ಲೋಕಸಭಾ ಚುನಾವಣೆ; ಸೊಂಟದಲ್ಲಿ ಗನ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್, ಗನ್ ಇಟ್ಟುಕೊಳ್ಳಲು ವಿಶೇಷ ಅನುಮತಿ
Apr 09, 2024 08:38 AM IST
ಬೆಂಗಳೂರಿನ ಭೈರಸಂದ್ರದಲ್ಲಿ ಸೋಮವಾರ ತೆರೆದ ವಾಹನವೇರಿದ ವ್ಯಕ್ತಿಯ ಸೊಂಟದಲ್ಲಿದ್ದ ಗನ್. ಸೊಂಟದಲ್ಲಿ ಗನ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್ ಎಂದು ಪೊಲೀಸರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ; ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭೈರ ಸಂದ್ರದಲ್ಲಿ ಸೊಂಟದಲ್ಲಿ ಗನ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿ ರಿಯಾಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗನ್ ಇಟ್ಟುಕೊಳ್ಳಲು ವಿಶೇಷ ಅನುಮತಿ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಈ ವಿದ್ಯಮಾನದ ವರದಿ ಇಲ್ಲಿದೆ.
ಬೆಂಗಳೂರು: ಸೊಂಟದಲ್ಲಿ ಗನ್ ಇಟ್ಕೊಂಡ ವ್ಯಕ್ತಿಯೊಬ್ಬ ಪ್ರಚಾರ ವಾಹನದ ಮೇಲೇರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಾರ ಹಾಕಿದ ವಿದ್ಯಮಾನ ಗಮನಸೆಳೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಭದ್ರತಾ ಲೋಪದ ವಿಚಾರ ಚರ್ಚೆಗೆ ಒಳಗಾಗಿದೆ. ಇನ್ನೊಂದೆಡೆ ಇದು ಕೂಡ ಚುನಾವಣಾ ಪ್ರಚಾರದ ವಿಷಯವಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ತೆರೆದ ವಾಹನದಲ್ಲಿ ಭೈರಸಂದ್ರದಲ್ಲಿ ಪ್ರಚಾರ ಮಾಡುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾರ ಹಾಕಲು ಅದರ ಮೇಲೇರಿದ ವ್ಯಕ್ತಿ ಸೊಂಟದಲ್ಲಿ ಗನ್ ಇಟ್ಟುಕೊಂಡಿರುವುದು ಸೋಮವಾರ (ಏಪ್ರಿಲ್ 8) ಕಂಡುಬಂದಿದೆ.
ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ಬಿಳಿಶರ್ಟ್ ಮತ್ತು ಕೆನೆ ಬಣ್ಣ ಪ್ಯಾಂಟ್ ಧರಿಸಿದ್ದ. ಕತ್ತಿನಲ್ಲಿ ಕಾಂಗ್ರೆಸ್ ಶಾಲು ಹಾಕಿದ್ದು, ತಂಪು ಕಣ್ಣಡಕ ಧರಿಸಿದ್ದ. ಆತ ಪ್ರಚಾರದ ವಾಹನದ ಮೇಲೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಬಳಿ ಕುಳಿತು ಹಾರ ಹಾಕುವಾಗ ಶರ್ಟ್ ಹಿಂಬದಿಯಲ್ಲಿ ಮೇಲೆದ್ದ ಕಾರಣ, ಸೊಂಟದಲ್ಲಿಟ್ಟುಕೊಂಡಿದ್ದ ಗನ್ ಸ್ಪಷ್ಟವಾಗಿ ಕಾಣಿಸಿದೆ.
ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ಯಾರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೈರಸಂದ್ರದಲ್ಲಿ ಪ್ರಚಾರ ಮಾಡುವಾಗ ತೆರೆದ ವಾಹನವೇರಿ ಅವರಿಗೆ ಹಾರ ಹಾಕಿದ ವ್ಯಕ್ತಿ ಈಗ ಸುದ್ದಿಯ ಕೇಂದ್ರ ಬಿಂದು. ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ರಿಯಾಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಕಾಂಗ್ರೆಸ್ ಪರ ಘೋಷಣೆ ಕೂಗುತ್ತ ಆತ ಪ್ರಚಾರ ವಾಹನವೇರಿದ್ದ. ಬೆಂಗಳೂರಿನ ಸಿದ್ದಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್. ಕಳೆದ 25 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾನೆ.
ಕೆಲವು ವರ್ಷಗಳ ಹಿಂದೆ ರಿಯಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಕಾರಣ ಆತ ಗನ್ ಇಟ್ಟುಕೊಂಡು ಓಡಾಡುತ್ತಿದ್ದಾನೆ. ಹೀಗಾಗಿ ಆತನಿಗೆ ಗನ್ ಅನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದರಿಂದ ವಿನಾಯಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ವಿಪಕ್ಷ ಬಿಜೆಪಿ ಟೀಕೆ - ಕ್ರಮಕ್ಕೆ ಆಗ್ರಹ
"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾರ ಹಾಕುವವರು ಸನ್ಮಾನ ಮಾಡುವವರು ಗೂಂಡಾಗಳು, ರೌಡಿಗಳು, ಬೀದಿ ಪುಂಡರು ಎನ್ನುವುದು ಸಾಬೀತಾಗಿದೆ. ಇಷ್ಟುದಿನ ಹುಟ್ಟುಹಬ್ಬದ ಫ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿದ್ದ ಗನ್ ಹಿಡಿದ ರೌಡಿಗಳು, ಇದೀಗ ಸಿಎಂ, ಡಿಸಿಎಂ ಅವರ ರ್‍ಯಾಲಿಗಳಲ್ಲಿ ರಾಜಾರೋಷವಾಗಿ ಗನ್ ಹಿಡಿದು ಹಾರ ಹಾಕಿ ಸಮಾಜದ ಮುಂದೆ ಪೋಸ್ ಕೊಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗನ್ ಹಿಡಿದು ಈ ರೀತಿ ಪ್ರದರ್ಶನ ಮಾಡುತ್ತಿರುವುದು ಮತದಾರರನ್ನು ಏರಿಯಾದಲ್ಲಿ ಬೆದರಿಸುವುದಕ್ಕೆ. ಕೂಡಲೇ ಚುನಾವಣಾ ಆಯೋಗವು ಸಿಎಂ ವಿರುದ್ಧ ಕ್ರಮಕೈಗೊಳ್ಳಬೇಕಿದೆ" ಎಂದು ಬಿಜೆಪಿ ಟ್ವೀಟ್ ಮಾಡಿದೆ. ಈ ಟ್ವೀಟ್ ಜೊತೆಗೆ ವಿಡಿಯೋವನ್ನೂ ಅಪ್ಲೋಡ್ ಮಾಡಿದ್ದು ಗಮನಸೆಳೆದಿದೆ. ಚುನಾವಣಾ ಆಯೋಗ ಈ ಕುರಿತು ಇನ್ನೂ ಸ್ಪಂದಿಸಿಲ್ಲ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಯುಗಾದಿಯಂದು ದೇವರ ಪೂಜೆ ಹೇಗಿರಬೇಕು; ಈ ದಿನ ಬ್ರಹ್ಮದೇವನಿಗೆ ಪೂಜೆ ಸಲ್ಲಿಸುವ ಉದ್ದೇಶವೇನು; ಇಲ್ಲಿದೆ ಮಾಹಿತಿ
2) ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ