾಮನ ಬಗ್ಗೆ ಸಚಿವ ರಾಜಣ್ಣ ಹೇಳಿಕೆಗೆ ವ್ಯಾಪಕ ಆಕ್ರೋಶ

ಬಾಬ್ರಿ ಮಸೀದಿ ಧ್ವಂಸದ ಬಳಿಕ ಟೆಂಟಲ್ಲಿ 2 ಗೊಂಬೆ ಇಟ್ಟು ರಾಮ ಅಂದ್ರು; ಬಾಲರಾಮನ ಬಗ್ಗೆ ಸಚಿವ ರಾಜಣ್ಣ ಹೇಳಿಕೆಗೆ ವ್ಯಾಪಕ ಆಕ್ರೋಶ

Umesh Kumar S HT Kannada

Jan 17, 2024 12:59 PM IST

google News

ಕರ್ನಾಟಕದ ಸಚಿವ ಕೆಎನ್ ರಾಜಣ್ಣ

  • KN Rajanna Remark: ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೆಎನ್‌ ರಾಜಣ್ಣ, ಬಾಬ್ರಿ ಮಸೀದಿ ಧ್ವಂಸದ ಬಳಿಕ ಟೆಂಟಲ್ಲಿ 2 ಗೊಂಬೆ ಇಟ್ಟು ರಾಮ ಅಂದ್ರು, ದೇಗುಲಕ್ಕೆ ಹೋಗಿ ವಾಪಸ್ ಬರುವಾಗ ವೈಬ್ರೇಶನ್ ಅಂತಾನೂ ಹೇಳಿದ್ರು. ನಂಗೆ ಯಾವ ಅನುಭವಾನೂ ಆಗಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ. 

ಕರ್ನಾಟಕದ ಸಚಿವ ಕೆಎನ್ ರಾಜಣ್ಣ
ಕರ್ನಾಟಕದ ಸಚಿವ ಕೆಎನ್ ರಾಜಣ್ಣ (ANI)

ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸದ ಬಳಿಕ ಅಯೋಧ್ಯೆ (Ayodhya) ಗೆ ಹೋಗಿದ್ದೆ. ಅಲ್ಲಿ ಟೆಂಟಲ್ಲಿ ಎರಡು ಗೊಂಬೆಗಳನ್ನು ಇಟ್ಟು (dolls in a tent) ಇದೇ ರಾಮ ಅಂತಿದ್ರು ಎಂದು ಕರ್ನಾಟಕ ಸಚಿವ (Karnataka Minister), ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ (KN Rajanna) ನೀಡಿದ್ದ ಹೇಳಿಕೆ ಮಂಗಳವಾರ ವಿವಾದಕ್ಕೀಡಾಗಿದೆ.

ಸಚಿವ ರಾಜಣ್ಣ ಹೇಳಿಕೆ ವಿರುದ್ಧ ದೇಶಾದ್ಯಂತ ಟೀಕೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ನಂತರ ಕೇಸರಿ ಪಕ್ಷವು ಟೆಂಟ್‌ನಲ್ಲಿ ಎರಡು 'ಗೊಂಬೆಗಳನ್ನು' ಇಟ್ಟುಕೊಂಡು ಅದನ್ನು ರಾಮ ಎಂದು ಕರೆದಿದೆ. ಈ ರೀತಿಯಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾರ್ವಜನಿಕರಿಗೆ ಮೋಸ ಮಾಡಿದೆ ಎಂದು ರಾಜಣ್ಣ ಆರೋಪಿಸಿದ್ದರು.

ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ, "ಸಾವಿರಾರು ವರ್ಷಗಳ ಇತಿಹಾಸವಿರುವ ರಾಮಮಂದಿರಗಳಿವೆ. ಆದರೆ ಬಿಜೆಪಿಯವರು ಚುನಾವಣೆಗಾಗಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾರೆ. ಬಿಜೆಪಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ... ಬಾಬರಿ ಮಸೀದಿ ಧ್ವಂಸವಾದಾಗ ನಾನು ಅಯೋಧ್ಯೆಗೆ ಹೋಗಿದ್ದೆ. ಅವರು ಅಲ್ಲಿ ಟೆಂಟ್‌ನಲ್ಲಿ ಎರಡು ಗೊಂಬೆಗಳನ್ನು ಇಟ್ಟುಕೊಂಡು ರಾಮ ಎಂದು ಕರೆದರು” ವರದಿ ಮಾಡಿದೆ.

ರಾಮ ಮಂದಿರಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ಒಂದು ನಿರ್ದಿಷ್ಟ ಕಂಪನವನ್ನು ನಾವು ಅನುಭವಿಸುತ್ತೇವೆ ಎಂದೆಲ್ಲ ಹೇಳುತ್ತಾರೆ. ನನಗೆ ಯಾವುದೇ ಕಂಪನದ ಅನುಭವ ಆಗಿಲ್ಲ ಎಂದು ಮಾತು ಮುಂದುವರಿಸುತ್ತ ರಾಜಣ್ಣ ಹೇಳಿದ್ದರು.

ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದರು. ಇದೇ ಸಮಾರಂಭದಲ್ಲಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ನಿಂದಿಸಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

ಸಚಿವ ಕೆಎನ್‌ ರಾಜಣ್ಣ ಹೇಳಿಕೆಗೆ ವ್ಯಾಪಕ ಟೀಕೆ

ಸಚಿವ ಕೆಎನ್‌ ರಾಜಣ್ಣ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ಎದುರಾಗಿದೆ. ಛತ್ತೀಸಗಡದ ಮಾಜಿ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ಡಿಯೋ ಅವರು ಸಚಿವ ರಾಜಣ್ಣ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಗವಾನ್ ರಾಮನು ಶತಮಾನಗಳಿಂದ ಜನರ ಹೃದಯದಲ್ಲಿ ನೆಲೆಸಿರುವ ಕಾರಣ ಅಂತಹ ಹೇಳಿಕೆ ಬೇಕೂ ಇಲ್ಲ ಅಂಥವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ಅಲೋಕ್ ಕುಮಾರ್ ಕೂಡ ಸಚಿವ ರಾಜಣ್ಣ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಅವರ ಹತಾಶ ಮತ್ತು ನಿರಾಶಾದಾಯಕ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ