Bidar earthquakes: ಬೀದರ್ನಲ್ಲಿ 2 ಗಂಟೆಯಲ್ಲಿ 2 ಬಾರಿ ಲಘು ಭೂಕಂಪ
Nov 06, 2023 03:40 PM IST
ಭೂಕಂಪ (ಪ್ರಾತಿನಿಧಿಕ ಚಿತ್ರ)
- Bidar earthquake news: ಬೀದರ್ ಜಿಲ್ಲೆಯ ಮದರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಕೇರಾ ಗ್ರಾಮದಲ್ಲಿ ಮೊದಲು 1.9 ತೀವ್ರತೆಯ ಭೂಕಂಪನವಾಗಿದೆ. ಎರಡು ಗಂಟೆಗಳ ನಂತರ, ಅದೇ ಸ್ಥಳದಲ್ಲಿ 2.1 ತೀವ್ರತೆಯ ಮತ್ತೊಂದು ಕಂಪನವಾಗಿದೆ.
ಬೀದರ್: ಇಂದು ಮುಂಜಾನೆ (ನ.6 ಸೋಮವಾರ) ಬೀದರ್ ಜಿಲ್ಲೆಯಲ್ಲಿ ಎರಡು ಬಾರಿ ಲಘು ಭೂಕಂಪವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ 1.9 ಮತ್ತು 2.1ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಬೀದರ್ ಜಿಲ್ಲೆಯ ಮದರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಕೇರಾ ಗ್ರಾಮದಲ್ಲಿ ಮೊದಲು 1.9 ತೀವ್ರತೆಯ ಭೂಕಂಪನವಾಗಿದೆ. ಎರಡು ಗಂಟೆಗಳ ನಂತರ, ಅದೇ ಸ್ಥಳದಲ್ಲಿ 2.1 ತೀವ್ರತೆಯ ಮತ್ತೊಂದು ಕಂಪನವಾಗಿದೆ.
ಭೂಕಂಪದ ಕೇಂದ್ರದಿಂದ ಸುಮಾರು 25 ಕಿಲೋ ಮೀಟರ್ ದೂರದವರೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರ ತೀವ್ರತೆ ತುಂಬಾ ಕಡಿಮೆಯಿದೆ. ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ, ಆದರೆ ಈ ರೀತಿಯ ಭೂಕಂಪಗಳು ಸ್ಥಳೀಯ ಜನರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಹೇಳಿದೆ.
ಮೊನ್ನೆಯಷ್ಟೇ (ನ.3) ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪವಾಗಿದ್ದು, 157 ಮಂದಿ ಮೃತಪಟ್ಟಿದ್ದಾರೆ. 8 ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ್ದು, ಸುಮಾರು 8 ಸಾವಿರ ಮನೆಗಳು ಧ್ವಂಸವಾಗಿವೆ. ನೂರಾರು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನೇಪಾಳದಲ್ಲಿನ ಭೂಕಂಪಕ್ಕೆ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.
ವಿಭಾಗ