logo
ಕನ್ನಡ ಸುದ್ದಿ  /  ಕರ್ನಾಟಕ  /  Kmf Buffalo Milk: ನಾಡಿದ್ದು ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಲಿದೆ ಕೆಎಂಎಫ್‌ ಎಮ್ಮೆ ಹಾಲು, ದರ ಮತ್ತು ಇತರೆ ವಿವರ

KMF Buffalo Milk: ನಾಡಿದ್ದು ಮತ್ತೊಮ್ಮೆ ಮಾರುಕಟ್ಟೆ ಪ್ರವೇಶಿಸಲಿದೆ ಕೆಎಂಎಫ್‌ ಎಮ್ಮೆ ಹಾಲು, ದರ ಮತ್ತು ಇತರೆ ವಿವರ

HT Kannada Desk HT Kannada

Dec 19, 2023 05:17 PM IST

google News

ಕರ್ನಾಟಕದ ಮಾರುಕಟ್ಟೆಗೆ ಮತ್ತೊಮ್ಮೆ ಕೆಎಂಎಫ್ ಎಮ್ಮೆ ಹಾಲು ಪ್ರವೇಶಿಸುತ್ತಿದ್ದು, ಅದಕ್ಕೆ ಬಹಳ ಬೇಡಿಕೆ ಇದೆ ಎಂದು ಕೆಎಂಎಫ್ ಹೇಳಿದೆ. (ಸಾಂಕೇತಿಕ ಚಿತ್ರ)

  • ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಕೆಎಂಎಫ್ ಮತ್ತೊಮ್ಮೆ ಕೆಎಂಎಫ್ ಎಮ್ಮೆ ಹಾಲನ್ನು ಮಾರುಕಟ್ಟೆ ಪರಿಚಯಿಸಲು ಮುಂದಾಗಿದೆ. ಡಿಸೆಂಬರ್ 21 ಮತ್ತು 22ರಂದು ರಾಜ್ಯದ ಮಾರುಕಟ್ಟೆಗಳಲ್ಲಿ ಕೆಎಂಎಫ್‌ ಎಮ್ಮೆ ಹಾಲು (KMF Buffalo Milk) ಮಾರಾಟ ಶುರುವಾಗಲಿದೆ.

ಕರ್ನಾಟಕದ ಮಾರುಕಟ್ಟೆಗೆ ಮತ್ತೊಮ್ಮೆ ಕೆಎಂಎಫ್ ಎಮ್ಮೆ ಹಾಲು ಪ್ರವೇಶಿಸುತ್ತಿದ್ದು, ಅದಕ್ಕೆ ಬಹಳ ಬೇಡಿಕೆ ಇದೆ ಎಂದು ಕೆಎಂಎಫ್ ಹೇಳಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಮಾರುಕಟ್ಟೆಗೆ ಮತ್ತೊಮ್ಮೆ ಕೆಎಂಎಫ್ ಎಮ್ಮೆ ಹಾಲು ಪ್ರವೇಶಿಸುತ್ತಿದ್ದು, ಅದಕ್ಕೆ ಬಹಳ ಬೇಡಿಕೆ ಇದೆ ಎಂದು ಕೆಎಂಎಫ್ ಹೇಳಿದೆ. (ಸಾಂಕೇತಿಕ ಚಿತ್ರ) (KMF)

ಬೆಂಗಳೂರು: ಎಮ್ಮೆ ಹಾಲಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿರುವ ಕಾರಣ, ಎಮ್ಮೆ ಹಾಲನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೆಎಂಎಫ್‌ ಸಜ್ಜಾಗಿದೆ. ಇದೇ ತಿಂಗಳ 21 ಮತ್ತು 22ರಂದು ಕೆಎಂಎಫ್‌ ಎಮ್ಮೆ ಹಾಲು (KMF Buffalo Milk) ಮಾರುಕಟ್ಟೆಗೆ ಮರುಪ್ರವೇಶಿಸಲಿದೆ.

ಗ್ರಾಹಕರಿಂದ ಹೆಚ್ಚುತ್ತಿರುವ ಎಮ್ಮೆಹಾಲಿನ ಬೇಡಿಕೆಯನ್ನು ಪೂರೈಸಲು, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಎಮ್ಮೆ ಹಾಲು ಮಾರಾಟ ಮಾಡಲು ಸಿದ್ಧವಾಗಿದೆ. ಕರ್ನಾಟಕದ ಮಾರುಕಟ್ಟೆಗಳಲ್ಲಿ ಡಿಸೆಂಬರ್ 21 ಮತ್ತು 22 ರಿಂದ ಕೆಎಂಎಫ್ ಎಮ್ಮೆ ಹಾಲು ಲಭ್ಯವಾಗಲಿವೆ.

ಹಾಲಿನ ಪೂರೈಕೆ ವಿಚಾರದಲ್ಲ ಖಾಸಗಿ ಬ್ರಾಂಡ್‌ಗಳಿಂದ ಸ್ಪರ್ಧೆ ಎದುರಾಗಿದೆ. ನಂದಿನಿ ಮತ್ತು ಕೆಎಂಎಫ್‌ ಈ ಪೈಪೋಟಿಯಲ್ಲಿ ಹಿಂದುಳಿಯಲು ಬಯಸುತ್ತಿಲ್ಲ. ಹೀಗಾಗಿ, ತುಪ್ಪ, ಹಾಲು ಪೂರೈಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಲು ಕೆಎಂಎಫ್ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಹೇಳಿದೆ.

ಕೆಲವು ವರ್ಷಗಳ ಹಿಂದೆ ಕೆಎಂಎಫ್‌ ಎಮ್ಮೆ ಹಾಲು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಅಂದು 4,000 ದಿಂದ 5000 ಲೀಟರ್ ಹಾಲನ್ನು ಕೆಎಂಎಫ್‌ ಮಾರಾಟ ಮಾಡುತ್ತಿತ್ತು. ಆದರೆ ನಂತರ ಹಾಲು ಪೂರೈಕೆಯಲ್ಲಿ ಕೊರತೆ ಉಂಟಾದ ಕಾರಣ ಇದನ್ನು ನಿಲ್ಲಿಸಲಾಗಿತ್ತು.

ಈಗ ಮತ್ತೆ ಕೆಎಂಎಫ್ ಎಮ್ಮೆ ಹಾಲಿಗೆ ಬೇಡಿಕೆ ಉಂಟಾಗಿದ್ದು, ಎಮ್ಮೆ ಹಾಲಿಗೆ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಬೇಡಿಕೆ ಇದೆ. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಎಮ್ಮೆ ಹಾಲು ಸಂಗ್ರಹಿಸಲಾಗುತ್ತದೆ.

ಉತ್ತರ ಕರ್ನಾಟಕ ಎಮ್ಮೆ ಹಾಲಿಗೆ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಈ ಭಾಗದ ಜನರು ಎಮ್ಮೆ ಸಾಕಿ ಹಾಲು ಮಾರಾಟ ಮಾಡುತ್ತಾರೆ. ಹೀಗಾಗಿ ವಿಜಯಪುರ, ಬೆಳಗಾವಿ ಭಾಗದ ರೈತರಿಂದ ಎಮ್ಮೆ ಹಾಲು ಸಂಗ್ರಹಿಸಲು ಕ್ರಮ ತೆಗೆದುಕೊಂಡಿರುವುದಾಗಿ ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಈ ಹಾಲು ಲೀಟರಿಗೆ 70 ರೂಪಾಯಿ- 75 ರೂಪಾಯಿ ನಡುವೆ ಇರುವ ಸಾಧ್ಯತೆ ಇದೆ. ಹಾಲಿನ ದರ ಇನ್ನೂ ಅಂತಿಮವಾಗಿಲ್ಲ. ಒಕ್ಕೂಟದ ಆಡಳಿತ ಮಂಡಳಿ ದರ ನಿಗದಿ ಮಾಡುವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೆಎಂಎಫ್ ಪ್ರತಿದಿನ 46 ಲಕ್ಷ ಲೀಟರ್ ಹಾಲು ಮತ್ತು 10 ಲಕ್ಷ ಲೀಟರ್ ಮೊಸರನ್ನು ಕರ್ನಾಟಕ ಮತ್ತು ಗಡಿಯಾದ್ಯಂತ ಮಾರಾಟ ಮಾಡುತ್ತಿದೆ. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಬೋರ್ಡ್‌ ಬಿಡ್‌ ಅನ್ನು ಕೆಎಂಎಫ್‌ ಇತ್ತೀಚೆಗೆ ಕಳೆದುಕೊಂಡಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ