logo
ಕನ್ನಡ ಸುದ್ದಿ  /  ಕರ್ನಾಟಕ  /  ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ, ಮಳೆಗೆಸೋರುವ, ಹೊಗೆ ಕಾರುವ ಬಸ್‌ಗಳು, ಇಲ್ಲಿವೆ ಆಯ್ದ 5 ಸೋಷಿಯಲ್ ಮೀಡಿಯಾ ಪೋಸ್ಟ್‌

ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ, ಮಳೆಗೆಸೋರುವ, ಹೊಗೆ ಕಾರುವ ಬಸ್‌ಗಳು, ಇಲ್ಲಿವೆ ಆಯ್ದ 5 ಸೋಷಿಯಲ್ ಮೀಡಿಯಾ ಪೋಸ್ಟ್‌

Umesh Kumar S HT Kannada

May 25, 2024 02:30 PM IST

google News

ಕರ್ನಾಟಕದ ಉದ್ದಗಲಕ್ಕೂ ನೀರು ಸೋರುವ, ಹೊಗೆ ಕಾರುವ ಬಸ್‌ಗಳು ಓಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಡೀಸೆಲ್ ಖಾಲಿಯಾಗಿ ನಿಂತ ಕುಂದಾಪುರ ಬಸ್ (ಎಡ ಚಿತ್ರ), ಸ್ಟೇಟ್ ಬ್ಯಾಂಕ್ - ಧರ್ಮಸ್ಥಳ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ಹೊಗೆ ಉಗುಳುತ್ತಿರುವ ದೃಶ್ಯ (ಬಲ ಚಿತ್ರ)

  • ಕರ್ನಾಟಕದ ಉದ್ದಗಲಕ್ಕೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವಿದೆ. ಮೂಲೆ ಮೂಲೆಗೂ ಸಂಚಾರ ಸಂಪರ್ಕ ಒದಗಿಸಿರುವ ಬಗ್ಗೆ ಖುಷಿಪಡಬೇಕಾದರೂ, ತೊಂದರೆ ಪರಿಹರಿಸುವುದರ ಕಡೆಗೂ ಗಮನಹರಿಸಬೇಕಾದ್ದು ಅಗತ್ಯ. ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಮಳೆಗೆ ಸೋರುವ, ಹೊಗೆ ಕಾರುವ ಬಸ್‌ಗಳ ಆಯ್ದ 5 ಸೋಷಿಯಲ್ ಮೀಡಿಯಾ ಪೋಸ್ಟ್‌ ಇಲ್ಲಿದೆ.

ಕರ್ನಾಟಕದ ಉದ್ದಗಲಕ್ಕೂ ನೀರು ಸೋರುವ, ಹೊಗೆ ಕಾರುವ ಬಸ್‌ಗಳು ಓಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಡೀಸೆಲ್ ಖಾಲಿಯಾಗಿ ನಿಂತ ಕುಂದಾಪುರ ಬಸ್ (ಎಡ ಚಿತ್ರ), ಸ್ಟೇಟ್ ಬ್ಯಾಂಕ್ - ಧರ್ಮಸ್ಥಳ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ಹೊಗೆ ಉಗುಳುತ್ತಿರುವ ದೃಶ್ಯ (ಬಲ ಚಿತ್ರ)
ಕರ್ನಾಟಕದ ಉದ್ದಗಲಕ್ಕೂ ನೀರು ಸೋರುವ, ಹೊಗೆ ಕಾರುವ ಬಸ್‌ಗಳು ಓಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿವೆ. ಡೀಸೆಲ್ ಖಾಲಿಯಾಗಿ ನಿಂತ ಕುಂದಾಪುರ ಬಸ್ (ಎಡ ಚಿತ್ರ), ಸ್ಟೇಟ್ ಬ್ಯಾಂಕ್ - ಧರ್ಮಸ್ಥಳ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ಹೊಗೆ ಉಗುಳುತ್ತಿರುವ ದೃಶ್ಯ (ಬಲ ಚಿತ್ರ)

ಬೆಂಗಳೂರು: ಮಳೆ ಬರುವಾಗ ಛತ್ರಿ ಹಿಡಿದು ಬಸ್‌ ಚಲಾಯಿಸಿದ ಧಾರವಾಡದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕಿಯನ್ನು ಸಂಸ್ಥೆ ಅಮಾನತುಗೊಳಿಸಿದೆ. ಆದರೆ, ಈ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆಯ ಕುರಿತು ವ್ಯಾಪಕ ಟೀಕೆಗಳು ಪದೇಪದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಲೇ ಇದೆ.

ಉತ್ತರ ಪ್ರದೇಶದ ಅಧಿಕಾರಿಗಳು ಬೆಂಗಳೂರಿಗೆ ಬಂದು ಕೆಎಸ್‌ಆರ್‌ಟಿಸಿಯ ಬಸ್‌ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೋಗಿರುವುದು ಒಂದೆಡೆ. ಆದರೆ, ರಾಜ್ಯದ ಬಹುಭಾಗಗಳಿಗೆ ಸಂಪರ್ಕ ಕೊಂಡಿಯಾಗಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳುತ್ತಿದೆ. ಇದಕ್ಕೆ ನಿದರ್ಶನಗಳೂ ಸಿಗುತ್ತಿವೆ.

ಇತ್ತೀಚೆಗೆ ಶಿವಮೊಗ್ಗ - ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್‌ ಡೀಸೆಲ್ ಖಾಲಿಯಾಗಿ ನಿಂತದ್ದು ಸುದ್ದಿಯಾಗಿತ್ತು. ಇವುಗಳ ನಡುವೆ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ವರ್ತನೆಗಳೂ ಟೀಕೆಗೆ ಒಳಗಾಗುತ್ತಿವೆ. ಈ ಎಲ್ಲ ವಿಚಾರಗಳ ಕಡೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗಮನಹರಿಸಬೇಕಾಗಿದೆ ಎಂಬುದು ಪ್ರಯಾಣಿಕರ ಆಗ್ರಹ.

1) ಸೋರುತಿದೆ ಹಾಸನ - ಹಳೆಬೀಡು ನಡುವೆ ಸಂಚರಿಸುವ ಸಾರಿಗೆ ಬಸ್‌

ಹಾಸನ ನ್ಯೂಸ್ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟವಾಗಿರುವ ವಿಡಿಯೋ ಇದು, ಹಾಸನ- ಹಳೆಬೀಡು ನಡುವೆ ಸಂಜೆ 6 ಗಂಟೆಗೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಳೆ ಬರುವಾಗ ಪ್ರಯಾಣಿಸುವ ಕಷ್ಟವನ್ನು ಈ ವಿಡಿಯೋ ತೆರೆದಿಟ್ಟಿದೆ. ಈ ವಿಡಿಯೋ 900ಕ್ಕೂ ಹೆಚ್ಚು ಸಲ ಶೇರ್ ಆಗಿದ್ದು, 200ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

2) ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ತಳ ತೆರೆದುಕೊಂಡ ಸಾರಿಗೆ ಸಂಸ್ಥೆ ಬಸ್‌ ಸಂಚಾರ

ಶಿವಮೊಗ್ಗ - ಹರಿಹರ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಕರು ಕಾಲು ಇರಿಸುವ ಜಾಗದಲ್ಲಿ ತಳಭಾಗ ಓಪನ್ ಆಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಬಸ್‌ಗಳ ನಿರ್ವಹಣೆ ವಿಚಾರದಲ್ಲಿ ಬಸ್‌ ಸಿಬ್ಬಂದಿ ಮತ್ತು ಆಡಳಿತ ತೋರುತ್ತಿರುವ ನಿರ್ಲಕ್ಷ್ಯ ಇದು ಎಂಬ ಅಸಮಾಧಾನ ವ್ಯಕ್ತವಾಗಿದೆ. ಪಬ್ಲಿಕ್ ನೆಕ್ಸ್ಟ್‌ ಈ ವಿಡಿಯೋ ಶೇರ್ ಮಾಡಿದೆ.

3) ಹೊಗೆ ಕಾರುವ ಪೆರಿಯಾಪಟ್ಟಣ ಸಾರಿಗೆ ಬಸ್‌

ನಿಖಿಲ್ ಪೈ ಎಂಬುವವರು ಕೆಎಸ್‌ಆರ್‌ಟಿಸಿಯ ಗ್ರಾಮಾಂತರ ಸಾರಿಗೆ ಬಸ್‌ನ ಫೋಟೋ ಶೇರ್ ಮಾಡಿದ್ದು, KA09 F4871 ಈ ನಂಬರ್‌ನ ಬಸ್‌ ಭಾರಿ ಪ್ರಮಾಣದ ಹೊಗೆ ಉಗುಳುತ್ತಿದೆ. ಇದರ ಮಾಲಿನ್ಯ ಪ್ರಮಾಣ ಪತ್ರ ಪರಿಶೀಲಿಸಿ, ಸಂಬಂಧಪಟ್ಟ ಪೆರಿಯಾಪಟ್ಟಣದ ಡಿಪೋ ಅಧಿಕಾರಿ ಮತ್ತು ಬಸ್‌ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

4) ಡೀಸೆಲ್ ಖಾಲಿಯಾಗಿ ನಿಂತ ಕುಂದಾಪುರ ಬಸ್‌

ಅಕ್ಷಯ್ ಅಕ್ಕಿ ಎಂಬುವವರು ಎಕ್ಸ್‌ನಲ್ಲಿ ಪಬ್ಲಿಕ್ ನೆಕ್ಸ್ಟ್‌ನ ವಿಡಿಯೋ ಶೇರ್ ಮಾಡಿದ್ದು, ಶಿವಮೊಗ್ಗ ಕುಂದಾಪುರ ಕೆಎಸ್‌ಆರ್‌ಟಿಸಿ ಬಸ್‌ ಡೀಸೆಲ್ ಇಲ್ಲದೇ ದಾರಿ ಮಧ್ಯೆ ನಿಂತ ಘಟನೆಯ ವಿವರ ಅದರಲ್ಲಿದೆ. ಬಸ್‌ನ ಸಿಬ್ಬಂದಿ ಮಾತನಾಡಿದ್ದು, ಕೈಯಿಂದ ದುಡ್ಡು ಹಾಕಿ ಡೀಸೆಲ್ ತುಂಬಿಸಿ ಡಿಪೋಗೆ ಬರುವಂತೆ ಮ್ಯಾನೇಜರ್ ತಿಳಿಸಿದ್ದಾಗಿ ಹೇಳಿರುವುದು ವಿಡಿಯೋದಲ್ಲಿದೆ. ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಿದ್ದು, ಡಿಪೋ ಮ್ಯಾನೇಜರ್‌ ಮತ್ತು ಬಸ್ ಸಿಬ್ಬಂದಿ ಬೇಜವಾಬ್ದಾರಿ ನಿರ್ವಹಣೆಯ ಲೋಪವನ್ನು ಎತ್ತಿ ತೋರಿಸಿದೆ.

5) ಭಾರಿ ಪ್ರಮಾಣದ ಹೊಗೆಯುಗುಳುವ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್‌

ಸಚಿನ್ ಬಾವೂರು ಎಂಬುವವರು ಟ್ವೀಟ್ ಮಾಡಿದ ವಿಡಿಯೋದಲ್ಲಿ ಉತ್ತರ ಕರ್ನಾಟಕಕ್ಕೆ ಹೋಗುವ ಬಸ್‌ನ ಪರಿಸ್ಥಿತಿ ದಾಖಲಾಗಿದೆ. ಭಾರಿ ಪ್ರಮಾಣದ ಹೊಗೆ ಉಗುಳುವ ಬಸ್ ಇದರಲ್ಲಿದೆ. ಉತ್ತರ ಕರ್ನಾಟಕದ ಪ್ರೀಮಿಯಂ ಬಸ್‌ಗಳ ಪರಿಸ್ಥಿತಿ ಇದು. ಬೆಂಗಳೂರು- ಮೈಸೂರು ನಗರಗಳಿಗೆ ಮಾತ್ರ ಯಾಕೆ ಹೊಸ ಹೊಸ ಬಸ್‌ಗಳು ಎಂದು ಮುಖ್ಯಮಂತ್ರಿಯನ್ನು ಟ್ಯಾಗ್ ಮಾಡಿರುವ ಸಚಿನ್, ಯಾಕೆ ಈ ರೀತಿ ಮಲತಾಯಿ ಧೋರಣೆ, ಕರ್ನಾಟಕದ ಉಳಿದ ಭಾಗಗಳ ಬಗ್ಗೆ ನಿಮಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಲ್ಲೂ ಅಷ್ಟೆ ಬಸ್‌ಗಳ ನಿರ್ವಹಣೆಯ ಕೊರತೆ ಎದ್ದುಕಾಣುತ್ತಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ