Bengaluru BMTC: ಹೊಸದಾಗಿ 921 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಬಿಎಂಟಿಸಿ ಒಪ್ಪಂದ
Dec 26, 2022 11:50 AM IST
ಬಿಎಂಟಿಸಿ
- ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್, ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ. ಅಲ್ಲದೆ ಮುಂದಿನ 12 ವರ್ಷಗಳ ಅವಧಿಗೆ ನಗರದಲ್ಲಿ ಅವುಗಳ ಓಡಾಟದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಅದಕ್ಕೆ ನೀಡಲಾಗುತ್ತದೆ.
ಬೆಂಗಳೂರು ನಗರದ ಜೀವನಾಡಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಶುಕ್ರವಾರ ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ನಗರಕ್ಕೆ 921 ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆಯಲು ಸಿದ್ಧತೆ ನಡೆಸಿದೆ
ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್, ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ. ಅಲ್ಲದೆ ಮುಂದಿನ 12 ವರ್ಷಗಳ ಅವಧಿಗೆ ನಗರದಲ್ಲಿ ಅವುಗಳ ಓಡಾಟದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಅದಕ್ಕೆ ನೀಡಲಾಗುತ್ತದೆ.
ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ. ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ನಗರದಲ್ಲಿ ರಸ್ತೆಗಿಳಿಸಲು ಪ್ರೋತ್ಸಾಹ ನೀಡುವ FAME-II ಯೋಜನೆಯಡಿ ಈ ಒಪ್ಪಂದವನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.
"FAME-II ಯೋಜನೆಯಲ್ಲಿ ಬೆಂ.ಮ.ಸಾ.ಸಂಸ್ಥೆಯು ಮತ್ತು M/s. ಟಿ. ಎಮ್.ಎಲ್ ಸ್ಮಾರ್ಟ್ ಸಿಟಿ ಮೋಬಿಲಿಟಿ ಸೊಲ್ಯೂಷನ್ ಲಿಮಿಟೆಡ್ ರವರೊಂದಿಗೆ 921 ವಿದ್ಯುತ್ ಚಾಲಿತ ವಾಹನಗಳ ಪೂರೈಸುವ ಒಪ್ಪಂದಕ್ಕೆ ಸಹಿ ಮಾಡಲಾಯಿತು," ಎಂದು ಬಿಎಂಟಿಸಿ ಟ್ವೀಟ್ ಮಾಡಿದೆ.
“ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯು ತನ್ನ ಪ್ರಯಾಣಿಕರಿಗೆ ಉತ್ತಮ ಮತ್ತು ಪರಿಸರ ಸ್ನೇಹಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ತನ್ನ ಬತ್ತಳಿಕೆಗೆ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯ ಮುಂದುವರಿಕೆಯ ಭಾಗವಾಗಿ, ಇಂದು (16.12.2022) ಒಪ್ಪಂದಕ್ಕೆ ಸಹಿ ಹಾಕಿದೆ,” ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಆಟೋಮೊಬೈಲ್ ದೈತ್ಯದ ಪ್ರತ್ಯೇಕ ಹೇಳಿಕೆಯ ಪ್ರಕಾರ, ಟಾಟಾ ಮೋಟಾರ್ಸ್ ಇಲ್ಲಿಯವರೆಗೆ ಭಾರತದ ಅನೇಕ ನಗರಗಳಲ್ಲಿ 730ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಿದೆ. ಅವುಗಳು ಈವರೆಗೆ ಒಟ್ಟು 55 ಮಿಲಿಯನ್ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸಂಚರಿಸಿವೆ.
ಭಾರತದಲ್ಲಿ ತಯಾರಾದ ಟಾಟಾ ಸ್ಟಾರ್‌ಬಸ್ ಎಲೆಕ್ಟ್ರಿಕ್, 12 ಮೀಟರ್ ಉದ್ದದ ವಾಹನವಾಗಿದ್ದು, ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಉತ್ತಮ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದೆ.
ಗಮನಿಸಬಹುದಾದ ಇತರೆ ಸುದ್ದಿಗಳು
ಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಗ್ರಾಮೀಣ ಜನರಿಗೆ ಮಾನಸಿಕ ಆರೋಗ್ಯ ಸೇವೆ: ಸುಧಾಕರ್
ಗ್ರಾಮೀಣ ಪ್ರದೇಶಗಳ ಜನರ ನರ ಸಂಬಂಧಿ, ಮಾನಸಿಕ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಕೌನ್ಸಿಲಿಂಗ್, ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ಅನಾರೋಗ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ: ಸಿಎಂ ಬೊಮ್ಮಾಯಿ
ಸುಮಾರು 2 ಲಕ್ಷ ಕೋಟಿಯ ಬಂಡವಾಳ ಹೂಡಿಕೆ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹರಿದುಬಂದಿದ್ದು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ