Bengaluru Traffic advisory: ಏರ್ ಶೋ ಉಕ್ಕಿನ ಹಕ್ಕಿಗಳ ಕಲರವ, ಬೆಂಗಳೂರು ಟ್ರಾಫಿಕ್ ಅಲ್ಲೋಲ ಕಲ್ಲೋಲ, ಇಲ್ಲಿದೆ ಟ್ರಾಪಿಕ್ ಅಡ್ವೈಸರಿ
Feb 12, 2023 04:28 PM IST
Bengaluru Traffic advisory: ಏರ್ ಶೋ ಉಕ್ಕಿನ ಹಕ್ಕಿಗಳ ಕಲರವ, ಬೆಂಗಳೂರು ಟ್ರಾಫಿಕ್ ಅಲ್ಲೋಲ ಕಲ್ಲೋಲ, ಇಲ್ಲಿದೆ ಟ್ರಾಪಿಕ್ ಅಡ್ವೈಸರಿ
- Bengaluru Traffic updates: ಮುಂದಿನ ಐದು ದಿನಗಳ ಕಾಲ ವಿಮಾನ ನಿಲ್ದಾಣ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಟ್ರಾಫಿಕ್ ಅಡ್ವೈಸರಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ನಾಳೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ (Aero India 2023) ಉದ್ಘಾಟನೆಗೊಳ್ಳಲಿದ್ದು, ಯಲಹಂಕ ಸುತ್ತಮುತ್ತ ಸಂಚಾರದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿಯವರು ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಮುಂದಿನ ಐದು ದಿನಗಳ ಕಾಲ ವಿಮಾನ ನಿಲ್ದಾಣ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಸಂಚಾರ ಸಲಹೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನೂತನ ಟ್ರಾಫಿಕ್ ಅಡ್ವೈಸರಿ ಪ್ರಕಾರ ಈ ಮುಂದಿನಂತೆ ವಾಹನ ಚಾಲಕರು ಪ್ರಯಾಣ ಕೈಗೊಳ್ಳಬೇಕಿದೆ.
ಬೆಂಗಳೂರು ಟ್ರಾಫಿಕ್ ಅಡ್ವೈಸರಿ
- ನಾಳೆ ಯಲಹಂಕ ಸುತ್ತಮುತ್ತ ಸಂಚಾರ ದಟ್ಟನೆ ನಿಯಂತ್ರಿಸಲು ಸಾಕಷ್ಟು ಹೊಸ ನಿಯಮಗಳನ್ನು ಹಾಕಲಾಗಿದೆ. ಬೆಳಗ್ಗೆ ಬೆಳಗ್ಗೆ 8ರಿಂದ 11:30ವರೆಗೆ ಬಳ್ಳಾರಿ ರಸ್ತೆಯ ಎಸ್ಟೀಮ್ ಮಾಲ್ನಿಂದ ಎಲಿವೇಟೆಡ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
- ಏರ್ ಪೋರ್ಟ್‌ಗೆ ಹೋಗುವವರು ಹೆಣ್ಣೂರು ಜಂಕ್ಷನ್ ಮೂಲಕ ಪರ್ಯಾಯ ಮಾರ್ಗ ಬಳಸಬೇಕು.
- ನಾಳೆಯಿಂದ ಐದು ದಿನ ಬೃಹತ್ ವಾಹನಗಳಿಗೆ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ.
- ಬೆಂಗಳೂರು ಪೂರ್ವಭಾಗದಿಂದ ವಿಮಾನ ನಿಲ್ದದಾಣ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ವಿಮಾನ ನಿಲ್ದಾಣಕ್ಕೆ ತಲುಪಬಹುದು.
- ಪಶ್ಚಿಮ ಭಾಗದಿಂದ ಏರ್ಪೋರ್ಟ್ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ವಿಮಾನ ನಿಲ್ದಾಣ ತಲುಪಬಹುದು.
- ದೊಡ್ಡ ವಾಹನಗಳು ಪರ್ಯಾಯ ರಸ್ತೆಯ ಮೂಲಕ ಸಂಚಾರ ಕೈಗೊಳ್ಳಬೇಕು. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ದೊಡ್ಡ ವಾಹನಗಳು ಹಾಗೂ ಖಾಸಗಿ ವಾಹನಗಳು ದೇವನಹಳ್ಳಿ ಬಳಿ ದೊಡ್ಡಬಳ್ಳಾರಪುರ ಕ್ರಾಸ್ನಿಂದ ತಿರುವು ತೆಗೆದುಕೊಂಡು ರಾಷ್ಟ್ರೀಯ ಹೆದಾರಿ 4 ತುಮಕೂರು ಪುಣೆ ರಸ್ತೆ ಕಡೆಗೆ ಪ್ರಯಾಣ ಬೆಳೆಸಬಹುದಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
- ತುಮಕೂರು ರಸ್ತೆ ಕಡೆಯಿಂದ ಬರುವ ದೊಡ್ಡ ವಾಹನಗಳು ಸಿಎಂಟಿಐ ಜಂಕ್ಷನ್ ಬಳಿ ಡೈವರ್ಶನ್ ತೆಗೆದುಕೊಂಡು ರಿಂಗ್ ರಸ್ತೆಯತ್ತ ಸಾಗಿ ನೈಸ್ ರಸ್ತೆ ತಲುಪಬಹುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
- ನೆಲಮಂಗಲದಿಂದ ಬರುವವವರು ಸೊಂಡೇಕೊಪ್ಪ ರಸ್ತೆ ಮೂಲಕ ನೈಸ್ ರಸ್ತೆಗೆ ಹೋಗಬಹುದದಾಗಿದೆ.
- ತೋಟಗೆರೆ ಬಸವಣ್ಣ ದೇವಸ್ಥಾನ ಕಡೆಯಿಂದ ಬರುವ ವಾಹನಗಳು ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ಕಡೆಗೆ ಹೋಗಬಹುದು.
- ಚಿಕ್ಕಬಾಣಾವರ ಮೂಲಕ ಬರುವ ವಾಹನಗಳು ತೋಟಗೆರೆ ಬಸವಣ್ಣ ದೇವಸ್ಥಾನದತ್ತ ಯೂಟರ್ನ್ ಪಡೆದು ಅಲ್ಲಿಂದ ದೊಡ್ಡಬಳ್ಳಾಪುರ ದೇವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ತಲುಪಬಹುದು ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಅಪ್‌ಡೇಟ್ ನೀಡಿದ್ದಾರೆ.
ನಾಳೆಯಿಂದ ಐದು ದಿನಗಳ ಕಾಲ ಬೆಂಗಳೂರಿನ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಕಲರವ. ಫೆಬ್ರವರಿ 13ರಿಂದ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಜಗತ್ತಿನ ಪ್ರಮುಖ ಏರ್‌ಶೋಗಳಲ್ಲಿ ಒಂದಾದ ಏರೋ ಇಂಡಿಯಾವು ಬೆಂಗಳೂರಿನಲ್ಲಿ ಹದಿಮೂರು ಬಾರಿ ಯಶಸ್ವಿ ಪ್ರದರ್ಶನಗಳನ್ನು ನಡೆಸಿದೆ.