Traffic Police Tips: ರಸ್ತೆಯಲ್ಲಿ ವಾಹನ ಸವಾರರ ಮಾತಿನ ಚಕಮಕಿಯಲ್ಲಿ ಸಿಲುಕಿದ್ದೀರಾ? ಬೆಂಗಳೂರು ಸಂಚಾರಿ ಪೊಲೀಸರ ಈ 8 ಟಿಪ್ಸ್ ಅನುಸರಿಸಿ
May 22, 2024 07:30 AM IST
ರಸ್ತೆಯಲ್ಲಿ ವಾಹನ ಸವಾರರ ಮಾತಿನ ಚಕಮಕಿಯಲ್ಲಿ ಸಿಲುಕಿದ್ದೀರಾ? ಬೆಂಗಳೂರು ಸಂಚಾರಿ ಪೊಲೀಸರ ಈ 8 ಟಿಪ್ಸ್ ಅನುಸರಿಸಿ
- ವಾಹನ ಸಂಚಾರದ ಸಂದರ್ಭದಲ್ಲಿ ನೀವೇನಾದರೂ ರಸ್ತೆಯಲ್ಲಿನ ಗದ್ದಲ, ಗಲಾಟೆಯಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು. ಬೆಂಗಳೂರಿನ ಪೊಲೀಸರು ಶೇರ್ ಮಾಡಿಕೊಂಡಿರುವ ಈ 8 ಟಿಪ್ಸ್‌ಗಳನ್ನು ಅನುಸರಿಸಿ ಸಮಸ್ಯೆಯಿಂದ ಪಾರಾಗಿ.
ಬೆಂಗಳೂರು: ರಸ್ತೆಯಲ್ಲಿ ಸಂಚರಿಸುವಾಗ ಹಿಂದಿನ ವಾಹನ ಸವಾರ ಹಾರ್ನ್ ಮಾಡಿದ ಅಂತ, ಇಲ್ಲವೇ ಟ್ರಾಫಿಕ್‌ನಲ್ಲಿ ವಾನಕ್ಕೆ ತಾಕಿಸಿದರು ಅಂತರು ಹೀಗೆ ನಾನಾ ಕಾರಣಗಳಿಗೆ ರಸ್ತೆಯಲ್ಲೇ ಬೈಕ್ ಹಾಗೂ ವಾಹನ ಸವಾರರು ಜಗಳ, ಗಲಾಟೆ ಮಾಡುವುದು ನೋಡಿರುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ಸುರಕ್ಷಿತವಾಗಿ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದಷ್ಟು ಟಿಪ್ಸ್ ಕೊಟ್ಟಿದ್ದಾರೆ.
ಸಂಚಾರದ ಸ್ಥಳದಲ್ಲಿಏಕಾಏಕಿ ಉಂಟಾಗುವ ಘಟನೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಹಂತ ಹಂತದ ಅಂಶಗಳನ್ನು ತೋರಿಸುವ ವೀಡಿಯೊವನ್ನು ಬೆಂಗಳೂರು ಪೊಲೀಸರು ಹಂಚಿಕೊಂಡಿದ್ದಾರೆ. ಈ ಸಂದರ್ಭಗಳಲ್ಲಿ ಮೊದಲು ತಾಳ್ಮೆಯನ್ನು ಹೊಂದಿರಬೇಕು.
"ರಸ್ತೆಯಲ್ಲಿ ಬಿಸಿಬಿಸಿ ವಾಕ್ಸಮರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಾ? ನೆನಪಿಡಿ, ಸುರಕ್ಷತೆಯೇ ಮೊದಲನೆಯದು! ರಸ್ತೆಯಲ್ಲಿ ಘಟನೆಗಳನ್ನು ಸುರಕ್ಷಿತವಾಗಿ ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳಿಗಾಗಿ ನಮ್ಮ ಇತ್ತೀಚಿನ ವೀಡಿಯೊವನ್ನು ಪರಿಶೀಲಿಸಿ ಎಂದು ಸಾಮಾಜಿಕ ಜಲತಾಣ ಎಕ್ಸ್‌ನಲ್ಲಿ ಪೊಲೀಸರು ಹಂಚಿಕೊಂಡಿರುವ 8 ಟಿಪ್ಸ್‌ಗಳು ಇಲ್ಲಿವೆ.
ಬೆಂಗಳೂರು ಸಂಚಾರಿ ಪೊಲೀಸರು ಹಂಚಿಕೊಂಡಿರುವ 8 ಟಿಪ್ಸ್‌ಗಳಿವು
- ವಾಹನ ಸಂಚಾರದ ಸಮಯದಲ್ಲಿ ಜಗಳ, ಗಲಾಟೆಗಳು ಸಂಭವಿಸಿದೆ ಮೊದಲು ತಾಳ್ಮೆಯನ್ನು ಕಾಯ್ದುಕೊಳ್ಳಿ
- ಎದುರುಗಡೆ ಇರುವವರೊಂದಿಗೆ ವಾಗ್ವಾದ ಮಾಡಲು ಹೋಗಬೇಡಿ. ವಾಗ್ವಾದವನ್ನು ತಪ್ಪಿಸಿ
- ನಿಮ್ಮ ವಿವೇಚನೆಗೆ ತಕ್ಕಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗಬೇಡಿ
- ನಿಮ್ಮೊಂದಿಗೆ ಜಗಳಕ್ಕೆ ಇಳಿದವರ ವಾಹನ ಸಂಖ್ಯೆಯ ಫೋಟೊ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ
- ತುರ್ತು ಸಹಾಯವಾಣಿ ‘ನಮ್ಮ 112’ ಗೆ ಕರೆ ಮಾಡಿ. ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಿ
- ಮೊದಲು ಸಂಚಾರ ಅಸ್ತವ್ಯಸ್ತವಾಗುವುದನ್ನು ತಪ್ಪಿಸಿ. ಘಟನೆಯಲ್ಲಿ ಭಾಗವಹಿಸಿದ ವಾಹನ ಅಥವಾ ಘಟನೆಯ ಫೋಟೊವನ್ನು ತೆಗೆದುಕೊಳ್ಳಿ
- ಸ್ಥಳಕ್ಕೆ ಪೊಲೀಸರು ಬಂದಾಗ ಘಟನೆಯ ಬಗ್ಗೆ ಸರಿಯಾದ ಮಾಹಿತಿ ನೀಡಿ. ಇತರೆ ವ್ಯಕ್ತಿಗಳು ತಮ್ಮ ನಿಲುವನ್ನು ತಿಳಿಸಲು ಅವಕಾಶ ಮಾಡಿಕೊಡಿ.
- ಕಾನೂನಿನ ಅಡಿಯಲ್ಲಿ ಕ್ರಮಕ್ಕೆ ಅವಕಾಶ ನೀಡಿ.
ಒಟ್ಟು 8 ಅಂಶಗಳನ್ನು ಒಳಗೊಂಡಿರುವ ಈ ವಿಡಿಯೋವನ್ನು 20 ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು 3.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸುಮಾರು 19,000 ಲೈಕ್ ಗಳನ್ನು ಸಂಗ್ರಹಿಸಿದೆ. ಹಂಚಿಕೆಗೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಪೊಲೀಸರ ಪೋಸ್ಟ್ ಅನ್ನು ಶ್ಲಾಘಿಸಿದ್ದಾರೆ. ಹೆಚ್ಚಿನವರು ಇಂತಹ ಘಟನೆಗಳು ಸಂಭವಿಸಿದಾಗ ಪೊಲೀಸರು ಏನೂ ಮಾಡುವುದಿಲ್ಲ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ವಾಗ್ವಾದದ ಪರಿಸ್ಥಿತಿಯಲ್ಲಿ ಕೊನೆಗೊಂಡರೆ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗದವರಿಗೆ ವಿಷಯಗಳು ಹೆಚ್ಚು ಸವಾಲಿನದ್ದಾಗುತ್ತವೆ ಎಂದು ಕೆಲವರು ಹೇಳಿದ್ದಾರೆ.