Bengaluru Rain Red alert: ಬೆಂಗಳೂರಲ್ಲಿ ಮಳೆ; ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
Sep 07, 2022 05:03 PM IST
ಮಳೆ ನೀರಿನಿಂದ ಜಲಾವೃತ ಬೆಂಗಳೂರಿನ ಪ್ರದೇಶ ಒಂದರ ದೃಶ್ಯ (ಕಡತ ಚಿತ್ರ)
- Bengaluru rain: ಬೆಂಗಳೂರು ಮಹಾನಗರದಲ್ಲಿ ಬುಧವಾರ ಮುಂಜಾನೆ ಬಹಳ ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ, ಮತ್ತೆ ಭಾರೀ ಮಳೆ ಬೀಳಲಿದ್ದು, ಪರಿಸ್ಥಿತಿ ಕಠೋರವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ವಿವರ ಇಲ್ಲಿದೆ.
ಬೆಂಗಳೂರು: ತೀವ್ರ ಪ್ರವಾಹ ಪರಿಸ್ಥಿತಿ ಎದುರಿಸಿದ ಬೆಂಗಳೂರಿನ ಕೆಲವು ಪ್ರದೇಶಗಳು ಬುಧವಾರ ಕೊಂಚ ನಿರಾಳವಾಗಿದ್ದವು. ಜನರನ್ನು ಸ್ಥಳಾಂತರಿಸಲು ಮತ್ತು ಮುಳುಗಿರುವ ಪ್ರದೇಶಗಳಿಂದ ನೀರನ್ನು ಪಂಪ್ ಮಾಡಲು ಅಧಿಕಾರಿಗಳು ಪ್ರಯತ್ನಗಳನ್ನು ಹೆಚ್ಚಿಸಿದ್ದರು. ಆದರೂ ಸಹ, ಬುಧವಾರ ಭಾರೀ ಮಳೆ ಎದುರಿಸಲು ಬೆಂಗಳೂರು ಮತ್ತೊಮ್ಮೆ ಸಜ್ಜಾಗಿದೆ.
ಬೆಂಗಳೂರು ಇದುವರೆಗೆ ಅಂದರೆ 5 ದಶಕಗಳಲ್ಲೇ ಅತ್ಯಧಿಕ ಮಳೆಯನ್ನು ಎದುರಿಸುತ್ತಿದೆ ಎಂದು ವರದಿಯಾಗಿದೆ. ಇದು ಜೂನ್ 1 ರಿಂದ ಸರಾಸರಿಗಿಂತ ಶೇಕಡ 162 ಹೆಚ್ಚು ಮಳೆಯನ್ನು ತಂದಿದೆ. ಈ ವಾರದ ಆರಂಭದ ಎರಡು ದಿನಗಳ ನಿರಂತರ ಮಳೆ ರಾಜ್ಯ ರಾಜಧಾನಿಯಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಿತು. ಒಬ್ಬ ಮೃತಪಟ್ಟಿರುವುದಾಗಿ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ಕೂಡ ಬುಧವಾರ ಮಳೆ ನೀರಿನ ಹರಿವು ಕಡಿಮೆಯಾಗಿದೆ. ಆದರೆ, ಈಗ ಮತ್ತೆ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿರುವ ಕಾರಣ, ಅಲ್ಲಿ ಜನಜೀವನ ಸಹಜ ಸ್ಥಿತಿಗೆ ಸದ್ಯ ಬರುವುದು ಅನುಮಾನ.
ನಾವು ಈ ಪ್ರದೇಶಕ್ಕೆ ರೆಡ್ ಅಲರ್ಟ್ ನೀಡಿದ್ದೇವೆ. ಕೆಲವು ಪ್ರದೇಶಗಳಲ್ಲಿ ಒಂದು ಗಂಟೆಯಲ್ಲಿ 20 ಮಿಮೀಗಿಂತ ಹೆಚ್ಚು ಮಳೆ ಬೀಳಬಹುದು ಎಂದು ಹಿರಿಯ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಮಂಗಳವಾರ 43.1 ಮಿಮೀ ಮಳೆಯಾಗಿದೆ. ಇದು ಸರಾಸರಿಗಿಂತ ಶೇಕಡ 585 ಹೆಚ್ಚು. ರಾಯಿಟರ್ಸ್ ವರದಿಯ ಪ್ರಕಾರ, ಇ-ಕಾಮರ್ಸ್ ವಿತರಣಾ ಸಂಸ್ಥೆ ಡಂಜೊ ಅವರು ಪ್ರವಾಹ ಪ್ರದೇಶಗಳಲ್ಲಿ ವಿತರಣೆಯನ್ನು ನಿಲ್ಲಿಸಿದ್ದಾರೆ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲು ಟ್ರಕ್‌ಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.
ಏತನ್ಮಧ್ಯೆ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ತಮ್ಮ ಕ್ಷೇತ್ರದಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವಾಗ, ತಮ್ಮ ಕ್ಷೇತ್ರದಲ್ಲಿ ದೋಸೆ ಸವಿಯುತ್ತಿದ್ದಾರೆ ಮತ್ತು ಉಪಾಹಾರ ಗೃಹದ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರೋಲ್ ಮತ್ತು ಟೀಕೆೆ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಪದ್ಮನಾಭನಗರದ ಉಪಾಹಾರ ಗೃಹದಲ್ಲಿ ಬೆಣ್ಣೆ ಮಸಾಲೆ ದೋಸೆ ಮತ್ತು ಉಪ್ಪಿಟ್ಟು ತಿನ್ನುತ್ತಿರುವ 40 ಸೆಕೆಂಡ್‌ಗಳ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಅವರು ಗುಣಮಟ್ಟ ಮತ್ತು ರುಚಿಯನ್ನು ಶ್ಲಾಘಿಸಿದ್ದಾರೆ. ಜನರು ಬಂದು ಅಲ್ಲಿನ ಆಹಾರವನ್ನು ರುಚಿ ನೋಡುವಂತೆ ತೇಜಸ್ವಿ ಕೇಳಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿದೆ.
ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಕುರಿತು ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ, ಕಾಂಗ್ರೆಸ್‌ನ ರಾಷ್ಟ್ರೀಯ ಸಾಮಾಜಿಕ ಮಾಧ್ಯಮ ಸಹ-ಸಂಯೋಜಕಿ ಲಾವಣ್ಯ ಬಲ್ಲಾಳ್, ಈ ವಿಡಿಯೋ ಸೆಪ್ಟೆಂಬರ್ 5 ರಂದು ಅಪ್ಲೋಡ್ ಆಗಿರುವುದು. ಆಗ ನಗರದ ಹೆಚ್ಚಿನ ಭಾಗಗಳು ಜಲಾವೃತವಾಗಿವೆ ಎಂದು ಸೆಪ್ಟೆಂಬರ್ 5 ರಂದೇ ವಿಡಿಯೋ ಬಲ್ಲಾಳ್ ಟ್ವೀಟ್ ಮಾಡಿದ್ದರು.
ಬೆಂಗಳೂರಿನಲ್ಲಿ ಹಲವೆಡೆ ಸತತ ಎರಡನೆ ದಿನವೂ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸಂಚಾರ ದಟ್ಟಣೆ, ವಿದ್ಯುತ್ ಕಡಿತ, ನೀರಿನ ಸಮಸ್ಯೆ ಕೂಡ ಕಾಡಿದೆ. ಇವೆಲ್ಲದರ ನಡುವೆಯೂ ಮಳೆಯ ವಿಚಾರದಲ್ಲಿ ಬೆಂಗಳೂರಿಗೆ ಈ ವಾರ ಕೂಡ ಬಿಡುವೇ ಇಲ್ಲ. ಭಾರಿ ಮಳೆಯ ಬೀಳಬಹುದು ಎಂದು ಹವಾಮಾನ ಇಲಾಖೆ ಎರಡು ದಿನಗಳ ಹಿಂದೆಯೇ ಮುನ್ಸೂಚನೆ ನೀಡಿತ್ತು. - Bengaluru Rains: ಬೆಂಗಳೂರಿಗೆ ಬಿಡುವೇ ಇಲ್ಲ; ಈ ವಾರವೂ ಭಾರಿ ಮಳೆಯ ಮುನ್ಸೂಚನೆ
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.