logo
ಕನ್ನಡ ಸುದ್ದಿ  /  ಕರ್ನಾಟಕ  /  New Year Celebrations: ಹೊಸ ವರ್ಷಾಚರಣೆ: ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹೇರಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ

New year celebrations: ಹೊಸ ವರ್ಷಾಚರಣೆ: ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಹೇರಿದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ

HT Kannada Desk HT Kannada

Dec 27, 2023 12:41 PM IST

google News

ಹೊಸ ವರ್ಷದ ಮುನ್ನಾ ದಿನ ಸಂಜೆ ನಂತರ ನಂದಿ ಬೆಟ್ಟ ಭೇಟಿಗೆ ಅವಕಾಶವಿಲ್ಲ.

    • Nandi hills ಕಾನೂನು ಮತ್ತು ಸುವ್ಯವಸ್ಥೆ ಕಾರಣದಿಂದ ಹೊಸ ವರ್ಷಾಚರಣೆ ಮುನ್ನಾ ದಿನ ನಂದಿಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹೊಸ ವರ್ಷದ ಮುನ್ನಾ ದಿನ ಸಂಜೆ ನಂತರ ನಂದಿ ಬೆಟ್ಟ ಭೇಟಿಗೆ ಅವಕಾಶವಿಲ್ಲ.
ಹೊಸ ವರ್ಷದ ಮುನ್ನಾ ದಿನ ಸಂಜೆ ನಂತರ ನಂದಿ ಬೆಟ್ಟ ಭೇಟಿಗೆ ಅವಕಾಶವಿಲ್ಲ.

ಬೆಂಗಳೂರು: ಈ ಬಾರಿಯ ಹೊಸ ವರ್ಷಾಚರಣೆಗೆ ನೀವು ನಂದಿಬೆಟ್ಟಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಇಲ್ಲಿ ಗಮನಿಸಿ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಹೊಸ ವರ್ಷಾಚರಣೆಯ ಮುನ್ನಾ ದಿನ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಸಂಜೆ 6 ಗಂಟೆವರೆಗೂ ಪ್ರವಾಸಿಗರಿಗೆ ನಿಷೇಧ ಮಾಡಿದೆ.

ಈ ಕುರಿತು ಆದೇಶ ಹೊರಡಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಜಾರಿ ಮಾಡಲಾಗಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರು, ಸಾರ್ವಜನಿಕರ ಪ್ರವೇಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಡಿ.31ರ ಸಂಜೆ 6ರಿಂದ 2024ರ ಜ.1ರ ಬೆಳಿಗ್ಗೆ 6ರವರೆಗೆ ಪ್ರವೇಶ ನಿಷೇಧದ ಜತೆಗೆ ಗಿರಿಧಾಮದಲ್ಲಿನ ಅತಿಥಿಗೃಹಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವುದನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಅನತಿ ದೂರದಲ್ಲಿರುವ ನಂದಿ ಗಿರಿಧಾಮ ಪ್ರಮುಖ ಪ್ರವಾಸಿ ತಾಣ. ಇಲ್ಲಿ ನಿತ್ಯ ನೂರಾರು ಪ್ರವಾಸಿಗರು ಬೆಂಗಳೂರು ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಆಗಮಿಸುತ್ತಾರೆ. ಇಲ್ಲಿ ಮೋಜು ಮಸ್ತಿ ಮಾಡುವ ನೆಪದಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಳ್ಳಬಾರದು ಎನ್ನುವ ಕಾರಣ ನೀಡಿ ಜಿಲ್ಲಾಡಳಿತ ಹಿಂದಿನಿಂದಲೂ ನಂದಿ ಬೆಟ್ಟದಲ್ಲಿ ಹೊಸ ವರ್ಷ ಹಾಗೂ ವಿಶೇಷ ಸಂದರ್ಭದಲ್ಲಿ ಪ್ರವೇಶ ನಿಷೇಧಿಸುತ್ತಾ ಬಂದಿದೆ. ಈ ಬಾರಿಯೂ ಈ ಆದೇಶ ಜಾರಿಯಾಗಿದೆ.

ಹಿಂದೆ ಹಲವು ಬಾರಿ ಹೊಸ ವರ್ಷವನ್ನು ಸ್ವಾಗರಿಸುವ ಭರದಲ್ಲಿ ಕೆಲವರು ಅನಾಹುತ ಮಾಡಿಕೊಂಡ ಉದಾಹರಣೆಗಳೂ ಇಲ್ಲಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೊಂದರೆ ಮಾಡಿಕೊಳ್ಳದಿರಲಿ ಎನ್ನುವ ಉದ್ದೇಶದಿಂದಲೂ ಈ ಆದೇಶ ಜಾರಿಯಾಗಿದೆ.

ಹೊಸ ವರ್ಷವನ್ನು ರಾತ್ರಿ ಬೆಟ್ಟದಲ್ಲಿ ಆಚರಿಸಲು ಅವಕಾಶ ಇರುವುದಿಲ್ಲ. ಬದಲಿಗೆ ಹೊಸ ವರ್ಷದ ದಿನದಂದು ಸಹಜವಾಗಿ ಆಗಮಿಸಿ ಇಲ್ಲಿನ ಸೌಂದರ್ಯವನ್ನು ಸವಿಯಲು ಅವಕಾಶವಿದೆ. ಹೊಸ ವರ್ಷದ ದಿನ ನಂದಿ ಬೆಟ್ಟದ ಭೇಟಿಗೆ ಯಾವುದೇ ಅಡ್ಡಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ