logo
ಕನ್ನಡ ಸುದ್ದಿ  /  ಕರ್ನಾಟಕ  /  Bullet Train: ಮೈಸೂರು-ಬೆಂಗಳೂರು ನಡುವೆ ಬುಲೆಟ್‌ ರೈಲು ಯಾವಾಗ? ಸಮಗ್ರ ವರದಿ ಸಲ್ಲಿಸಲು ಸೂಚನೆ

Bullet Train: ಮೈಸೂರು-ಬೆಂಗಳೂರು ನಡುವೆ ಬುಲೆಟ್‌ ರೈಲು ಯಾವಾಗ? ಸಮಗ್ರ ವರದಿ ಸಲ್ಲಿಸಲು ಸೂಚನೆ

HT Kannada Desk HT Kannada

Jul 30, 2022 07:32 AM IST

google News

ಮೈಸೂರು-ಬೆಂಗಳೂರು ನಡುವೆ ಬುಲೆಟ್‌ ರೈಲು ಯಾವಾಗ? ಡಿಪಿಆರ್‌ ಸಲ್ಲಿಸಲು ಸೂಚನೆ

    • ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೂರು ಗಂಟೆಗಳಲ್ಲಿ ಪ್ರಯಾಣಿಸಬಹುದಾದ ಬುಲೆಟ್‌ ರೈಲು ಯೋಜನೆ ಕುರಿತು ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರವು ಆದೇಶ ನೀಡಿದೆ. ಸರಕಾರವು ಈ ಕುರಿತು ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೆ ಕಾರ್ಪೊರೇಷನ್‌ಗೆ ಆದೇಶ ನೀಡಿದ್ದು, ಈ ಕುರಿತು ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ಮೈಸೂರು-ಬೆಂಗಳೂರು ನಡುವೆ ಬುಲೆಟ್‌ ರೈಲು ಯಾವಾಗ? ಡಿಪಿಆರ್‌ ಸಲ್ಲಿಸಲು ಸೂಚನೆ
ಮೈಸೂರು-ಬೆಂಗಳೂರು ನಡುವೆ ಬುಲೆಟ್‌ ರೈಲು ಯಾವಾಗ? ಡಿಪಿಆರ್‌ ಸಲ್ಲಿಸಲು ಸೂಚನೆ

ಬೆಂಗಳೂರು: ಕರ್ನಾಟಕದ ಮೊದಲ ಬುಲೆಟ್‌ ರೈಲು ಕನಸು ಶೀಘ್ರದಲ್ಲಿ ನನಸಾಗುವ ನಿರೀಕ್ಷೆಯಿದೆ. ಏಕೆಂದರೆ, ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೂರು ಗಂಟೆಗಳಲ್ಲಿ ಪ್ರಯಾಣಿಸಬಹುದಾದ ಬುಲೆಟ್‌ ರೈಲು ಯೋಜನೆ ಕುರಿತು ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರವು ಆದೇಶ ನೀಡಿದೆ. ಸರಕಾರವು ಈ ಕುರಿತು ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೆ ಕಾರ್ಪೊರೇಷನ್‌ಗೆ ಆದೇಶ ನೀಡಿದ್ದು, ಈ ಕುರಿತು ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

ಎಲ್ಲಾದರೂ ಈ ಯೋಜನೆ ಆರಂಭಗೊಂಡು ರೈಲು ಪ್ರಯಾಣ ಆರಂಭವಾದರೆ ಕೇವಲ ಮೂರು ಗಂಟೆಗಳಲ್ಲಿ ಮೈಸೂರಿನಿಂದ ಚೆನ್ನೈಗೆ ತಲುಪಲಿದೆ. ಮೈಸೂರು ಮತ್ತು ಬೆಂಗಳೂರನ್ನು ಕೇವಲ 45 ನಿಮಿಷಗಳಲ್ಲಿ ತಲುಪಬಹುದಾಗಿದೆ. ಬೆಂಗಳೂರಿನಿಂದ ಕೇವಲ ಎರಡೇ ಎರಡು ಗಂಟೆಗಳಲ್ಲಿ ಚೆನ್ನೈ ತಲುಪಬಹುದಾಗಿದೆ. ಇದು ಚೆನ್ನೈನಿಂದ ಬೆಂಗಳೂರಿಗೆ ಬರುವವರಿಗೆ ಮತ್ತು ಬೆಂಗಳೂರಿನಿಂದ ಚೆನ್ನೈಗೆ ಬರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ, ಬೆಂಗಳೂರು ಮೈಸೂರು ನಡುವೆ ಓಡಾಡುವವರಿಗೂ ಅನುಕೂಲವಾಗಲಿದೆ.

ಈಗಾಗಲೇ ಬೆಂಗಳೂರು-ಮೈಸೂರು ನಡುವೆ ದಶಪಥ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದ್ದು, ಇದೇ ರಸ್ತೆಗೆ ಹೊಂದಿಕೊಂಡಂತೆ ಬುಲೆಟ್‌ ಟ್ರೇನ್‌ಗೂ ರಸ್ತೆ ನಿರ್ಮಿಸುವ ಸಾಧ್ಯತೆಯಿದೆ. "ಯೋಜನೆಗೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರಕಾರ ಒದಗಿಸಲಿದೆ. ಇದಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಯೋಜನೆಗೆ ಭೂಮಿ ಒದಗಿಸುವ ಸ್ವರೂಪದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದುʼʼ ಎಂದು ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

ಸುಮಾರು 1.15 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಬುಲೆಟ್‌ ರೈಲು ಯೋಜನೆ ಆರಂಭಗೊಳ್ಳಲಿದ್ದು, ಈ ಯೋಜನೆಗೆ ಕೇಂದ್ರ ಸರಕಾರವೇ ಹಣ ಹೂಡಲಿದೆ. ಈಗಾಗಲೇ ಅಹಮದಾಬಾದ್‌- ಮುಂಬೈ ನಡುವೆ ಬುಲೆಟ್‌ ರೈಲು ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ಸದ್ಯದಲ್ಲಿಯೇ ಭೂ ಸ್ವಾಧೀನ ಕುರಿತು ಮಹತ್ವದ ತೀರ್ಮಾನ ಹೊರಬೀಳಲಿದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ಈಗಾಗಲೇ ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆಗೆ ಶೇಕಡ 89ರಷ್ಟು ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈಗಾಗಲೇ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ವಿಳಂಬವಾಗುತ್ತಿದ್ದು, ಈ ಯೋಜನೆ ಶೀಘ್ರದಲ್ಲಿ ಮುಕ್ತಾಯಗೊಳ್ಳಲು ಕೊರೊನಾ ಸಾಂಕ್ರಾಮಿಕವೂ ತಡೆಯಾಗಿತ್ತು ಎಂದು ಅವರು ಇತ್ತೀಚೆಗೆ ಲೋಕಸಭೆಗೆ ಮಾಹಿತಿ ನೀಡಿದ್ದರು.

ದೇಶದ ಮೊದಲ ಬುಲೆಟ್‌ ರೈಲು ಸೇವೆಯು ಗುಜರಾತ್‌ನ ಸೂರತ್‌ ಮತ್ತು ಬಿಲಿಮೊರಾ ನಗರಗಳ ನಡುವೆ 2026ರ ಮೊದಲು ಆರಂಭವಾಗುವ ನಿರೀಕ್ಷೆಯನ್ನು ಅಶ್ವಿನಿ ವೈಷ್ಣವ್‌ ವ್ಯಕ್ತಪಡಿಸಿದ್ದಾರೆ. ಪ್ರತಿಗಂಟೆಗೆ 308 ಕಿ.ಮೀ. ವೇಗದಲ್ಲಿ ಈ ಬುಲೆಟ್‌ ರೈಲುಗಳು ಸಂಚರಿಸಲಿವೆ. ಅಹಮದಾಬಾದ್‌ನಿಂಧ 508 ಕಿ.ಮೀ. ದೂರದಲ್ಲಿರುವ ಮುಂಬೈ ನಗರವನ್ನು 3 ಗಂಟೆಗಳಲ್ಲಿ ಕ್ರಮಿಸಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ