ಸ್ಟಿಕ್ಕರ್ ನೋಡಿ ಮರುಳಾಗಬೇಡಿ, ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ, ವೈರಲ್ ವಿಡಿಯೋ
Nov 02, 2024 08:33 PM IST
ಸ್ಟಿಕ್ಕರ್ ನೋಡಿ ಮರುಳಾಗಬೇಡಿ, ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ. (ಸಾಂಕೇತಿಕ ಚಿತ್ರ)
ಉತ್ತಮ ಆರೋಗ್ಯಕ್ಕಾಗಿ ದಿನಕ್ಕೊಂದು ಸೇಬುಹಣ್ಣು ತಿನ್ನಿ ಎಂದು ವೈದ್ಯರು ಹೇಳೋದನ್ನು ಕೇಳಿರಬಹುದು. ಆದರೆ, ಆಪಲ್ ಮೇಲಿನ ಸ್ಟಿಕ್ಕರ್ ನೋಡಿ ಮರುಳಾಗಬೇಡಿ. ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ. ಮರೆತರೆ ಮೋಸ ಹೋಗುವುದು ಗ್ಯಾರೆಂಟಿ. ಹೇಗೆ ಅನ್ನೋದು ಗೊತ್ತಾಗಬೇಕಾದರೆ ಇಲ್ಲಿರುವ ವೈರಲ್ ವಿಡಿಯೋ ಗಮನಿಸಿ.
ಬೆಂಗಳೂರು: ಬದಲಾದ ಕಾಲಘಟ್ಟದಲ್ಲಿ ಲಾಭಕೋರತನ ಹೆಚ್ಚಾಗಿದ್ದು, ಆರೋಗ್ಯದ ಬಗ್ಗೆ ಬಹಳ ಕಾಳಜಿ ಕಡಿಮೆಯಾಗಿದೆ. ಬಹುತೇಕ ವ್ಯಾಪಾರಿಗಳು ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿವಹಿಸುವುದಿಲ್ಲ. ಅವರದೇನಿದ್ದರೂ ವ್ಯಾಪಾರ, ಲಾಭ ನಷ್ಟಗಳ ಲೆಕ್ಕಾಚಾರ ಅಷ್ಟೆ. ಗ್ರಾಹಕರ ಆರೋಗ್ಯಕ್ಕೇನಾದರೂ ಆದರೆ ಅವರಿಗೇನು? ಈ ಮನೋಭಾವ ಹೆಚ್ಚಾಗಿರುವ ಕಾರಣ ಗ್ರಾಹಕರು ಅಂದರೆ ನಾವೇ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯದ ವಿಚಾರ ಬಂದಾಗ ಸೇಬುಹಣ್ಣು ಬಹುಬೇಗ ಗಮನಸೆಳೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೊಂದು ಸೇಬುಹಣ್ಣು ತಿನ್ನಿ ಎಂದು ವೈದ್ಯರು ಹೇಳೋದನ್ನು ಕೇಳಿರಬಹುದು. ಹಾಗಂತ ಮಾರುಕಟ್ಟೆಗೆ ಹೋಗಿ ಕೈಗೆ ಸಿಕ್ಕ ಸೇಬು ಹಣ್ಣು ತಂದು ತಿನ್ನಬೇಡಿ. ಹಾಗೆ ಮಾಡಿದರೂ ಅಪಾಯ ಕಟ್ಟಿಟ್ಟ ಬುತ್ತಿ. ತಾಜಾ ಅಥವಾ ಫ್ರೆಶ್ ಅಥವಾ ಇನ್ಯಾವುದಾದರೂ ಸ್ಟಿಕ್ಕರ್ ಇರುವ ಸೇಬು ಗ್ರಾಹಕರ ಮನೆಸೆಳಯೋದು ಬೇಗ. ಅವುಗಳನ್ನೇ ಆಯ್ದು ತೂಕ ಮಾಡಿಸಿಕೊಂಡು ಮನೆಗೆ ಹೋಗುವುದು ವಾಡಿಕೆ. ಎರಡನೇ ಆಲೋಚನೆಯೇ ಇರಲ್ಲ. ಆದರೆ ಇನ್ನು ಹೀಗೆ, ಸ್ಟಿಕ್ಕರ್ ನೋಡಿ ಮರುಳಾಗಬೇಡಿ, ಸೇಬುಹಣ್ಣು ಖರೀದಿಸುವ ಮೊದಲು ಈ ಕೆಲಸ ಮರೆಯಬೇಡಿ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ ವೈರಲ್ ವಿಡಿಯೋ ನೋಡಿ.
ಸೇಬು ಹಣ್ಣಿನ ಮೇಲೆ ಸ್ಟಿಕ್ಕರ್ - ವೈರಲ್ ವಿಡಿಯೋ
ತತ್ತ್ವಂ ಅಸಿ ಎಂಬ ಬಳಕೆದಾರರು ಶೇರ್ ಮಾಡಿದ ವೈರಲ್ ವಿಡಿಯೋ ಗಮನಸೆಳೆದಿದೆ. ಅವರು, “ಇದು ಏನು? ಜಿಹಾದ್‌ನ ಇನ್ನೊಂದು ರೂಪವಾ? ಅವರು ಯಾವುದೋ ವಿಷವನ್ನು ಚುಚ್ಚುಮದ್ದು ಮಾಡಿ ಸ್ಟಿಕ್ಕರ್‌ನಿಂದ ಮುಚ್ಚಿರುವಂತೆ ತೋರುತ್ತಿದೆ. ಖರೀದಿಸುವ ಮೊದಲು ಬಹಳ ಎಚ್ಚರಿಕೆಯಿಂದ ಪರಿಶೀಲಿಸಿ” ಎಂದು ಸ್ಟೇಟಸ್ ಕೂಡ ಹಾಕಿದ್ದಾರೆ. ಇನ್ನು ವಿಡಿಯೋ ಗಮನಿಸಿದರೆ, ಸೇಬು ಹಣ್ಣಿನ ಮೇಲೆ ಇರುವ ಸ್ಟಿಕ್ಕರ್ ತೆಗೆದಾಗ ಅಲ್ಲೊಂದು ಕಪ್ಪು ಚುಕ್ಕೆ ಕಂಡುಬಂದಿದೆ. ಪ್ರತಿ ಸೇಬು ಹಣ್ಣು ತೆಗೆದುಕೊಂಡು ಅದರ ಮೇಲಿನ ಸ್ಟಿಕ್ಕರ್ ತೆಗೆದು ತೋರಿಸುವ ದೃಶ್ಯ ವಿಡಿಯೋದಲ್ಲಿದೆ. ಸ್ಟಿಕ್ಕರ್ ಹಿಂಬದಿ ಸೂಚಿ ಚುಚ್ಚಿದ ಗುರುತು ಇದ್ದು, ಅದರ ಸುತ್ತ ಕಪ್ಪು ಬಣ್ಣವೂ ಇದೆ. ಅದೇನು ಎಂಬುದು ಗೊತ್ತಿಲ್ಲ. ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 200ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.
ಜನರ ಪ್ರತಿಕ್ರಿಯೆ ಹೀಗಿದೆ ನೋಡಿ
ಬಹುತೇಕ ಎಲ್ಲ ಹಣ್ಣುಗಳ ಹೋಲ್‌ಸೇಲ್ ಮಾರಾಟಗಾರರು ವಿಶೇಷವಾಗಿ ಬಾಳೆಹಣ್ಣು ಮತ್ತು ಸೇಬುಹಣ್ಣುಗಳೆಲ್ಲವೂ ಇಂತಹ ಅಪಾಯವನ್ನು ಉಂಟುಮಾಡುವಂಥವೇ ಆಗಿವೆ. ಎಂದಿಗೂ ಸ್ಟಿಕ್ಕರ್ ಅಂಟಿಸಿದ ಇಂಡಿಯನ್ (ಕಾಶ್ಮೀರ್/ ಕಿನ್ನೌರ್) ಆಪಲ್ ಖರೀದಿಸಬೇಡಿ. ಅವುಗಳ ಹಿಂದೆ ಕೇಡು ಅಡಗಿದೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಅದಾನಿ ಆಪಲ್ ಇಲ್ಲವೇ ಇಲ್ಲ. ಸ್ಟಿಕ್ಕರ್ ಮೇಲೆ ಅದಾನಿ ಹೆಸರು ನೋಡಿ ಖುಷಿಯಿಂದ ಸೇಬುಹಣ್ಣು ಖರೀದಿಸಬೇಡಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಉತ್ಪ್ರೇಕ್ಷೆಯ ಅಗತ್ಯವಿಲ್ಲ. ವರ್ಷಗಳ ಹಿಂದೆ, ಆಮದು ಮಾಡಿದ ಸೇಬುಗಳು, ಕಿವೀಸ್, ಇತ್ಯಾದಿ. "ಆಮದು ಮಾಡಿಕೊಂಡ" ಹಣ್ಣು ಎಂಬ ಸ್ಟಿಕ್ಕರ್‌ಗಳನ್ನು ಹಾಕಿ ಮಾರಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೆಲವು ವ್ಯಾಪಾರಿಗಳು ಹಾಳಾದ ಹಣ್ಣುಗಳ ಭಾಗವನ್ನು ಮರೆಮಾಡಲು ಸ್ಟಿಕ್ಕರ್ ಬಳಸಲಾರಂಭಿಸಿದರು. ಇಂಜೆಕ್ಷನ್ ಸೂಜಿ ಚುಚ್ಚಿದರೆ ಅಷ್ಟುದೊಡ್ಡ ರಂಧ್ರವಾಗುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪವನ್ ಕುಮಾರ್ ಎಂಬುವವರು ಕಾಮೆಂಟ್ ಮಾಡುತ್ತ, “ಗ್ರಾಹಕರು ಲೇಬಲ್ ಮಾಡಿದ ಸೇಬುಗಳು ಚೆನ್ನಾಗಿ ಶ್ರೇಣೀಕರಿಸಲ್ಪಟ್ಟಿವೆ ಎಂದು ಭಾವಿಸುತ್ತಾರೆ. ವ್ಯಾಪಾರಿಗಳು ಅಂತಹ ಲೇಬಲ್ ಸ್ಟಿಕ್ಕರ್‌ಗಳೊಂದಿಗೆ ಆ ರಂಧ್ರವನ್ನು ಮರೆಮಾಡುತ್ತಾರೆ. ವಾಸ್ತವದಲ್ಲಿ ಭಾರತೀಯ ಸೇಬುಗಳು ತುಂಬಾ ತಾಜಾವಾಗಿರುತ್ತವೆ, ಲೇಪಿತವಾಗಿರುತ್ತವೆ, ಆದ್ದರಿಂದ ಸೇವಿಸಲು ಆರೋಗ್ಯಕರವಾಗಿರುತ್ತವೆ. ಮತ್ತು ನೆನಪಿಡಿ - ಹಾನಿಕಾರಕ ರಾಸಾಯನಿಕಗಳೊಂದಿಗೆ ಸಿಂಪಡಿಸದ ಕೀಟಗಳಿಂದ ರಂಧ್ರಗಳು ಉಂಟಾಗುತ್ತವೆ” ಎಂದು ಹೇಳಿದ್ದಾರೆ.