logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Water Adalat : ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ನಾಳೆ ಬೆಳಗ್ಗೆ 9.30ರಿಂದ, ಎಲ್ಲೆಲ್ಲಿ? ವಿವರ ಹೀಗಿದೆ

Bengaluru Water Adalat : ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ನಾಳೆ ಬೆಳಗ್ಗೆ 9.30ರಿಂದ, ಎಲ್ಲೆಲ್ಲಿ? ವಿವರ ಹೀಗಿದೆ

HT Kannada Desk HT Kannada

Oct 25, 2023 09:15 PM IST

google News

ಬೆಂಗಳೂರು ಜಲ ಮಂಡಳಿ

  • ಬೆಂಗಳೂರು ಜಲ ಮಂಡಳಿ ವ್ಯಾಪ್ತಿಯ ವಿವಿಧ ಉಪ ವಿಭಾಗಗಳಲ್ಲಿ ಅಕ್ಟೋಬರ್ 26ರಂದು ನೀರಿನ ಅದಾಲತ್ ನಡೆಯಲಿದೆ. ಬೆಳಗ್ಗೆ 9.30 ರಿಂದ 11 ಗಂಟೆ ತನಕ ನಡೆಯಲಿದ್ದು, ಅದರ ವಿವರ ಹೀಗಿದೆ.

ಬೆಂಗಳೂರು ಜಲ ಮಂಡಳಿ
ಬೆಂಗಳೂರು ಜಲ ಮಂಡಳಿ

ಬೆಂಗಳೂರಿನ ಕೆಲವು ಆಯ್ದ ಪ್ರದೇಶಗಳಲ್ಲಿ ನೀರಿನ ಅದಾಲತ್ ನಾಳೆ (ಅ.26) ಬೆಳಗ್ಗೆ 9.30ರಿಂದ 11 ಗಂಟೆ ತನಕ ನಡೆಯಲಿದೆ ಎಂದು ಬೆಂಗಳೂರು ಜಲ ಮಂಡಳಿ ಬುಧವಾರ (ಅ.25) ತಿಳಿಸಿದೆ.

ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್ ಯಾವಾಗ

ಅಕ್ಟೋಬರ್ 26 ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್‌ನಲ್ಲಿ ಯಾವ ಸಮಸ್ಯೆಗಳಿಗೆ ಪರಿಹಾರ

ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್‌ನಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಜಲಮಂಡಳಿ ತಿಳಿಸಿದೆ.

ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್ ಎಲ್ಲೆಲ್ಲಿ

ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಆಗ್ನೇಯ -3, ಆಗ್ನೇಯ 6, ಪಶ್ಚಿಮ 1-3, ವಾಯುವ್ಯ -5, ಉತ್ತರ 2-3, ದಕ್ಷಿಣ 1-3, ನೈಋತ್ಯ – 3, ನೈಋತ್ಯ -6, ಮತ್ತು ಪೂರ್ವ 2-4, ಉಪವಿಭಾಗಗಳಲ್ಲಿ ನೀರಿನ ಅದಾಲತ್ ನಡೆಯಲಿದೆ.

ಅದಾಲತ್ ಸೇವಾ ಠಾಣೆಗಳಾದ ಅರಳೂರು, ದೊಡ್ಡ ಕಣ್ಣನಹಳ್ಳಿ, ಕಸವನಹಳ್ಳಿ, ಬಿ.ಟಿ.ಎಂ ಲೇಔಟ್, 1,2 ಮತ್ತು 3, ವೆಸ್ಟ್ ಆಫ್ ಕಾರ್ಡ್ ರಸ್ತೆ, 1 ಮತ್ತು 2, ಕಾಮಾಕ್ಷಿಪಾಳ್ಯ, ಕಮಲಾನಗರ, ಮಹಾಲಕ್ಷ್ಮೀ ಲೇಔಟ್, ಅಗ್ರಹಾರ ದಾಸರಹಳ್ಳಿ, ಶೆಟ್ಟಿಹಳ್ಳಿ, ಅಬ್ಬಿಗೆರೆ, ಚಿಕ್ಕಸಂದ್ರ, ಸಿಡೇದಹಳ್ಳಿ, ದೊಡ್ಡಬಿದರಕಲ್ಲು, ಜಿ.ಕೆ.ವಿ.ಕೆ, ಮಾನ್ಯತಾ ಟೆಕ್‍ಪಾರ್ಕ್, ಅಂಜನಾಪುರ, ಬ್ಯಾಂಕ್ ಆಫೀಸರ್ಸ್ ಲೇಔಟ್, ಗೊಟ್ಟಿಗೆರೆ, ಎಂ.ಎನ್, ಪಾರ್ಕ್, ಬಿ.ಟಿ.ಆರ್, ಮೌಂಟ್‍ಜಾಯ್, ನಾಗೇಂದ್ರಬ್ಲಾಕ್, ಗಿರಿನಗರ, ಅಂಗಧೀರನಹಳ್ಳಿ, ಹೆಮ್ಮಿಗೆಪುರ, ಬನಶಂಕರಿ 6ನೇ ಹಂತ, ಕೆ.ಆರ್. ಪುರಂ, ಬಸವನಪುರ, ದೇವಸಂದ್ರ, ರಾಮಮೂರ್ತಿ ನಗರ, ವಿಜಿನಾಪುರ, ದೂರವಾಣಿನಗರ ಇಲ್ಲಿ ನೀರಿನ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ಜಲ ಮಂಡಳಿ ನೀರಿನ ಅದಾಲತ್ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ