logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Meet In Murudeshwar: ಗೆದ್ದು ಅಧಿಕಾರ ಚುಕ್ಕಾಣಿ ಉಳಿಸುವುದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

BJP meet in Murudeshwar: ಗೆದ್ದು ಅಧಿಕಾರ ಚುಕ್ಕಾಣಿ ಉಳಿಸುವುದು ಅನಿವಾರ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

HT Kannada Desk HT Kannada

Dec 20, 2022 12:59 PM IST

google News

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.

  • BJP meet in Murudeshwar: ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅವರು ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಬೆಂಗಳೂರು: ಕೇಂದ್ರ- ರಾಜ್ಯ ಸರಕಾರಗಳ ಸಾಧನೆಗಳನ್ನು ನಾವು ಜನರಿಗೆ ತಿಳಿಸಿದ್ದೇವೆಯೇ? ಎಂದು ಕೇಳಿದರಲ್ಲದೇ ಸ್ವಾಭಿಮಾನಿ ಭಾರತದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ. ಅದಕ್ಕಾಗಿ ಬೂತ್ ಗೆಲುವು, ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳನ್ನು ಚುರುಕುಗೊಳಿಸಬೇಕಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಂಗಳವಾರ ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಮತ್ತು ರಾಜ್ಯ ಸಮಿತಿಗಳ ಜತೆಗೂಡಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಕಿಸಾನ್ ಸಮ್ಮಾನ್ ಯೋಜನೆ ಬಡವರ ಮನೆಗೆ ಅರ್ಜಿ ಕೊಡದೆ ಬರುತ್ತಿದೆ. ರೈತರ ಜಾಗೃತಿ ಮಾಡಬೇಕು. ಆಯುಷ್ಮಾನ್ ಸೇರಿ ಎಲ್ಲ ಯೋಜನೆಗಳ ಕುರಿತು ನೆನಪಿಸಬೇಕಿದೆ. ಮೀಸಲಾತಿ ಪ್ರಮಾಣ ಹೆಚ್ಚಳ, ಉಚಿತ ವಿದ್ಯುತ್, ವಿದ್ಯಾನಿಧಿ ಸೇರಿ ವಿವಿಧ ಯೋಜನೆಗಳ ಕುರಿತ ಮಾಹಿತಿ ಕೊಡಬೇಕಿದೆ ಎಂದು ಅವರು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಟೀಕೆಗೆ ಸ್ಪಷ್ಟ ಉತ್ತರ ಕೊಡುವುದನ್ನು ರೂಢಿಸಿಕೊಳ್ಳಿ

ನರೇಂದ್ರ ಮೋದಿ ಅವರ ಕುರಿತು ಟೀಕೆ ಮಾಡುವವರಿಗೆ ಸ್ಪಷ್ಟ ಉತ್ತರ ಕೊಡಬೇಕಿದೆ. ಅಂತಹ ಪ್ರವೃತ್ತಿಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಚಿವ ಪೂಜಾರಿ ಹೇಳಿದರು.

ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ವೀರ ಸಾವರ್ಕರ್ ಫೋಟೋ ಅನಾವರಣ ಗಂಡುಮೆಟ್ಟಿನ ನೆಲದ ತಾಕತ್ತು ಎಂದು ವಿಶ್ಲೇಷಿಸಿದರು.

ಜನಪರ- ಬಡವರ ಪರ ಯೋಜನೆಗಳ ಅನುಷ್ಠಾನದ ಕುರಿತು ತಿಳಿಸಬೇಕು. ಅರ್ಥಗರ್ಭಿತ ಯೋಜನೆಗಳ ಕುರಿತು ಪ್ರತಿಕ್ರಿಯೆ ಪಡೆಯಬೇಕು. ಇದು ಮತವಾಗಿ ಪರಿವರ್ತನೆ ಆಗುವಂತಾಗಲಿ. ಅಂಥ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಲಹೆ ನೀಡಿದರು.

ಬಿಜೆಪಿಯ ಜನಪರ ಆಡಳಿತದ ಕಡೆಗೆ ಜನರ ಒಲವು

ಬಿಜೆಪಿ ಬಗ್ಗೆ ಅನುಮಾನ ಪಡುತ್ತಿದ್ದ ದಲಿತ ಮುಖಂಡರು, ದಲಿತ ಜನಾಂಗ, ಪರಿಶಿಷ್ಟ ಜಾತಿ, ಪಂಗಡಗಳೀಗ ಬಿಜೆಪಿಯತ್ತ ಆಕರ್ಷಿತವಾಗುತ್ತಿವೆ. ಇದನ್ನು ಮತವಾಗಿ ಪರಿವರ್ತಿಸುವ ಹೊಣೆಯನ್ನು ನಾವು ಹೊರಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬಿಜೆಪಿ ಆಡಳಿತವು ಗ್ರಾಮ ಪಂಚಾಯಿತಿ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಮಾಡಿದ್ದನ್ನು ತಿಳಿಸಬೇಕಿದೆ. ರಾಜ್ಯಾಧ್ಯಕ್ಷರ ಸಲಹೆ ಮೇರೆಗೆ ಗೌರವಧನವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. 90 ಸಾವಿರಕ್ಕೂ ಹೆಚ್ಚು ಜನರಿಗೆ ಇದರ ಪ್ರಯೋಜನ ಲಭಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಇದಕ್ಕಾಗಿ 138 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರ ಪ್ರಯೋಜನ ಪಡೆಯಬೇಕಲ್ಲವೇ ಎಂದು ಪದಾಧಿಕಾರಿಗಳನ್ನು ಸಚಿವ ಪೂಜಾಋಿ ಪ್ರಶ್ನಿಸಿದರು.

ಬೇಹಗಾರಿಕೆ ದಳಗಳು ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಗೆಲುವಿನ ಸೂಚನೆ ನೀಡುತ್ತಿವೆ. ಬಿಜೆಪಿ 150 ಸೀಟು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ನಾಯಕ್, ಶಾಸಕರಾದ ಸುನೀಲ್ ನಾಯ್ಕ, ದಿನಕರ್ ಶೆಟ್ಟಿ, ರೂಪಾಲಿ ನಾಯ್ಕ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗಮನಿಸಬಹುದಾದ ಇತರ ಸುದ್ದಿಗಳು

Pakistan toffee with beef: ಉದಯಪುರದಲ್ಲಿ ತಲ್ಲಣ ಸೃಷ್ಟಿಸಿದ ಪಾಕಿಸ್ತಾನಿ ಟೋಫಿ; ವಶಪಡಿಸಿಕೊಂಡು ಪರಿಶೀಲನೆಗೆ ಕಳುಹಿಸಿದ ಆಹಾರ ಇಲಾಖೆ

Beef in toffees: ಉದಯಪುರದಲ್ಲಿ ಪಾಕಿಸ್ತಾನ್‌ ಉತ್ಪಾದಿತ ಟೋಫಿಗಳು ಮಾರಾಟ ಆಗುತ್ತಿವೆ. ಅದರಲ್ಲಿ ಬೀಫ್‌ ಇದೆ. ನೋಡದೇ ತಿನ್ನಬೇಡಿ. ಕೆಂಪು ಚುಕ್ಕೆ ಇರುವುದನ್ನು ಗಮನಿಸಿ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ.

Mercedes car robbed: ಮೂತ್ರ ವಿಸರ್ಜನೆಗೆ ಇಳಿದ ಮರ್ಸಿಡೆಸ್‌ ಮಾಲೀಕ; ಕತ್ತಿಗೆ ಚೂರಿ ಇಟ್ಟು ಕಾರು ಹೊತ್ತೊಯ್ದ ದರೋಡೆಕೋರರು!

Mercedes car robbed: ಇದು ಗುರುಗ್ರಾಮದಲ್ಲಿ ನಡೆದ ಘಟನೆ. ಮೂತ್ರ ವಿಸರ್ಜನೆಗೆ ಎಂದು ಮರ್ಸಿಡೆಸ್‌ ನಿಲ್ಲಿಸಿ ಕೆಳಗಿಳಿದ ಮಾಲೀಕನ ಕತ್ತಿಗೆ ಚೂರಿ ಇಟ್ಟು ಬೆದರಿಸಿ ಕಾರನ್ನು ದರೋಡೆಕೋರರು ಹೊತ್ತೊಯ್ದ ಘಟನೆ ವರದಿಯಾಗಿದೆ. ಇದರ ವಿವರ ಇಲ್ಲಿದೆ. ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ