logo
ಕನ್ನಡ ಸುದ್ದಿ  /  ಕರ್ನಾಟಕ  /  Namma Metro: ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್‌ ದೋಷ; ಬೈಯಪ್ಪನಹಳ್ಳಿ ಗರುಡಾಚಾರ್‌ಪಾಳ್ಯ ನಡುವೆ ರೈಲು ಸಂಚಾರ ವಿಳಂಬ

Namma Metro: ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್‌ ದೋಷ; ಬೈಯಪ್ಪನಹಳ್ಳಿ ಗರುಡಾಚಾರ್‌ಪಾಳ್ಯ ನಡುವೆ ರೈಲು ಸಂಚಾರ ವಿಳಂಬ

Umesh Kumar S HT Kannada

Mar 27, 2024 09:41 AM IST

google News

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ ದೋಷ (ಸಾಂಕೇತಿಕ ಚಿತ್ರ)

  • ಬೆಂಗಳೂರು ಮೆಟ್ರೋ ತಾಂತ್ರಿಕ ದೋಷಗಳ ಕಾರಣ ಪದೆಪದೇ ಸುದ್ದಿಯಾಗುತ್ತಿದೆ. ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ ದೋಷ ಉಂಟಾದ ಕಾರಣ ಬೈಯಪ್ಪನಹಳ್ಳಿ ಗರುಡಾಚಾರ್‌ಪಾಳ್ಯ ನಡುವೆ ರೈಲು ಸಂಚಾರ ವಿಳಂಬವಾಗಿದೆ. 

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ ದೋಷ (ಸಾಂಕೇತಿಕ ಚಿತ್ರ)
ಬೆಂಗಳೂರು ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲಿಂಗ್ ದೋಷ (ಸಾಂಕೇತಿಕ ಚಿತ್ರ) (HT Photo)

ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರ ಮತ್ತೆ ಸುದ್ದಿಯಲ್ಲಿದೆ. ಇಂದು ಈ ಮಾರ್ಗದ ರೈಲು ಸಂಚಾರದಲ್ಲಿ ತೊಂದರೆ ಉಂಟಾಗಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ವಿಚಾರವಾಗಿ ಬೆಂಗಳೂರು ಮಟ್ರೋ ವಿಷಾದ ವ್ಯಕ್ತಪಡಿಸಿದೆ.

ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್‌ಪಾಳ್ಯದ ನಡುವೆ ತಾಂತ್ರಿಕ ದೋಷ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ರೈಲುಗಳು ನಿರ್ಬಂಧಿತ ವೇಗದಲ್ಲಿ ಚಲಿಸುತ್ತಿವೆ. ತಾಂತ್ರಿಕ ದೋಷ ಸರಿ ಪಡಿಸುವ ಕೆಸಲ ಪ್ರಗತಿಯಲ್ಲಿದೆ ಎಂದು ಬಿಎಂಆರ್‌ಸಿಎಲ್ ಟ್ವೀಟ್ ಮಾಡಿದೆ.

ಬೆಂಗಳೂರು ಮೆಟ್ರೋ ಟ್ವೀಟ್‌ನಲ್ಲಿ ಏನಿದೆ

ನಮ್ಮ ಮೆಟ್ರೋದ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್‌ಪಾಳ್ಯ ನಡುವಿನ ನೇರಳೆ ಮಾರ್ಗದಲ್ಲಿ ಸಿಗ್ನಲ್ ದೋಷ ಉಂಟಾಗಿದೆ. ಸಿಗ್ನಲಿಂಗ್‌ನಲ್ಲಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸುವ ಕೆಲಸ ಪ್ರಗತಿಯಲ್ಲಿದೆ. ಈ ದೋಷ ಕಾರಣ ಈ ಮಾರ್ಗದಲ್ಲಿ ರೈಲುಗಳು ನಿರ್ಬಂಧಿತ ವೇಗದಲ್ಲಿ ಸಂಚರಿಸುತ್ತಿವೆ ಎಂದು ಬೆಂಗಳೂರು ಮೆಟ್ರೋ ಟ್ವೀಟ್ ಮಾಡಿದೆ.

ಇದರ ಬೆನ್ನಿಗೆ ಇನ್ನೊಂದು ಟ್ವೀಟ್ ಮಾಡಿರುವ ಬಿಎಂಆರ್‌ಸಿಎಲ್‌, ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್‌ಪಾಳ್ಯ ನಡುವಿನ ಸಿಗ್ನಲ್ ದೋಷವನ್ನು ಸರಿಪಡಿಸಲಾಗಿದ್ದು, ರೈಲುಗಳು ಸಾಮಾನ್ಯ ವೇಗದಲ್ಲಿ ಚಲಿಸುತ್ತಿವೆ ಎಂದು ತಿಳಿಸಿದೆ.

ಐಪಿಎಲ್‌ ಪಂದ್ಯಗಳು ನಡೆಯುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಮಾರ್ಚ್ 29ರಂದು ಮತ್ತು 02 ಏಪ್ರಿಲ್ 2024 ರಂದು ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30 ಕ್ಕೆ ವಿಸ್ತರಿಸಲಿದೆ.

ಈ ಪಂದ್ಯದ ದಿನಗಳಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಅಪರಾಹ್ನ 2.00 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು 50 ರೂಪಾಯಿಗೆ ಲಭ್ಯವಿರುತ್ತದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯೂಆರ್‌ ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ನಮ್ಮ ಮೆಟ್ರೋ ಸೂಚಿಸಿದೆ.

ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ವಿನಂತಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ