logo
ಕನ್ನಡ ಸುದ್ದಿ  /  ಕರ್ನಾಟಕ  /  Viral News: ಯಪ್ಪಾ ಶಿವನೇ! ಬೆಂಗಳೂರಿನ ಈ ಮನೆ ಮುಂದೆ ಪಾರ್ಕಿಂಗ್​ ಮಾಡೋರಿಗೆ ಹಿಂಗೆಲ್ಲಾ ಶಾಪ ಹಾಕೋದಾ

Viral News: ಯಪ್ಪಾ ಶಿವನೇ! ಬೆಂಗಳೂರಿನ ಈ ಮನೆ ಮುಂದೆ ಪಾರ್ಕಿಂಗ್​ ಮಾಡೋರಿಗೆ ಹಿಂಗೆಲ್ಲಾ ಶಾಪ ಹಾಕೋದಾ

Meghana B HT Kannada

Jan 31, 2024 05:36 PM IST

google News

ಪಾರ್ಕಿಂಗ್​ ಮಾಡೋರಿಗೆ ಶಾಪ

    • Peak Bengaluru: ಬೆಂಗಳೂರಿನ ಮನೆಯೊಂದರ ಮುಂದೆ 'ಪಾರ್ಕಿಂಗ್ ನಿಷೇಧಿಸಲಾಗಿದೆ' ಎಂದು ಬರೆದ ಸೈನ್‌ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಮನೆಯ ಮುಂಭಾದ ಗೇಟಿಗೆ ಕಟ್ಟಿರುವ ಈ ಫಲಕದಲ್ಲಿ ಇನ್ನೂ ಏನೇನು ಬರ್ದಿದಾರೆ ಅಂತ ಓದಿದ್ರೆ ತಲೆಕೆಟ್ಟು ಹೋಗತ್ತೆ. ಅದು ಕೇವಲ ಬರಹವಲ್ಲ, ಶಾಪ..!
ಪಾರ್ಕಿಂಗ್​ ಮಾಡೋರಿಗೆ ಶಾಪ
ಪಾರ್ಕಿಂಗ್​ ಮಾಡೋರಿಗೆ ಶಾಪ

"ಪೀಕ್ ಬೆಂಗಳೂರು" (Peak Bengaluru), ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್​ ಸೇರಿದಂತೆ ಇತರ ವಿಶಿಷ್ಟ ಘಟನೆಗಳ ಕುರಿತು ವಿವರಿಸಲು ವಿವರಿಸಲು ಸೋಷಿಯಲ್​ ಮೀಡಿಯಾದಲ್ಲಿ ಬಳಸುವ ಪದ. ಇದೀಗ ಇದೇ ಪದ ಪಾಕಿಂಗ್​ ವಿಚಾರಕ್ಕೆ ಸುದ್ದಿ ಆಗ್ತಾ ಇದೆ. ಅದೇನಪ್ಪ ವಿಚಾರ ಎಂತ ನೋಡೋಣ ಬನ್ನಿ..

ಬೆಂಗಳೂರಿನ ಮನೆಯೊಂದರ ಮುಂದೆ 'ಪಾರ್ಕಿಂಗ್ ನಿಷೇಧಿಸಲಾಗಿದೆ' ಎಂದು ಬರೆದ ಸೈನ್‌ಬೋರ್ಡ್‌ ಅನ್ನು ನೇತುಹಾಕಲಾಗಿದೆ. ಮನೆಯ ಮುಂಭಾದ ಗೇಟಿಗೆ ಕಟ್ಟಿರುವ ಈ ಫಲಕದಲ್ಲಿ ಇನ್ನೂ ಏನೇನು ಬರ್ದಿದಾರೆ ಅಂತ ಓದಿದ್ರೆ ತಲೆಕೆಟ್ಟು ಹೋಗತ್ತೆ. ಅದು ಕೇವಲ ಬರಹವಲ್ಲ, ಶಾಪ..!

"ಪಾರ್ಕಿಂಗ್ ನಿಷೇಧಿಸಲಾಗಿದೆ. ಇಲ್ಲಿ ಪಾರ್ಕಿಂಗ್​ ಮಾಡಿದರೆ ನಿಮ್ಮ ಪೂರ್ವಜನ ಕೆಂಗಣ್ಣು ನಿಮ್ಮ ಮೇಲೆ ಬೀಳತ್ತೆ. ನಿಮ್ಮ ಶೂಲೇಸ್‌ಗಳನ್ನು ಕಟ್ಟಲು ಬಿಡಲ್ಲ. ಕ್ರೋಧವುಳ್ಳ ಅಳಿಲುಗಳು ನಿಮ್ಮ ಮನೆಗೆ ಆಕ್ರಮಣ ಮಾಡುತ್ತವೆ. ನಿಮ್ಮ ಜೀವನದುದ್ದಕ್ಕೂ ಕೆಟ್ಟ ದಿನಗಳು ಬರುತ್ತದೆ. ನಿಮ್ಮ ರೆಫ್ರಿಜರೇಟರ್‌ನಲ್ಲಿರುವ ಆಹಾರವು ನಿಗೂಢವಾಗಿ ಹಾಳಾಗುತ್ತದೆ. ಬೇರೆಯವರು ಬಳಸಿದ, ಮರುಬಳಕೆಯಾದ ವಸ್ತುಗಳನ್ನ ಮಾತ್ರ ಉಡುಗೊರೆಯಾಗಿ ಸ್ವೀಕರಿಸುತ್ತಿದ್ದೀರಿ. ನಿಮ್ಮ ವಾಹನವು ಕರ್ಕಶ ಶಬ್ದ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟೈರ್‌ಗಳು ಶಾಶ್ವತವಾಗಿ ಗಾಳಿ ಇಲ್ಲದಂತಾಗುತ್ತದೆ. ಸೊಳ್ಳೆಗಳು ಇತರರನ್ನು ಬಿಟ್ಟು ಕಚ್ಚಲು ನಿಮ್ಮನ್ನೇ ಆರಿಸಿಕೊಳ್ಳುತ್ತದೆ. ಯಾರೂ ಪಾರ್ಟಿಗಳಲ್ಲಿ ನಿಮ್ಮೊಂದಿಗೆ ಮಾತನಾಡುವುದಿಲ್ಲ ಅಥವಾ ನಿಮ್ಮ ಜೋಕ್‌ಗಳನ್ನು ಕೇಳಿ ನಗುವುದಿಲ್ಲ. ಇರಲಿ ಎಚ್ಚರ" --- ಹೀಗೆಂದು ಆ ಬೋರ್ಡ್​ನಲ್ಲಿ ಬರೆಯಲಾಗಿದೆ.

ಈ ಸೈನ್‌ಬೋರ್ಡ್‌ನ ಫೋಟೋವನ್ನು @KrishnaCKPS ಎಂಬ ಎಕ್ಸ್ (ಟ್ವಿಟರ್​) ಬಳಕೆದಾರ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಾರ್ಕಿಂಗ್ ನಿಷೇಧಿಸಲಾಗಿದೆ. ಇದು ಪೀಕ್ ಬೆಂಗಳೂರು. ಪಾರ್ಕಿಂಗ್ ಮಾಡೋರಿಗೆ ಈ ತರಹ ಶಾಪನಾ ಎಂದು ತಮ್ಮ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ. ಇದು ಭಯಾನಕವಾಗಿದೆ ಎಂದು ಒಬ್ಬ ನೆಟ್ಟಿಗ ಕಾಮೆಂಟ್​ ಮಾಡಿದರೆ, ಇನ್ನೊಬ್ಬರು ಈ ಬೋರ್ಡ್​ ಕೋರಮಂಗಲದಲ್ಲಿರುವುದು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೆ "ಸ್ಮಾರ್ಟ್‌ಫೋನ್ ಜೋಂಬಿಗಳ ಬಗ್ಗೆ ಎಚ್ಚರವಿರಲಿ" (Beware of Smartphone Zombies) ಎಂದು ಬೆಂಗಳೂರಿನಲ್ಲಿ ಹಾಕಲಾಗಿದ್ದ ಸೈನ್​ಬೋರ್ಡ್​ವೊಂದು ವೈರಲ್​ ಆಗಿತ್ತು. ಸ್ಮಾರ್ಟ್‌ಫೋನ್ ಜೋಂಬಿ ಎಂದರೆ ಸದಾ ಕಾಲ ಮೊಬೈಲ್​ನಲ್ಲೇ ಮುಳುಗಿರುವವರು ಎಂದರ್ಥ. ಇವರು ರಸ್ತೆದಾಟುವಾಗಲೂ ಮೊಬೈಲ್​ ಬಳಸುತ್ತಲೇ ಇರುತ್ತಾರೆ. ಇವರು ಆರ್ಥಿಕ ಉತ್ಪಾದನೆ ಕಡಿಮೆಯಾಗಲು ಮತ್ತು ಸಾಮಾಜಿಕ ಸಂಪರ್ಕ ಕಡಿತಕ್ಕೆ ಕಾರಣವಾಗುತ್ತಾರೆ ಮಾತ್ರವಲ್ಲ ಸುರಕ್ಷತೆ ವಿಚಾರದಲ್ಲಿ ಇವರು ಅಪಾಯ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ