logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರು ಟ್ರಾಫಿಕ್​ನಲ್ಲಿ ಬೈಕ್​ ಮೇಲೆ ಕುಳಿತು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ ಯುವತಿ; ನೆಟ್ಟಿಗರ ಕಮೆಂಟ್​ ನೋಡಿ

Bengaluru News: ಬೆಂಗಳೂರು ಟ್ರಾಫಿಕ್​ನಲ್ಲಿ ಬೈಕ್​ ಮೇಲೆ ಕುಳಿತು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ ಯುವತಿ; ನೆಟ್ಟಿಗರ ಕಮೆಂಟ್​ ನೋಡಿ

Meghana B HT Kannada

May 19, 2023 01:48 PM IST

google News

ಬೈಕ್​ ಮೇಲೆ ಕುಳಿತು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ ಯುವತಿ

    • Bengaluru News: ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ಬೆಂಗಳೂರಿನ ಫೋಟೋ ಇದೀಗ ಟೆಕ್ ಹಬ್‌ನಲ್ಲಿ ಕೆಲಸದ ಸಂಸ್ಕೃತಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಬೈಕ್​ ಮೇಲೆ ಕುಳಿತು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ ಯುವತಿ
ಬೈಕ್​ ಮೇಲೆ ಕುಳಿತು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡಿದ ಯುವತಿ

ಬೆಂಗಳೂರು: ವರ್ಕ್​ ಫ್ರಂ ಹೋಮ್​ ಬಗ್ಗೆ ಕೇಳಿರುತ್ತೀರ, ವರ್ಕ್​ ಫ್ರಂ ಬೈಕ್, ವರ್ಕ್​ ಫ್ರಂ ರೋಡ್​​ ಬಗ್ಗೆ ಕೇಳಿಲ್ಲ ಅಲ್ವಾ? ವರ್ಕ್​ ಫ್ರಂ ಬೈಕ್​ಗೆ ವೈರಲ್​ ಆಗಿರುವ ಫೋಟೋ ಉದಾಹರಣೆ. ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಫೋಟೋವೊಂದರಲ್ಲಿ ಯುವತಿಯೊಬ್ಬಳು ರ‍್ಯಾಪಿಡೋ ಬೈಕ್​ನಲ್ಲಿ ಕುಳಿತು ಲ್ಯಾಪ್​ಟಾಪ್​​ನಲ್ಲಿ ಕೆಸಲ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ.

ಈ ಪೋಸ್ಟ್​ ಶೇರ್​ ಮಾಡಿರುವ ನಿಹಾರ್ ಲೋಹಿಯಾ ಎಂಬ ಟ್ವಿಟರ್ ಬಳಕೆದಾರ "ಬೆಂಗಳೂರಿನ ಉತ್ತುಂಗದ ಕ್ಷಣ, ರ‍್ಯಾಪಿಡೋ ಬೈಕ್​ನಲ್ಲಿ ಕುಳಿತು ಕಚೇರಿಗೆ ಯುವತಿ ಕೆಲಸ" ಎಬ ಶೀರ್ಷಿಕೆಯನ್ನು ನೀಡಿದ್ದಾರೆ. ಇದಕ್ಕೆ ಟ್ರಾಫಿಕ್​ ಜಾಮ್​, ಟ್ರಾಫಿಕ್​ ಅಲರ್ಟ್​, ಬೆಂಗಳೂರು ಟ್ರಾಫಿಕ್​​, ರೋಡ್​ಬ್ಲಾಕ್​, ಪೀಕ್​ಬೆಂಗಳೂರು ಎಂಬ ಹ್ಯಾಶ್​ಟ್ಯಾಗ್​ಗಳನ್ನು ಬಳಸಿದ್ದಾರೆ.

ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಟೆಕ್ ಹಬ್‌ನಲ್ಲಿ ಕೆಲಸದ ಸಂಸ್ಕೃತಿಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಪರಿಪರಿಯಾಗಿ ಕಮೆಂಟ್​ ಮಾಡುತ್ತಿದ್ದಾರೆ. ಟ್ವಿಟರ್ ಕಾಮೆಂಟ್‌ಗಳು ಮತ್ತು ಪ್ರತಿಕ್ರಿಯೆಗಳಿಂದ ತುಂಬಿತ್ತು, ಕೆಲವರು ಉದ್ಯೋಗಿಗಳಿಗೆ ಕ್ರೂರ ಕೆಲಸದ ಸಂಸ್ಕೃತಿಯ ಮೇಲೆ ದಾಳಿ ಮಾಡಿದರು. "ಅವಳು ಬೈಕಿನಲ್ಲಿ ಕೆಲಸ ಮಾಡಬೇಕಾದರೆ ಒತ್ತಡ ಎಷ್ಟಿರಬೇಕೆಂದು ಊಹಿಸಿ. ಉದ್ಯೋಗದಾತರು ಎಷ್ಟು ಕ್ರೂರಗಳು ಇರಬಹುದು. ಅಕಸ್ಮಾತ್​, ಆಕೆ ತನ್ನ ವೈಯಕ್ತಿಕ ಸಮಸ್ಯೆಯಿಂದ ಹಾಗೆ ಮಾಡುತ್ತಿದ್ದರೆ ಆಗ ಆಕೆಯನ್ನು ದೂಷಿಸಬೇಕಾಗುತ್ತದೆ" ಟ್ವಿಟರ್​ ಬಳಕೆದಾರರೊಬ್ಬರು ಹೇಳಿದ್ದಾರೆ.

"ವರ್ಷದ ಉದ್ಯೋಗಿ ಪ್ರಶಸ್ತಿ," ಈಕೆಗೆ ಸಲ್ಲಬೇಕು ಎಂದು ಒಬ್ಬರು ಕಮೆಂಟ್​ ಮಾಡಿದರೆ, "WFR; ವರ್ಕ್​ ಫ್ರಂ ರೋಡ್​?" ಎಂದು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ಬೆಂಗಳೂರು ನಗರದಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಎತ್ತಿ ಹಿಡಿದಿದ್ದಾರೆ. ಆಗಾಗ ಉದ್ಯೋಗಿಗಳು ಕೆಲಸಕ್ಕೆ ತಡವಾಗಿ ಬರಲು ಬೆಂಗಳೂರಿನ ಸಂಚಾರ ದಟ್ಟಣೆ ಕಾರಣ. "ಸಿಗ್ನಲ್‌ಗಳಲ್ಲಿ ಆಟೋ ಒಳಗೆ ಕುಳಿತು ಸಹ ಕೆಲವರು ಕೆಲಸ ಮಾಡುವುದನ್ನು ನೋಡಬಹುದಾಗಿದೆ" ಎಂದು ಹೇಳಿದ್ದಾರೆ.

ಮತ್ತೊಬ್ಬರು, "ಮನೆಯಿಂದ 8ಕ್ಕೆ ಹೊರಟರೆ ಆಫೀಸ್​ ತಲುಪುವುದು 10 ಗಂಟೆಗೆ" ಎಂದು ಹೇಳಿದ್ದಾರೆ. ಕಮೆಂಟ್​ಗಳ ಹೊರತಾಗಿ ಹೇಳುವುದಾದರೆ ಬೈಕ್​ನಲ್ಲಿ ಹಿಂದೆ ಕುಳಿತು ಲ್ಯಾಪ್​ಟಾಪ್​ ಹಿಡಿದು ಕೆಲಸ ಮಾಡುವುದು ಅಪಾಯಕಾರಿಯಾಗಿದೆ. ಹಂಪ್​​ಗಳು ಇರುವೆಡೆ ಬೈಕ್​ ಜಂಪ್​ ಆದಾಗ ಬ್ಯಾಲೆನ್ಸ್ ತಪ್ಪಿದರೆ ಬೈಕ್​ನಿಂದ ಕೆಳಗೆ ಬೀಳಬೇಕಾಗುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ