logo
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagara News: ಗುಂಡ್ಲುಪೇಟೆಯಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ

Chamarajanagara News: ಗುಂಡ್ಲುಪೇಟೆಯಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ

HT Kannada Desk HT Kannada

Sep 23, 2023 11:38 AM IST

google News

ಗುಂಡ್ಲುಪೇಟೆಯಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ. (ಸಾಂದರ್ಭಿಕ ಚಿತ್ರ, HT PHOTO)

    • ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬುವವರಿಗೆ‌ ಸೇರಿದ ಮೂರು ಹಸುಗಳನ್ನು ಜಮೀನಿನಲ್ಲಿ ಮೆಯ್ಯಲು ಬಿಟ್ಟಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ ಮೂರು ಹಸುವಿನ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿ ಸಾಯಿಸಿದೆ.
ಗುಂಡ್ಲುಪೇಟೆಯಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ. (ಸಾಂದರ್ಭಿಕ ಚಿತ್ರ, HT PHOTO)
ಗುಂಡ್ಲುಪೇಟೆಯಲ್ಲಿ ಹುಲಿಯ ಅಟ್ಟಹಾಸಕ್ಕೆ ಮೂರು ಹಸು ಬಲಿ. (ಸಾಂದರ್ಭಿಕ ಚಿತ್ರ, HT PHOTO)

ಗುಂಡ್ಲುಪೇಟೆ(ಚಾಮರಾಜನಗರ): ಹುಲಿ ದಾಳಿ ನಡೆಸಿ ಮೂರು ಹಸುಗಳು ಬಲಿಯಾಗಿರುವ ಘಟನೆ ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಮಲ್ಲಮ್ಮನಹುಂಡಿ ಗ್ರಾಮದ ಗುರುಸಿದ್ದಪ್ಪ ಎಂಬುವವರಿಗೆ‌ ಸೇರಿದ ಮೂರು ಹಸುಗಳನ್ನು ಜಮೀನಿನಲ್ಲಿ ಮೆಯ್ಯಲು ಬಿಟ್ಟಿದ್ದ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ ಮೂರು ಹಸುವಿನ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿ ಸಾಯಿಸಿದೆ.

ಗುರುಸಿದ್ದಪ್ಪ ಅವರಿಗೆ ಸೇರಿದ ಮೂರು ಹಸುಗಳು ಸಾವನ್ನಪ್ಪಿರುವ ಹಿನ್ನಲೆ ರೈತನಿಗೆ ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದ್ದು, ಸಾಲದ ಸುಳಿಗೆ‌ ಸಿಲುಕುವಂತಾಗಿದೆ. ಆದ್ದರಿಂದ ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ರೈತರಾದ ಮಹದೇವಸ್ವಾಮಿ ಒತ್ತಾಯಿಸಿದ್ದಾರೆ.

ರೈತರ ಆಕ್ರೋಶ

ಮೂರು ಹಸುಗಳ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿರುವ ಹಿನ್ನಲೆ ಸುತ್ತಮುತ್ತಲ ರೈತರ ಭಯಭೀತರಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಕೂಡಲೇ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಅರಣ್ಯಾಧಿಕಾರಿಗಳ ಭೇಟಿ

ಹುಲಿ ದಾಳಿಗೆ ಮೂರು ಹಸು ಸಾವನ್ನಪ್ಪಿರುವ ಮಾಹಿತಿ ಅರಿತ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿಶೇಷ ರಕ್ಷಣಾ‌ ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿ ಸೆರೆಗೆ ಎರಡು ಬೋನ್ ಇರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ