logo
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagar News: ಒಡಿಶಾ ರೈಲು ಅಪಘಾತ; ಗುಂಡ್ಲುಪೇಟೆಯ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರು

Chamarajanagar News: ಒಡಿಶಾ ರೈಲು ಅಪಘಾತ; ಗುಂಡ್ಲುಪೇಟೆಯ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರು

HT Kannada Desk HT Kannada

Jun 04, 2023 05:29 PM IST

google News

ಬೊಮ್ಮಲಾಪುರದ ಮಹೇಶ್ ಹಾಗೂ ಪವನ್

    • Gundlupet news: ಬೊಮ್ಮಲಾಪುರದ ಮಹೇಶ್ ಹಾಗೂ ಪವನ್ ಸೇನೆಯ ಪರೀಕ್ಷೆ ಬರೆಯಲು ಒಡಿಶಾಗೆ ತೆರಳಿದ್ದರು. ಸದ್ಯ ಇಬ್ಬರು ಯುವಕರು ಕೂಡ ಒಡಿಶಾದಿಂದ ತವರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.
ಬೊಮ್ಮಲಾಪುರದ ಮಹೇಶ್ ಹಾಗೂ ಪವನ್
ಬೊಮ್ಮಲಾಪುರದ ಮಹೇಶ್ ಹಾಗೂ ಪವನ್

ಗುಂಡ್ಲುಪೇಟೆ (ಚಾಮರಾಜನಗರ) : ಒಡಿಶಾ ರೈಲು ದುರಂತ ಪ್ರಕರಣದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಇಬ್ಬರು ಯುವಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬುವವರು ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದು ಬಂದಿದ್ದು. ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇವರಿಬ್ಬರು ಘಟನಾ ಸ್ಥಳದಿಂದ ತವರಿಗೆ ವಾಪಸ್ ಆಗಲು ಪ್ರಯಾಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನರಿತ ಗುಂಡ್ಲುಪೇಟೆ ಶಾಸಕರಾದ ಹೆಚ್ ಎಂ ಗಣೇಶ್ ಪ್ರಸಾದ್ ರವರು ಸಚಿವ ಸಂತೋಷ್ ಲಾಡ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರನ್ನು ವಾಪಸ್ಸು ಕರೆಸುವಂತೆ ಮನವಿ ಮಾಡಿ, ಅವರ ಖಾತೆಗಳಿಗೆ ತಲಾ 20,000 ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ಜಮೆ ಮಾಡಿ ಪರ್ಯಾಯ ಮಾರ್ಗದಲ್ಲಿ ತವರಿಗೆ ಹಿಂತಿರುಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಬೊಮ್ಮಲಾಪುರದ ಮಹೇಶ್ ಹಾಗೂ ಪವನ್ ಸೇನೆಯ ಪರೀಕ್ಷೆ ಬರೆಯಲು ಒಡಿಶಾಗೆ ತೆರಳಿದ್ದರು. ಸದ್ಯ ಇಬ್ಬರು ಯುವಕರು ಕೂಡ ಒಡಿಶಾದಿಂದ ತವರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ದೊರಕಿದೆ.

ವರದಿ: ಧಾತ್ರಿ ಭಾರದ್ವಾಜ್‌

ಮೂರು ರೈಲುಗಳ ಅಪಘಾತ

ಜೂನ್​ 2, ಶುಕ್ರವಾರ ಒಡಿಶಾದ ಬಾಲಾಸೋರ್​ನಲ್ಲಿ ಕೇವಲ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಮಾತ್ರ ಅಪಘಾತ ಸಂಭವಿಸಿದ್ದಲ್ಲ. ಬೆಂಗಳೂರಿನಿಂದ ಹೊರಟ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲೂ ಅಪಘಾತಕ್ಕೀಡಾಗಿತ್ತು.ರೈಲು ಅಪಘಾತದಲ್ಲಿ ಬರೋಬ್ಬರಿ 275 ಪ್ರಯಾಣಿಕರು ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಈ ರೈಲಿನಲ್ಲಿ ಅನೇಕ ಮಂದಿ ಕನ್ನಡಿಗರಿದ್ದರು. ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ನೇತೃತ್ವದ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಕನ್ನಡಿಗರ ಮೊದಲ ತಂಡ ಬಾಲಸೋರ್‌ನಿಂದ ಕರ್ನಾಟಕಕ್ಕೆ ಆಗಮಿಸಿದೆ.

ಅಪಘಾತಕ್ಕೀಡಾದ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿದ್ದ ಚಿಕ್ಕಮಗಳೂರಿನ 110 ಮಂದಿ ಪ್ರಯಾಣಿಕರು ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲಲೇ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಕಳಸದಿಂದ 110 ಮಂದಿ ಯಾತ್ರಿಕರ ತಂಡವು ಜೈನರ ಪವಿತ್ರ ಯಾತ್ರಾ ಸ್ಥಳವಾದ ಜಾರ್ಖಂಡ್‌ನ ಸಮ್ಮೇದ್ ಶಿಖರ್ಜಿಗೆ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ತೆರಳುತ್ತಿದ್ದರು.

ಇನ್ನು, ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಕ್ರೀಡಾಕೂಟಕ್ಕಾಗಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಚಾಂದ್​ ನಗರಕ್ಕೆ ಕರ್ನಾಟಕದ ವಾಲಿಬಾಲ್ ಆಟಗಾರರು ಮತ್ತು ತರಬೇತುದಾರರು ಸೇರಿದಂತೆ 32 ಮಂದಿ ತೆರಳಿದ್ದರು. ಆದರೆ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ್ದರಿಂದ ಇದೇ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಕ್ರೀಡಾಪಟುಗಳು ಕೋಲ್ಕತ್ತಾದಲ್ಲಿಯೇ ಉಳಿದುಕೊಂಡಿದ್ದರು.

ಇವರಿಗಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಮಾನದ ವ್ಯವಸ್ಥೆ ಮಾಡಿತ್ತು. ಇಂದು (ಜೂನ್​ 4, ಭಾನುವಾರ) ಕೋಲ್ಕತ್ತಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರೀಡಾಪಟುಗಳು ಬಂದಿಳಿದಿದ್ದು, ಅವರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ