logo
ಕನ್ನಡ ಸುದ್ದಿ  /  ಕರ್ನಾಟಕ  /  ಇನ್ಮೇಲೆ ಬೆಂಗಳೂರಲ್ಲಿ ಕಾರ್‌ಪೂಲಿಂಗ್ ಮಾಡಿದ್ರೆ ಬೀಳತ್ತೆ 10 ಸಾವಿರದವರೆಗೆ ದಂಡ; ನಿಷೇಧ ಯಾಕೆ?

ಇನ್ಮೇಲೆ ಬೆಂಗಳೂರಲ್ಲಿ ಕಾರ್‌ಪೂಲಿಂಗ್ ಮಾಡಿದ್ರೆ ಬೀಳತ್ತೆ 10 ಸಾವಿರದವರೆಗೆ ದಂಡ; ನಿಷೇಧ ಯಾಕೆ?

Meghana B HT Kannada

Oct 01, 2023 04:41 PM IST

google News

ಬೆಂಗಳೂರಲ್ಲಿ ಕಾರ್‌ಪೂಲಿಂಗ್ ನಿಷೇಧ

    • Carpooling banned in Bengaluru: ನಗರದಲ್ಲಿ ಕಾರ್‌ಪೂಲಿಂಗ್ ಅನ್ನು ಕಾನೂನುಬಾಹಿರಗೊಳಿಸಲಾಗಿದ್ದು, ಇನ್ಮೇಲೆ ಯಾರಾದರೂ ಕಾರ್‌ಪೂಲಿಂಗ್ ಸೇವೆಗಳನ್ನು ನಿರ್ವಹಿಸುವುದು ಕಂಡುಬಂದಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ 6 ತಿಂಗಳವರೆಗೆ ಆರ್​ಸಿ (ವಾಹನ ನೋಂದಣಿ ಪ್ರಮಾಣಪತ್ರ) ನಿರ್ಬಂಧಿಸಲಾಗುತ್ತದೆ. 
ಬೆಂಗಳೂರಲ್ಲಿ ಕಾರ್‌ಪೂಲಿಂಗ್ ನಿಷೇಧ
ಬೆಂಗಳೂರಲ್ಲಿ ಕಾರ್‌ಪೂಲಿಂಗ್ ನಿಷೇಧ

ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ಅನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಶನಿವಾರ (ಸೆ.30) ಪ್ರಕಟಿಸಿದ್ದು, ಕಾರ್‌ಪೂಲಿಂಗ್ ಅಪ್ಲಿಕೇಶನ್‌ ಬಳಿಸಿ ಪ್ರಯಾಣ ಮಾಡದಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ಟ್ಯಾಕ್ಸಿ ಚಾಲಕರ ಸಂಘಗಳಿಂದ ಸರ್ಕಾರಕ್ಕೆ ದೂರು ಬಂದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಗರದಲ್ಲಿ ಕಾರ್‌ಪೂಲಿಂಗ್ ಅನ್ನು ಕಾನೂನುಬಾಹಿರಗೊಳಿಸಲಾಗಿದ್ದು, ಇನ್ಮೇಲೆ ಯಾರಾದರೂ ಕಾರ್‌ಪೂಲಿಂಗ್ ಸೇವೆಗಳನ್ನು ನಿರ್ವಹಿಸುವುದು ಕಂಡುಬಂದಲ್ಲಿ 5 ಸಾವಿರದಿಂದ 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ ಹಾಗೂ 6 ತಿಂಗಳವರೆಗೆ ಆರ್​ಸಿ (ವಾಹನ ನೋಂದಣಿ ಪ್ರಮಾಣಪತ್ರ) ನಿರ್ಬಂಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಏನಿದು ಕಾರ್‌ಪೂಲಿಂಗ್? ನಿಷೇಧ ಯಾಕೆ?

ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಕಾರ್‌ಪೂಲಿಂಗ್ ಸೇವೆ ಲಭ್ಯವಿದೆ. ಒಬ್ಬ ವ್ಯಕ್ತಿ ಮಾತ್ರ ಒಂದು ಕಾರಿನಲ್ಲಿ ಹೋಗುವ ಬದಲು ಅದೇ ಮಾರ್ಗದಲ್ಲಿ ಹೋಗುವ ಇತರರನ್ನೂ ಕೂರಿಸಿಕೊಂಡು, ನಿರ್ದಿಷ್ಟ ಪ್ರಯಾಣದ ಮೊತ್ತ ಶೇರ್​ ಮಾಡಿಕೊಂಡು ಪ್ರಯಾಣಿಸುವುದೇ ಕಾರ್‌ಪೂಲಿಂಗ್ ಆಗಿದೆ. ಇದು ಪೀಕ್ ಅವರ್‌ಗಳಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬೆಂಗಳೂರಿನಲ್ಲಿ ಅನೇಕರು, ವಿಶೇಷವಾಗಿ ಐಟಿ ಉದ್ಯೋಗಿಗಳು ಕಾರ್‌ಪೂಲಿಂಗ್ ಸೇವೆಯ ಮೊರೆ ಹೋಗಿದ್ದಾರೆ.

ಆದರೆ ಈಗ ಕಾರ್‌ಪೂಲಿಂಗ್ ನಿಷೇಧ ಮಾಡಲು ಕಾರಣವಿದೆ. ವೈಟ್ ಬೋರ್ಡ್ ಇರುವ ಖಾಸಗಿ ವಾಹನಗಳನ್ನು ಲಾಭಕ್ಕಾಗಿ ಕಾರ್​​ಪೂಲಿಂಗ್​​ಗೆ ಬಳಸಿಕೊಳ್ಳಲಾಗುತ್ತಿದ್ದು, ಇದು ಇತರ ಟ್ಯಾಕ್ಸಿ ಹಾಗೂ ಆಟೋ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಇದು ನಮ್ಮ ದೈನಂದಿನ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಟ್ಯಾಕ್ಸಿ ಸಂಘಗಳು ಹಾಗೂ ಆಟೋರಿಕ್ಷಾ ಚಾಲಕರ ಒಕ್ಕೂಟ ಸರ್ಕಾರಕ್ಕೆ ತಿಳಿಸಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವುದು ಆಟೋರಿಕ್ಷಾ ಚಾಲಕರ ಮತ್ತೊಂದು ಪ್ರಮುಖ ಬೇಡಿಕೆಯಾಗಿದ್ದು, ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿದ ನಂತರ ಪರಿಗಣಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪ್ರಸ್ತುತ, ಬ್ಲಾಬ್ಲಾ ಕಾರ್ ​(BlaBla Car), ಕ್ವಿಕ್​ ರೈಡ್​ (Quickride), ರೈಡ್​ ಶೇರ್​ (Rideshare), ಕಮ್ಯೂಟ್​ ಈಸಿ (Commute Easy), and ಕಾರ್​ಪೂಲ್​ ಅಡ್ಡಾ (Carpool Adda) - ಈ ಆ್ಯಪ್​ಗಳು ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ಸೇವೆಯನ್ನು ನಡೆಸುತ್ತಿವೆ. ಬೆಂಗಳೂರಿನಲ್ಲಿ 11 ಮಿಲಿಯನ್ ಜನಸಂಖ್ಯೆ ಇದ್ದರೆ, 12.5 ಮಿಲಿಯನ್ ವಾಹನಗಳು ನಗರದಲ್ಲಿವೆ. ಹೀಗಾಗಿ ಟ್ರಾಫಿಕ್​ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ